ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳನ್ನೇ ರೋಗಿಗಳಿಗೆ ಸೂಚಿಸಬೇಕು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ನವದೆಹಲಿ (ಮೇ 16, 2023): ರೋಗಿಗಳಿಗೆ ಜೆನೆರಿಕ್ ಔಷಧಗಳನ್ನು ಸೂಚಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳು ಮತ್ತು ಯೋಗಕ್ಷೇಮ ಕೇಂದ್ರಗಳಿಗೆ ಕೇಂದ್ರ ಸರ್ಕಾರ ಸೋಮವಾರ ಎಚ್ಚರಿಕೆ ನೀಡಿದೆ. ಅಲ್ಲದೇ ಆಸ್ಪತ್ರೆಗಳಿಗೆ ವೈದ್ಯಕೀಯ ಪ್ರತಿನಿಧಿಗಳು ಆಗಮಿಸುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಎಂದು ಸಹ ಸೂಚಿಸಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳು ಮತ್ತು ಯೋಗಕ್ಷೇಮ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳನ್ನೇ ರೋಗಿಗಳಿಗೆ ಸೂಚಿಸಬೇಕು. ಕೆಲ ವೈದ್ಯರು ಬ್ರ್ಯಾಂಡೆಡ್ ಔಷಧಗಳನ್ನು ಸೂಚಿಸುತ್ತಿರುವುದನ್ನು ಸರ್ಕಾರ ಗಮನಿಸಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಕೇಂದ್ರಗಳಿಗೆ ಔಷಧ ಕಂಪನಿಗಳ ಪ್ರತಿನಿಧಿಗಳು ಭೇಟಿ ನೀಡುವುದನ್ನು ನಿಷೇಧಿಸಬೇಕು. ಕೇವಲ ಇ ಮೇಲ್ ಮೂಲಕವೇ ಹೊಸ ಔಷಧ ಲಾಂಚ್ ಆದ ವಿಷಯವನ್ನು ತಿಳಿಯಬೇಕು ಎಂದೂ ಸರ್ಕಾರ ಹೇಳಿದೆ.
undefined
ಇದನ್ನು ಓದಿ: ಭಾರತೀಯ ವೈದ್ಯರು ಯಾಕೆ ಜನೌಷಧಿ ಯೋಜನೆಯನ್ನು ಒಪ್ಪಿಕೊಳ್ಳುತ್ತಿಲ್ಲ? ಬ್ರ್ಯಾಂಡ್ ಔಷಧಗಳನ್ನೇ ಬರೆಯೋದೇಕೆ!
ಕಚೇರಿ ಆದೇಶದ ಪ್ರಕಾರ, ಕೇಂದ್ರ ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಕ್ಷೇಮ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್‌ಗಳ ವೈದ್ಯರಿಗೆ ಜೆನೆರಿಕ್ ಔಷಧಿಗಳನ್ನು ಮಾತ್ರ ಶಿಫಾರಸು ಮಾಡಲು ಈಗಾಗ್ಲೇ ಹಲವು ಬಾರಿ ಸೂಚನೆ ನೀಡಲಾಗಿದೆ. "ಇದರ ಹೊರತಾಗಿಯೂ, ವೈದ್ಯರು (ರೆಸಿಡೆಂಟ್ ಡಾಕ್ಟರ್‌ಗಳು ಸೇರಿದಂತೆ) ಕೆಲವು ಸಂದರ್ಭಗಳಲ್ಲಿ ಬ್ರ್ಯಾಂಡೆಡ್ ಔಷಧಿಗಳನ್ನು ಶಿಫಾರಸು ಮಾಡುವುದನ್ನು ಮುಂದುವರೆಸಿದ್ದಾರೆ ಎಂಬುದನ್ನು ಗಮನಿಸಲಾಗಿದೆ. ಇದನ್ನು ಸಕ್ಷಮ ಪ್ರಾಧಿಕಾರವು ಕಟ್ಟುನಿಟ್ಟಾಗಿ ಪರಿಗಣಿಸಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಮೇ 12 ರಂದು ಹೊರಡಿಸಿದ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.
ಹಾಗೆ, ಇದನ್ನು ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಗಮನಿಸಬಹುದು ಮತ್ತು ಅವರು ತಮ್ಮ ಅಡಿಯಲ್ಲಿ ಕೆಲಸ ಮಾಡುವ ವೈದ್ಯರಿಂದ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಹಾಗೂ, ಈ ಆದೇಶ ಪಾಲಿಸದಿದ್ದಲ್ಲಿ ಆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಲಾಗಿದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Fake Drugs ಕಡಿವಾಣಕ್ಕೆ ಬರಲಿದೆ ಬಾರ್‌ಕೋಡ್: ಮೊದಲು 300 ಔಷಧಗಳಿಗೆ ಜಾರಿ
ಇದಲ್ಲದೆ, ಆಸ್ಪತ್ರೆ ಆವರಣಕ್ಕೆ ವೈದ್ಯಕೀಯ ಪ್ರತಿನಿಧಿಗಳ ಭೇಟಿಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಸಹ ಖಚಿತಪಡಿಸಿಕೊಳ್ಳಲೂ ಈ ಆದೇಶ ಹೇಳುತ್ತದೆ. ಕಳೆದ ವರ್ಷ ಜುಲೈನಲ್ಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜೆನೆರಿಕ್ ಔಷಧ ಶಿಫಾರಸು ಮಾಡಿ ಎಂಬ ಆದೇಶ ಹೊರಡಿಸಿತ್ತು. ನಂತರ ಈ ಆದೇಶವು ನ್ಯಾಯಾಲಯದ ಆದೇಶಗಳು ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ಸಂಬಂಧಿತ ನಿಯಮಗಳ ಹೊರತಾಗಿಯೂ, ಹೆಚ್ಚಿನ ವೈದ್ಯಕೀಯ ವೈದ್ಯರು ಜೆನೆರಿಕ್ ಔಷಧಿಗಳನ್ನು ಶಿಫಾರಸು ಮಾಡುತ್ತಿಲ್ಲ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: 23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು