8 ಗಂಟೆ ಆಟೋ ಪ್ರಯಾಣ; ಕೊರೋನಾ ಗುಣಮುಖಳನ್ನು ಮನೆಗೆ ತಲುಪಿಸಿದ ಚಾಲಕಿಗೆ ಸಿಎಂ ಸನ್ಮಾನ!

Suvarna News   | Asianet News
Published : Jun 12, 2020, 02:34 PM ISTUpdated : Jun 12, 2020, 04:25 PM IST
8 ಗಂಟೆ ಆಟೋ ಪ್ರಯಾಣ; ಕೊರೋನಾ ಗುಣಮುಖಳನ್ನು ಮನೆಗೆ ತಲುಪಿಸಿದ ಚಾಲಕಿಗೆ ಸಿಎಂ ಸನ್ಮಾನ!

ಸಾರಾಂಶ

ಕೊರೋನಾ ವೈರಸ್ ಸೋಂಕಿತರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ನಿಜ. ಆದರೆ ಅವರನ್ನು ಅಸ್ಪೃಶ್ಯರಂತೆ ಕಾಣುವುದು ತಪ್ಪು. ಹೀಗೆ ಕೊರೋನಾದಿಂದ ಮುಖಮುಖರಾದ ಹುಡುಗಿಯನ್ನು ಆಸ್ಪತ್ರೆಯಿಂದ ಮನೆಗೆ ತಲುಪಿಸಲು ಯಾವ ಟ್ಯಾಕ್ಸಿ ಚಾಲಕನೂ ಮುಂದೆ ಬಂದಿಲ್ಲ. ಈ ವೇಳೆ ಮಹಿಳಾ ಆಟೋ ಚಾಲಕಿ ಸಾಹಸ ಮಾಡಿದ್ದಾಳೆ. ಇದೀಗ ಚಾಲಕಿ ಸಾಹಸಕ್ಕೆ ಮಣಿಪುರ ಸಿಎಂ 1 ಲಕ್ಷ ರೂಪಾಯಿ ನಗದು ನೀಡಿ ಸನ್ಮಾನಿಸಿದ್ದಾರೆ. ಆಟೋ ಚಾಲಕಿಯ ಯಶೋಗಾಥೆ ಇಲ್ಲಿದೆ.

ಮಣಿಪುರ(ಜೂ.12): ಕೊರೋನಾ ವೈರಸ್ ತಗುಲದಂತೆ ಎಚ್ಚರ ವಹಿಸುವುದು ಮುಖ್ಯ. ಸಾಮಾಜಿಕ ಅಂತರ, ಶುಚಿತ್ವ, ಮಾಸ್ಕ್ ಧರಣೆ ಹೀಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅಷ್ಟೇ ಮುಖ್ಯ. ಆದರೆ ಕೊರೋನಾ  ಸೋಂಕಿತರನ್ನು ಅಪರಾಧಿಗಳ ರೀತಿ ಕಾಣುವುದು ತಪ್ಪು. ಮಣಿಪುರದಲ್ಲಿ  ಈ ರೀತಿಯ ಘಟನೆಯೊಂದು ನಡೆದಿದೆ. ಕೋಲ್ಕತಾದಲ್ಲಿ ಮಣಿಪುರಕ್ಕೆ ಆಗಮಿಸಿದ್ದ ಮಹಿಳೆಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಜವಾಹರ್ ಲಾಲ್ ನೆಹರೂ ಮೆಡಿಕಲ್ ಆಸ್ಪತ್ಪೆಯಲ್ಲಿ ದಾಖಲಾಗಿದ್ದರು. 

ಆಘಾತಕಾರಿ ಸುದ್ದಿ: 'ರಾಜ್ಯದಲ್ಲಿ ಶೇ.97 ರಷ್ಟು ಕೊರೋನಾ ಸೋಂಕಿತರಿಗೆ ರೋಗ ಲಕ್ಷಣಗಳೇ ಇಲ್ಲ'

ಚಿಕಿತ್ಸೆಯಿಂದ ಚೇತರಿಸಿಕೊಂಡ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕೊರೋನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ ಮಹಿಳೆಯನ್ನು ಆಸ್ಪತ್ರೆಯಿಂದ 100 ಕಿ.ಮೀ ದೂರದಲ್ಲಿರುವ ತನ್ನ ಮನೆಗೆ ತಲುಪಿಸಲು ಯಾವ ಟ್ಯಾಕ್ಸಿ ಕೂಡ ಮುಂದೆ ಬರಲಿಲ್ಲ. ಕೊರೋನಾ ತಗುಲಿಸಿಕೊಂಡವರ ಸಹವಾಸವೇ ಬೇಡ,  100 ಕಿ.ಮೀ ಪ್ರಯಾಣ ಸಾಧ್ಯವಿಲ್ಲ. ನಾವು ಹಿಂದಿರುಗಿ ಬರುವಾಗ ಹಿಂದಿನಂತೆ ಬಾಡಿಗೆ ಸಿಗುವುದಿಲ್ಲ...ಹೀಗೆ ಅನೇಕ ಕಾರಣಗಳನ್ನು ಕೊಟ್ಟ ಟ್ಯಾಕ್ಸಿ ಚಾಲಕರು, ಗುಣಮುಖರಾದ ಮಹಿಳೆಯಗೆ ಟ್ಯಾಕ್ಸಿ ಸೇವೆ ನೀಡಲು ನಿರಾಕರಿಸಿದರು.

ಪಾಸ್‌ ಸಿಗದೇ ಚೆಕ್‌ಪೋಸ್ಟ್ ಗಡಿಯಲ್ಲಿ ಮದುವೆ!

ಈ ವೇಳೆ ಮಹಿಳಾ ಆಟೋ ಚಾಲಕಿ ಲೈಬಿ ಒಯ್ನಮ್, ಧೈರ್ಯವಾಗಿ ಮುಂದೆ ಬಂದಿದ್ದಾರೆ. ಮೇ. 31ರ ರಾತ್ರಿ ತನ್ನ ಆಟೋದಲ್ಲಿ ಬರೋಬ್ಬರಿ 100 ಕಿ.ಮೀ ಪ್ರಯಾಣ ಆರಂಭಿಸಿದ ಲೈಬಿ ಒಯ್ನಮ್, ಮರುದಿನ ಅಂದರೆ ಜೂನ್ 1 ರ ಮುಂಜಾನೆ ಮಹಿಳೆಯ ಮನೆ ತಲುಪಿದ್ದಾಳೆ. ಸತತ 8 ಗಂಟೆ ಪ್ರಯಾಣದ ಮೂಲಕ ಅದೂ ಕೂಡ ಮಧ್ಯ ರಾತ್ರಿ ಯಾವುದೇ ಅಳುಕಿಲ್ಲದೆ, ಗುಣಮುಖಳಾದ ಮಹಿಳೆಯನ್ನು ಮನೆ ತಲುಪಿಸಿದ್ದಾರೆ.

ಒಯ್ನಮ್ ಸಾಹಸ ಮೆಚ್ಚಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್, 1,10,000 ರೂಪಾಯಿ ನೀಡಿ ಸನ್ಮಾನಿಸಿದ್ದಾರೆ. ಮಧ್ಯ ರಾತ್ರಿಯೂ ಅಗತ್ಯ ಸೇವೆ ನೀಡಿದ್ದು ಮಾತ್ರವಲ್ಲ,  ಮಣಿಪುರದಲ್ಲಿ ಹೆಣ್ಣಮಕ್ಕಳು ರಾತ್ರಿ ವೇಳೆಯೂ ಯಾವುದೇ ಆತಂಕವಿಲ್ಲದೆ ಸುರಕ್ಷಿತವಾಗಿ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಹೀಗಾಗಿ ರಾಜ್ಯದ ಉದ್ಯಮಿಗಳು ಒಯ್ನಮ್‌ಗೆ ಸನ್ಮಾನದ ರೂಪದಲ್ಲಿ ಹಣ ನೀಡಿದ್ದಾರೆ. ಈ ಹಣವನ್ನು ಒಯ್ನಮ್‌ಗೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಒಯ್ನಮ್ ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಮನೆಯಲ್ಲಿ ಆರ್ಥಿಕ ಸಂಕಷ್ಟ, ಕೌಟುಂಬಿಕ ಸಮಸ್ಯೆಗಳಿಂದ ಆಟೋ ರಿಕ್ಷಾ ಮೂಲಕ ಜೀವನ ಸಾಗಿಸುತ್ತಿದ್ದಾಳೆ. ಇಷ್ಟೇ ಅಲ್ಲ ಒಯ್ನಮ್ ಆದಾಯದಿಂದಲೇ ಕುಟುಂಬದ ನಿರ್ವಹಣೆ ಮಾಡಲಾಗುತ್ತಿದೆ. ತನ್ನ ಸೇವೆಯನ್ನು ಗುರುತಿಸಿ ಆರ್ಥಿಕ ಸಹಾಯ ಮಾಡಿದ ಮುಖ್ಯಮಂತ್ರಿ ಹಾಗೂ ಉದ್ಯಮಿಗಳಿಗೆ ಒಯ್ನಮ್ ಕೃತಜ್ಞತೆ ಅರ್ಪಿಸಿದ್ದಾರೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ