
ನವದೆಹಲಿ (ಆ.15) ಜಮ್ಮು ಮತ್ತು ಕಾಶ್ಮೀರದವಲ್ಲಿ ಉಗ್ರರ ವಿರುದ್ದ ಭಾರತೀಯ ಸೇನೆ ಕಾರ್ಯಾಚರಣೆ ವೇಳೆ ಕಮಾಂಡೋ ಡಾಗ್ ಟೈಸನ್‌ಗೆ ಗುಂಡು ತಾಗಿತ್ತು. ಆದರೂ ಉಗ್ರರ ಸುಳಿವನ್ನು ಸೇನೆಗೆ ನೀಡಿದ ಟೈಸನ್ ಶ್ವಾನಕ್ಕೆ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಸೇನಾ ಸನ್ಮಾನ ಘೋಷಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಟೈಸನ್ ಶ್ವಾನಕ್ಕೆ ಮೆನ್ಶನ್ ಇನ್ ಡಿಸ್ಪಾಚಸ್ ಗೌರವ ನೀಡಲಾಗಿದೆ. ಲ್ಯಾಬ್ರಡಾರ್ ರಿಟ್ರಿವರ್ ತಳಿ ಈ ಶ್ವಾನ ಭಾರತೀಯ ಸೇನೆಯ ಕಾರ್ಯಾಚರಣೆ ತೋರಿದ ಧೈರ್ಯ ಹಾಗೂ ಸಾಹಸಕ್ಕೆ ಗೌರವ ನೀಡಲಾಗಿದೆ.
ಯುದ್ಧ ಅಥವಾ ಕಾರ್ಯಾಚರಣೆ ವೇಳೆ ತೋರುವ ಅತ್ಯುನ್ನತ ಸಾಹಸ, ಧೈರ್ಯ,ಕರ್ತವ್ಯ ನಿಷ್ಠೆ, ಶೌರ್ಯ ಪ್ರದರ್ಶಿಸುವ ಸೇನಾ ಸಿಬ್ಬಂದಿಗಳು, ಶ್ವಾನಕ್ಕೆ ಮೆನ್ ಇನ್ ಡಿಸ್ಪಾಚಸ್ ಗೌರವ ನೀಡಲಾಗುತ್ತದೆ. ಈ ಮೂಲಕ ಗೌರವಕ್ಕೆ ಪಾತ್ರವಾದ ಕೆಲವೇ ಕೆಲವು ಶ್ವಾನಗಳ ಪಟ್ಟಿಗೆ ಟೈಸನ್ ಸೇರಿಕೊಂಡಿದೆ.
ಭಾರತೀಯ ಸೇನೆಯ ಲೆಫ್ಟಿನೆಂಟ್ ಗವರ್ನರ್ ಮಿಲಿಟರಿ ಇಂಟಲಿಜೆನ್ಸ್ ಹಾಗೂ ಆರ್ಮಿ ಡಾಗ್ ವಿಭಾಗದ ಕಮಾಂಡೋ ಈ ಟೈಸನ್. ವಿಶೇಷ ತರಬೇತಿ ಪಡೆದ ಶ್ವಾನ ಇದಾಗಿದೆ. ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ, ಉಗ್ರರ ನಡುವಿನ ಗುಂಡಿನ ಚಕಮಕಿ, ಉಗ್ರರ ವಿರುದ್ಧ ಕೂಂಬಿಂಗ್ ಸೇರಿದಂತೆ ಪ್ರಮುಖ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸುವಂತೆ ಈ ಶ್ವಾನಕ್ಕೆ ತರಬೇತಿ ನೀಡಲಾಗಿತ್ತು. 2026ರ ಫೆಬ್ರವರಿಯಲ್ಲಿ ಕಾಶ್ಮೀರದ ಕಿಶ್ವ್ತಾರ್‌ನಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆ ವೇಳೆ ಟೈಸನ್ ತೋರಿದ ಧೈರ್ಯ ಹಾಗೂ ಸಾಹಸಕ್ಕೆ ದೇಶವೇ ಸಲಾಂ ಹೇಳಿತ್ತು.
ಉಗ್ರರು ದಟ್ಟವಾದ ಕಾಡಿನ ಅಡಗುತಾಣಗಳಲ್ಲಿ ಅಡಗಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದರು. ಉಗ್ರರ ವಿರುದ್ದ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ದಟ್ಟ ಕಾಡಿನಲ್ಲಿ ಉಗ್ರರ ಜಾಡನ್ನು ಹಿಡಿದು ಟೈಸನ್ ಮುಂದೆ ಸಾಗಿತ್ತು. ಟೈಸನ್ ಹಿಂದೆ ಭಾರತೀಯ ಯೋಧರು ಸಾಗಿದ್ದರು. ರಹಸ್ಯವಾಗಿದ್ದ ಉಗ್ರರ ಸುಳಿವನ್ನು ಭಾರತೀಯ ಸೇನೆಗೆ ಟೈಸನ್ ನೀಡಿತ್ತು. ಇತ್ತ ಭಾರತೀಯ ಯೋಧರು ಗುಂಡಿನ ಮೂಲಕ ಯೋಧರಿಗೆ ಉತ್ತರ ನೀಡುತ್ತಿದ್ದಂತೆ ಉಗ್ರರು ಪ್ರತಿದಾಳಿ ನಡೆಸಿದ್ದಾರೆ. ಆದರೆ ಉಗ್ರರು ಚಲಿಸುತ್ತಿದ್ದ ದಿಕ್ಕಿನತ್ತ ನಿಖರವಾಗಿ ಟೈಸನ್ ಸಾಗಿತ್ತು. ಹೀಗಾಗಿ ಟೈಸನ್ ಕಾಲುಗಳಿಗೆ ಗುಂಡು ತಗುಲಿತ್ತು. ಆದರೂ ಉಗ್ರರ ಸಂಪೂರ್ಣ ಜಾಡನ್ನು ಭಾರತೀಯ ಯೋಧಿರಿಗೆ ನೀಡಲಾಗಿತ್ತು.
ಸತತ ಗುಂಡಿನ ಚಕಮಕಿ ಮೂಲಕ ಭಾರತೀಯ ಸೇನೆ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ಇತ್ತ ತೀವ್ರವಾಗಿ ಗಾಯಗೊಂಡಿದ್ದ ಟೈಸನ್‌ಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆ ದಾಖಲಿಸಲಾಗಿತ್ತು. ಕಾಲುಗಳಿಗೆ ಗುಂಡು ತಗುಲಿದ ಕಾರಣ ಚೇರಿಸಿಕೊಳ್ಳಲು ಸುದೀರ್ಘ ದಿನಗಳು ಬೇಕಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ