ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿ; ಪಾಕ್‌ಗೆ ಎಚ್ಚರಿಕೆ ನೀಡಿದ ಭಾರತೀಯ ವಾಯುಸೇನೆ ಮುಖ್ಯಸ್ಥ!

By Suvarna NewsFirst Published May 18, 2020, 6:11 PM IST
Highlights

ಪ್ರತಿ ಬಾರಿ ಭಾರತದೊಳಗೆ ಭಯೋತ್ಪದನಾ ದಾಳಿಯಾದಾಗ ಪಾಕಿಸ್ತಾನ ಅಲರ್ಟ್ ಆಗುತ್ತೆ. ಗಡಿಯಲ್ಲಿ ಹೆಚ್ಚಿನ ಸೇನೆ ನಿಯೋಜನೆ, ವಾಯಸೇನೆಯಿಂದ ಗಸ್ತು ಆರಂಭಿಸುತ್ತಿದೆ. ಇದರ ಹಿಂದಿನ ಕಾರಣವನ್ನು ಭಾರತೀಯ ವಾಯುಸೇನಾ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ವಿವರಿಸಿದ್ದಾರೆ. ಇಷ್ಟೇ ಅಲ್ಲ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ನವದೆಹಲಿ(ಮೇ.18): ಜಮ್ಮ ಮತ್ತು ಕಾಶ್ಮೀರದ ಗಡಿ ಭಾಗಗಳಲ್ಲಿ ಭಾರತೀಯ ಸೇನಾ ಕಾರ್ಯಚರಣೆ ಮುಂದುವರಿದಿದೆ. ಇಂದು(ಮೇ.18) ಹಿಜ್ಬುಲ್ ಮುಜಾಹಿದ್ದೀನ್ ಸ್ಫೋಟಕ ತಜ್ಞನನ್ನು ಸೇನೆ ಹೊಡೆದುರಳಿಸಿದೆ. ಇತ್ತೀಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ರಿಜಾಯ್ ನೈಕೂನನ್ನು ಹೊಡೆದುರುಳಿಸಿತ್ತು. ಒಂದೆಡೆ ಭಾರತ ಕೊರೋನಾ ವಿರುದ್ಧ ಯುದ್ಧ ಸಾರಿದ್ದರೆ, ಇತ್ತ ಪಾಕಿಸ್ತಾನ ಕಾಶ್ಮೀರದಲ್ಲಿ ಅಶಾಂತಿ ನಿರ್ಮಿಸುವ ಪ್ರಯತ್ನ ಮಾಡುತ್ತಿದೆ. ಇದೀಗ ವಾಯುಸೇನಾ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್‌ ಸ್ಫೋಟಕ ತಜ್ಞ ಮಟಾಶ್, ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ಭಾಗದಲ್ಲಿ ಹಾಗೂ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣ, ಕ್ಯಾಂಪ್‌ಗಳನ್ನ ಧ್ವಂಸಗೊಳಿಸಲು ಭಾರತೀಯ ಸೇನೆ ಸಿದ್ದವಿದೆ. ದಿನದ 24 ಗಂಟೆಯೂ ವಾಯುಸೇನೆ ಸನ್ನದ್ದವಾಗಿದೆ. ಪರಿಸ್ಥಿತಿ ಎದುರಾದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಕಾರ್ಯಚರಣೆ ನಡೆಸಲಿದ್ದೇವೆ ಎಂದ ರಾಕೇಶ್ ಕುಮಾರ್  ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯನ್ನು ನಿಲ್ಲಿಸಬೇಕು. ಭಾರತದ ಗಡಿಯೊಳಕ್ಕೆ ಭಯೋತ್ಪಾದರನ್ನು ನುಗ್ಗಿಸುವ ಸಾಹಸಕ್ಕೆ ಅಂತ್ಯ ಹಾಡಬೇಕು ಎಂದಿದ್ದಾರೆ. ಇಷ್ಟೇ ಅಲ್ಲ ಭಾರತದೊಳಗೆ ಉಗ್ರರ ದಾಳಿಯಾದಾಗ, ಪಾಕಿಸ್ತಾನ ಹೆಚ್ಚು ಅಲರ್ಟ್ ಆಗುತ್ತದೆ. ಗಡಿಯಲ್ಲಿ ಹೆಚ್ಚು ಸೇನೆಯ ನಿಯೋಜನೆ, ವಾಯುಸೇನೆಯಿಂದ ಗಸ್ತು ಸೇರಿದಂತೆ ಹಲವು ಚಟುವಟಿಕೆ ಆರಂಭಿಸುತ್ತದೆ. ಇದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಅನ್ನೋದು ಜಗತ್ತಿಗೆ ಸಾರಿ ಹೇಳುತ್ತದೆ ಎಂದರು.

ಚೀನಾ ಸೇನೆ  ಲಡಾಕ್ ಪ್ರದೇಶದಲ್ಲಿ ವಾಯು ಗಡಿ ಉಲ್ಲಂಘನೆ ಮಾಡಿರುವುದುು ಬೆಳಕಿಗೆ ಬಂದಿದೆ. ಲಹೌಲ್ ಸ್ಪಿತಿ ಜಿಲ್ಲೆಯ ಸಮ್ಧೋ ವಲಯ ಬಳಿ ಚೀನಾದ ಹೆಲಿಕಾಪ್ಟರ್ ಸುಮಾರು 12 ರಿಂದ 15 ಕಿ.ಮೀ ಗಡಿಯೊಳಕ್ಕೆ ಪ್ರವೇಶಿಸಿದೆ. ಈ ಕುರಿತು ಗಮನಹರಿಸಲಾಗಿದೆ. ಇಷ್ಟೇ ಅಲ್ಲ ಎಚ್ಚರಿಕೆ ನೀಡಲಾಗಿದೆ ಎಂದು ರಾಕೇಶ್ ಕುಮಾರ್ ಸಿಂಗ್ ಹೇಳಿದರು.

click me!