
ನವದೆಹಲಿ(ಆ.09): ಸ್ವದೇಶಿ ನಿರ್ಮಿತ ಮೊದಲ ಯುದ್ಧ ವಿಮಾನ ಸಾಗಣೆ ನೌಕೆ- ವಿಕ್ರಾಂತ್ ಐದು ದಿನಗಳ ಮೊದಲ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಗಿ ಪೂರ್ಣಗೊಳಿಸಿದೆ.
ನೌಕೆ ಬುಧವಾರ ತನ್ನ ಯಾನವನ್ನು ಆರಂಭಿಸಿತ್ತು. ನೌಕೆಯ ಪ್ರಾಯೋಗಿಕ ಸಂಚಾರ ಉದ್ದೇಶಿತ ರೀತಿಯಲ್ಲಿ ನೆರವೇರಿದ್ದು, ಹಡಗಿನ ಕಾರ್ಯಕ್ಷಮತೆ ತೃಪ್ತಿ ತಂದಿದೆ. ಸಹಾಯಕ ಉಪಕರಣಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ನೌಕಾ ಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.
ಈ ಯುದ್ದ ನೌಕೆಯು ಮಿಗ್- 29ಕೆ ಯುದ್ಧ ವಿಮಾನಗಳು, ಕಾಮೋವ್- 31 ಹೆಲಿಕಾಪ್ಟರ್‌ಗಳು, ಎಂಎಚ್‌ಆರ್ ಮಲ್ಟಿರೋಲ್ ಹೆಲಿಕಾಪ್ಟರ್‌ಗಳ ಮೂಲಕ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನೌಕೆಯ ಪ್ರಾಯೋಗಿಕ ಸಂಚಾರ ಯಶಸ್ವಿ ಆಗಿರುವುದು ಮಹತ್ವದ ಮಲಿಗಲ್ಲಾಗಿದ್ದು, 2022ರಲ್ಲಿ ನೌಕೆ ಅಧಿಕೃತವಾಗಿ ಸೇನೆಗೆ ಸೇರ್ಪಡೆ ಆಗುವುದಕ್ಕೂ ಮುನ್ನ ಇಂತಹ ಹಲವಾರು ಪ್ರಾಯೋಗಿಕ ಸಂಚಾರಗಳನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ