ಅಪ್ರಚೋದಿತ ದಾಳಿಗೆ ಒರ್ವ ಯೋಧ ಹುತಾತ್ಮ, ಪ್ರತೀಕಾರಕ್ಕೆ ಪಾಕ್ ಸೇನಾ ಪೋಸ್ಟ್ ಧ್ವಂಸ ಮಾಡಿದ ಭಾರತ!

Published : Jun 12, 2020, 03:03 PM ISTUpdated : Jan 18, 2022, 03:24 PM IST
ಅಪ್ರಚೋದಿತ ದಾಳಿಗೆ ಒರ್ವ ಯೋಧ ಹುತಾತ್ಮ, ಪ್ರತೀಕಾರಕ್ಕೆ ಪಾಕ್ ಸೇನಾ ಪೋಸ್ಟ್ ಧ್ವಂಸ ಮಾಡಿದ ಭಾರತ!

ಸಾರಾಂಶ

ಗಡಿ ನಿಯಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದರಲ್ಲಿ ಪಾಕಿಸ್ತಾನ ಎತ್ತಿದ ಕೈ. ಇತ್ತ ಒಂದೊಂದು ಹೆಜ್ಜೆ ಇಡುತ್ತಾ, ಭಾರತೀಯ ಯೋಧರ ಜೊತೆ ಕೈ-ಕೈ ಮಿಲಾಯಿಸಿ ಅತಿಕ್ರಮಣ ಮಾಡುವುದರಲ್ಲಿ ಚೀನಾ ಮುಂದಿದೆ. ಇದೀಗ ಪಾಕಿಸ್ತಾನ ಗಡಿಯಲ್ಲಿ ಉದ್ಧಟತನ ತೋರಿದೆ. ಶೆಲ್, ಗುಂಡಿನ ಮೂಲಕ ದಾಳಿ ನಡೆಸಿದೆ. ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಭಾರತ, ಗಡಿಯಲ್ಲಿನ ಪಾಕಿಸ್ತಾನ ಸೇನಾ ಪೋಸ್ಟ್‌ಗಳನ್ನೇ ದ್ವಂಸ ಮಾಡಿದೆ.

ಜಮ್ಮು ಕಾಶ್ಮೀರ(ಜೂ.12): ಕೊರೋನಾ ವೈರಸ್‌ ಹಾಗೂ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ನಲುಗಿಲ ಹೋಗಿದೆ. ಕೊರೋನಾ ವಿರುದ್ಧ ಹೋರಾಡುವುದನ್ನು ಬಿಟ್ಟು, ಪಾಕಿಸ್ತಾನ ಗಡಿಯಲ್ಲಿ ಭಾರತದ ಜೊತೆ ಕಾಲು ಕೆರೆದು ನಿಂತಿದೆ. ಜಮ್ಮು ಕಾಶ್ಮೀರದ ರಜೌರಿ ವಲಯದಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.  ರಾತ್ರಿ 10 ಗಂಟೆಯಿಂದ 11 ಗಂಟೆ ವರೆಗೆ ಪಾಕಿಸ್ತಾನ ಸೇನೆ ಭಾರತದ ಗಡಿಯೊಳಕ್ಕೆ ಶೆಲ್, ಗುಂಡಿನ ಮೂಲಕ ದಾಳಿ ನಡೆಸಿದೆ. 

ಶೋಪಿಯಾನ್ ಎನ್‌ಕೌಂಟರ್; 24 ಗಂಟೆಯಲ್ಲಿ 9 ಉಗ್ರರ ಹೊಡೆದುರಳಿಸಿದ ಭಾರತೀಯ ಸೇನೆ

ಪಾಕಿಸ್ತಾನ ದಿಢೀರ್ ಗಡಿ ನಿಯಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಕಾರಣ ಒರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾರೆ. ಇದರಿಂದ ಕೆರಳಿದ ಭಾರತೀಯ ಸೇನೆ, ಗಡಿ ಭಾಗಗಳಾದ ರಜೌರಿ, ಪೂಂಚ್, ಕಥುವಾ, ಕೆರಿ, ಮಂಜಾಕೋಟ್, ಬಾಲಾಕೋಟ್ ಹಾಗೂ ಕರೋಲ್ ವಲಯದಲ್ಲಿ ತಕ್ಕ ತಿರುಗೇಟು ನೀಡಿದೆ. ಭಾರತೀಯ ಸೇನೆ, ಈ ಗಡಿ ಪ್ರದೇಶದಲ್ಲಿ ನಿರ್ಮಿಸಿದ್ದ ಪಾಕಿಸ್ತಾನ ಸೇನಾ ಪೋಸ್ಟ್‌ಗಳನ್ನು ಧ್ವಂಸ ಮಾಡಿದೆ. 

ನದಿಗೆ ಹಾರಿ ಗರ್ಭಿಣಿ ಜಿಂಕೆ ರಕ್ಷಿಸಿದ ಭಾರತೀಯ ಸೇನಾ ಯೋಧರು!

ಪಾಕಿಸ್ತಾನ ಸೇನೆ, ಭಾರತೀಯ ನಾಗರೀಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದನ್ನು ಯಾವತ್ತೂ ಭಾರತ ಸಹಿಸುವುದಿಲ್ಲ. ಈ ಹಿಂದೆ ಹಲವು ಬಾರಿ ಗಡಿ ನಿಯಮ ಉಲ್ಲಂಘಿಸಿ ಉದ್ದಟತನ ತೋರಿರುವ ಪಾಕಿಸ್ತಾನ ಸೇನೆಗೆ ಸರಿಯಾದ ಉತ್ತರ ನೀಡಲಾಗಿದೆ. ಇದೀಗ ಗಡಿ ನಿಯಂತ್ರಣ ರೇಖೆ ಬಳಿ ಇರುವ ಪಾಕಿಸ್ತಾನ ಸೇನಾ ಪೋಸ್ಟ್‌ಗಳನ್ನು ಧ್ವಂಸ ಮಾಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪಾಕಿಸ್ತಾನ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲ ಶಾಂತಿ ಕದಡುವ ಯತ್ನಕ್ಕೆ ಪಾಕಿಸ್ತಾನ ಕೈ ಹಾಕಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೇನೆ ಹೇಳಿದೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ