ಭಾರತೀಯ ವಾಯುಸೇನೆ @91: 72 ವರ್ಷಗಳ ಬಳಿಕ ಭಾರತೀಯ ಏರ್‌ಪೋರ್ಸ್‌ಗೆ ಹೊಸ ಧ್ವಜ

By Suvarna News  |  First Published Oct 9, 2023, 2:48 PM IST

ಭಾರತೀಯ ವಾಯುಸೇನೆ 72 ವರ್ಷಗಳ ಬಳಿಕ ಹೊಸಧ್ವಜವನ್ನು ಅನಾವರಣಗೊಳಿಸಿದೆ. ಭಾರತೀಯ ವಾಯುಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ವಾಯುಸೇನೆಯ ಹೊಸ ಧ್ವಜವನ್ನು ಅನಾವರಣ ಮಾಡಿದರು.


ನವದೆಹಲಿ: ಭಾರತೀಯ ವಾಯುಸೇನೆ 72 ವರ್ಷಗಳ ಬಳಿಕ ಹೊಸಧ್ವಜವನ್ನು ಅನಾವರಣಗೊಳಿಸಿದೆ. ಭಾರತೀಯ ವಾಯುಸೇನೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ವಾಯುಸೇನೆಯ ಹೊಸ ಧ್ವಜವನ್ನು ಅನಾವರಣ ಮಾಡಿದರು. 91ನೇ ಭಾರತೀಯ ವಾಯುಸೇನೆಯ ದಿನಾಚರಣೆಯ ಅಂಗವಾಗಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಈ ಹೊಸ ಧ್ವಜವನ್ನು ಅನಾವರಣಗೊಳಿಸಲಾಯಿತು. 

ಈ ಮೂಲಕ ಭಾರತೀಯ ವಾಯುಸೇನೆಗೆ 72 ವರ್ಷಗಳ  ನಂತರ  ಹೊಸ ಧ್ವಜವನ್ನು ಪಡೆದಂತಾಗಿದೆ. ಪ್ರಸ್ತುತ ಧ್ವಜದಲ್ಲಿ ರಾಯಲ್‌ ಇಂಡಿಯನ್‌ ಏರ್‌ಪೋರ್ಸ್‌ನ ಚಿಹ್ನೆಯ ಜೊತೆ ಯೂನಿಯನ್‌ ಜಾಕ್  ಹಾಗೂ ಕೆಂಪು ಬಿಳಿ ಮತ್ತು ನೀಲಿ ಮಿಶ್ರಿತ ಬಣ್ಣದ  ಆರ್‌ಐಎಫ್‌ ರೌಂಡಲ್ ಇದೆ.  ಈ ಧ್ವಜವನ್ನು ಮೊದಲು ನಾಲ್ಕು ವಾಯು ಸೇನಾ ಯೋಧರು ಚಲಿಸಬಲ್ಲ ಮಿನಿ ವೇದಿಕೆಯ ಮೇಲೆ ಜೋಡಿಸಿ ಏರ್ ಚೀಫ್‌ ಮಾರ್ಷಲ್ ಬಳಿ ಕರೆತಂದರು. ಏರ್ ಚೀಫ್ ಮಾರ್ಷಲ್‌ ಹೊಸ ಧ್ವಜವನ್ನು ಅನಾವರಣಗೊಳಿಸುತ್ತಿದ್ದಂತೆ, ಎರಡು ಡ್ರೋನ್‌ಗಳು ಪರದೆಯ ಹಿಂದಿನಿಂದ ಧ್ವಜದ ದೊಡ್ಡ ಆವೃತ್ತಿಯನ್ನು  ತೋರಿಸಿದವು. 

Tap to resize

Latest Videos

ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ

ನಂತರ ಧ್ವಜಸ್ತಂಭದಲ್ಲಿ ಹೊಸ ಧ್ವಜವನ್ನು ಹಾರಿಸಲಾಯ್ತು. ಹೊಸ ಧ್ವಜವನ್ನು ಹಾರಿಸುವಾಗ ಹಳೆಯ ಧ್ವಜವನ್ನು ಕೆಳಕ್ಕೆ ಎಳೆದು, ಗೌರವದಿಂದ ಮಡಚಿ ವಾಯುಸೇನೆ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು. ಈ ಹಳೆಯ ಧ್ವಜ ಇನ್ನು ಮುಂದೆ ಹೊಸದಿಲ್ಲಿಯ ಏರ್ ಫೋರ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಗೊಳ್ಳಲಿದೆ.  ನಂತರ, ವಾಯು ಸೇನೆಯ ತಂಡ ಮತ್ತು ಐಎಎಫ್ ಅಧಿಕಾರಿಗಳು ಪರೇಡ್‌ನಲ್ಲಿ ಹೊಸ ಧ್ವಜವನ್ನು ಹೊತ್ತೊಯ್ದರು.  ಇದರ ಜೊತೆಗೆ ಗೌರವಾರ್ಥವಾಗಿ  Mi-17v5 ಯುದ್ಧ ವಿಮಾನವೂ ಸಹ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಹೊಸ ವಾಯುಪಡೆಯ ಧ್ವಜಕ್ಕೆ ಜೊತೆಯಾಯ್ತು. 

ಈ ಹೊಸ ಧ್ವಜದಲ್ಲಿ ಐಎಎಫ್‌ನ ಚಿಹ್ನೆಯೂ ಇನ್ನು  ಧ್ವಜದ ಬಲಮೂಲೆಯಲ್ಲಿರಲಿದೆ.  ಎಡಭಾಗದಲ್ಲಿ  ರಾಷ್ಟ್ರೀಯ ಧ್ವಜ ಹಾಗೂ ಕೆಳಭಾಗದಲ್ಲಿ ಐಎಎಫ್‌ನ ತ್ರಿವರ್ಣ ರೌಂಡಲ್‌(ವೃತ) ಇರಲಿದೆ.  ಈ ಚಿಹ್ನೆಯನ್ನು 1951ರಲ್ಲಿ ಅಳವಡಿಸಲಾಗಿತ್ತು.  ಈ  ಏರ್‌ಫೋರ್ಸ್ ಚಿಹ್ನೆಯಲ್ಲಿ ರಾಷ್ಟ್ರ ಲಾಂಚನ ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದ್ದು,  ಮೇಲ್ಭಾಗದಲ್ಲಿ ಅಶೋಕ ಲಾಂಛನವಿದೆ. ಇದರ ಕೆಳಗೆ ರೆಕ್ಕೆ ಬಿಚ್ಚಿ ಹಾರುವ ಹಿಮಾಲಯದ ಹದ್ದಿದ್ದು, ಹೋರಾಟದ ಗುಣವನ್ನು ಇದು ಸೂಚಿಸುತ್ತದೆ. ತಿಳಿ ನೀಲಿ ಬಣ್ಣದ ವೃತ್ತವೂ ಭಾರತೀಯ ವಾಯುಸೇನೆ ಎಂದು ಬರೆದಿದ್ದು ಹದ್ದನ್ನು ಸುತ್ತುವರಿಯುತ್ತದೆ. 

ಹೆಂಗಸರು ಮಕ್ಕಳ ಮೇಲೆ ಹಮಾಸ್‌ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು

ಈ ಹದ್ದಿನ ಕೆಳಗೆ ದೇವನಾಗರಿ ಭಾಷೆಯಲ್ಲಿ ಐಎಎಫ್ ಧ್ಯೇಯವಾಕ್ಯ ನಬೋ ಸ್ಪರ್ಶ್ ದೀಪ್ತಂ (Touching the sky with glory) ಅಂದರೆ 'ವೈಭವದಿಂದ ಆಕಾಶವನ್ನು ಸ್ಪರ್ಶಿಸುವುದು' ಎಂಬುದನ್ನು ಚಿನ್ನದ ಬಣ್ಣದಲ್ಲಿ ಬರೆಯಲಾಗಿದೆ. ಈ ಧ್ಯೇಯವಾಕ್ಯವನ್ನು ಭಗವದ್ಗೀತೆಯ  ಅಧ್ಯಾಯ 11ರ 24ನೇ ಶ್ಲೋಕದಿಂದ ತೆಗೆಯಲಾಗಿದೆ. 

A momentous day in the annals of .

On the sidelines of the Annual Air Force Day Parade conducted today morning, the CAS Air Chief Marshal VR Chaudhari unveiled the new ensign.
Read more at https://t.co/dUMkfkl0qVpic.twitter.com/UBVAJlBpgR

— Indian Air Force (@IAF_MCC)

 

click me!