ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ!

By Kannadaprabha News  |  First Published Aug 9, 2021, 7:29 AM IST

* ಟ್ರ್ಯಾಕ್ಟರ್‌ ದಾಳಿ ರೀತಿಯ ಅಹಿತಕರ ಘಟನೆ ತಡೆಗೆ ಮುಂಜಾಗ್ರತೆ

* ಕೆಂಪುಕೋಟೆಗೆ ಕಂಟೇನರ್‌ ಕೋಟೆಯ ಭದ್ರತೆ

* ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಭಾರೀ ಬಿಗಿಭದ್ರತೆ


ನವದೆಹಲಿ(ಆ.09): ಗಣರಾಜ್ಯೋತ್ಸವದ ವೇಳೆ ರೈತರು ಟ್ರಾಕ್ಟರ್‌ ರಾರ‍ಯಲಿ ನಡೆಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದ ಘಟನೆ ಮತ್ತೊಮ್ಮೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿರುವ ದೆಹಲಿ ಪೊಲೀಸರು ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಪ್ರವೇಶ ದ್ವಾರದ ಬಳಿ ಹಡಗಿನ ಬೃಹತ್‌ ಕಂಟೇನರ್‌ಗಳನ್ನು ಗೋಡೆಗಳಂತೆ ಪೊಲೀಸರು ನಿಲ್ಲಿಸಿದ್ದಾರೆ. ಜೊತೆಗೆ ಕಂಟೇನರ್‌ಗಳನ್ನು ಅಲಂಕರಿಸಿ, ಬಣ್ಣಗಳನ್ನು ಬಳಿಯಲಾಗಿದೆ. ಜಮ್ಮು- ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್‌ ದಾಳಿಯ ಕಾರಣದಿಂದಾಗಿಯೂ ರಾಷ್ಟ್ರ ರಾಜಧಾನಿ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A container wall has been put up in front of Red fort for security reasons ahead of The Independence Day in new Delhi on Wednesday August 04, 2021. pic.twitter.com/DhRQJF5vJs

— wasim sarvar (@WasimSarvar)

Latest Videos

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.26ರಂದು ನೂರಾರು ಟ್ರಾಕ್ಟರ್‌ಗಳಲ್ಲಿ ಆಗಮಿಸಿ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಆಸ್ತಿ- ಪಾಸ್ತಿಗೆ ಹಾನಿ ಸಂಭವಿಸಿತ್ತು.

click me!