ಚೀನಾ ಗಡಿಯಲ್ಲಿ ಭಾರತದ ರಫೇಲ್‌!

By Suvarna NewsFirst Published Jul 30, 2021, 8:28 AM IST
Highlights

* ನಾಳೆ ಭಾರತ-ಚೀನಾ ಸೇನಾ ಮಾತುಕತೆ

* ಚೀನಾ ಗಡಿಯಲ್ಲಿ ಭಾರತದ ರಫೇಲ್‌

* ಇದಕ್ಕೂ ಮುನ್ನ ಭಾರತದಿಂದ ಕಠಿಣ ಸಂದೇಶ

ನವದೆಹಲಿ(ಜು.30): ಚೀನಾದ ಗಡಿ ಹಂಚಿಕೊಳ್ಳುವ ಸಿಕ್ಕಿಂ-ಭೂತಾನ್‌ ಮತ್ತು ಟಿಬೆಟ್‌ನ ತೀರಾ ಹತ್ತಿರಕ್ಕೆ ಹೊಚ್ಚ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ರಫೇಲ್‌ ಯುದ್ಧ ವಿಮಾನಗಳನ್ನು ಭಾರತ ಸರ್ಕಾರ ನಿಯೋಜನೆ ಮಾಡಿದೆ.

ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟು ಶಮನಕ್ಕಾಗಿ ಶನಿವಾರ ಉಭಯ ದೇಶಗಳ ಮಧ್ಯೆ ಸೇನಾ ಹಂತದ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಮುನ್ನವೇ ಚೀನಾದ ಗಡಿಯ ಹತ್ತಿರಕ್ಕೆ ರಫೇಲ್‌ ಯುದ್ಧ ವಿಮಾನಗಳನ್ನು ನಿಯೋಜಿಸುವ ಮುಖಾಂತರ ಚೀನಾಕ್ಕೆ ಭಾರತ ಕಠಿಣ ಸಂದೇಶ ರವಾನಿಸಿದೆ.

ರಫೇಲ್‌ ಡೀಲಲ್ಲಿ ಲಂಚ: ರಾಹುಲ್‌ ಹೇಳಿದ್ದು ನಿಜವಾಯ್ತು ಎಂದ ಕಾಂಗ್ರೆಸ್

ಭಾರತದ ವಾಯುಪಡೆಗೆ ಹೋಲಿಸಿದರೆ ಚೀನಾ ಭಾರತಕ್ಕಿಂತ ಎಲ್ಲದರಲ್ಲೂ ಪ್ರಬಲವಾಗಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್‌-ಮೇ ತಿಂಗಳಲ್ಲಿ ಉದ್ಭವಿಸಿದ ಲಡಾಖ್‌ ಬಿಕ್ಕಟ್ಟು ಬಳಿಕ ಹೋಟನ್‌, ಕಾಶ್ಗರ್‌, ಗರ್ಗುನ್ಸಾ, ಲಾಸ-ಗಾಂಗ್ಗರ್‌ ಮತ್ತು ಶಿಗೆಟ್ಸೆ ರೀತಿಯ ವಾಯುನೆಲೆಗಳನ್ನು ಚೀನಾ ಉನ್ನತೀಕರಿಸಿಕೊಂಡಿದೆ. ಆದರೆ ಈ ವ್ಯಾಪ್ತಿಯಲ್ಲಿರುವ ವಿಭಿನ್ನ ಭೂಪ್ರದೇಶವು ವಾಯುದಾಳಿ ಮತ್ತು ಭೂಸೈನ್ಯದ ದಾಳಿಗೆ ಭಾರತಕ್ಕೆ ಹೆಚ್ಚು ಅನುಕೂಲಕರವಾಗಿದೆ.

ಆಮ್ಲಜನಕದ ತೀವ್ರ ಕೊರತೆ ಮತ್ತು ಇಕ್ಕಟ್ಟಿನ ಗುಡ್ಡಗಾಡು ಮತ್ತು ಅತಿ ಎತ್ತರದ ಈ ಪ್ರದೇಶಗಳಲ್ಲಿ ಚೀನಾದ ಸೈನ್ಯಕ್ಕೆ ಹೆಚ್ಚಿನ ಯುದ್ಧೋಪಕರಣ ಮತ್ತು ಶಸ್ತ್ರಾಸ್ತ್ರಗಳ ಸಾಗಣೆಗೆ ಪೂರಕವಾಗಿಲ್ಲ. ಆದರೆ ಭಾರತವು ಮಿರಾಜ್‌-2000, ಮಿಗ್‌-29 ಮತ್ತು ಸುಖೋಯ್‌-30 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಅಲ್ಲದೆ ಇದೀಗ ರಫೇಲ್‌ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿದೆ.

2016ರಲ್ಲಿ ಭಾರತ ಫ್ರಾನ್ಸ್‌ನಿಂದ 59 ಸಾವಿರ ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಿದೆ. ಈ ಪೈಕಿ 26 ಯುದ್ಧ ವಿಮಾನಗಳು ಭಾರತದ ವಾಯುಪಡೆ ಬತ್ತಳಿಕೆಯಲ್ಲಿವೆ. ಉಳಿದ 10 ಯುದ್ಧ ವಿಮಾನಗಳು ಮುಂದಿನ ವರ್ಷದ ಏಪ್ರಿಲ್‌ ವೇಳೆಗೆ ಭಾರತಕ್ಕೆ ಆಗಮಿಸಲಿವೆ.

ಭಾರತಕ್ಕೆ ರಫೇಲ್ ಜೆಟ್ ಮಾರಾಟ: ಫ್ರೆಂಚ್ ಜಡ್ಜ್‌ಗೆ ವಿಚಾರಣೆ ಹೊಣೆ

ಸೈನ್ಯದ ವಿಚಾರದಲ್ಲಿ ಭಾರತಕ್ಕಿಂತ ಚೀನಾವೇ ಬಲಿಷ್ಠ

ಹಲವು ವಾಯುನೆಲೆಗಳನ್ನು ಉನ್ನತೀಕರಿಸಿರುವ ಚೀನಾ ಸೈನ್ಯ

ಆದರೆ ಈ ಭಾಗದ ಭೂಪ್ರದೇಶ ಭಾರತದ ದಾಳಿಗೆ ಪೂರಕ

click me!