Breaking: ಸುದರ್ಶನ ಚಕ್ರ ಪ್ರಯೋಗಿಸಿದ ಭಾರತ, ಪಾಕ್‌ನ 15 ನಗರಗಳ ಮೇಲೆ ಭಾರತ ಡ್ರೋನ್‌ ದಾಳಿ

Published : May 08, 2025, 03:36 PM IST
Breaking: ಸುದರ್ಶನ ಚಕ್ರ ಪ್ರಯೋಗಿಸಿದ ಭಾರತ, ಪಾಕ್‌ನ 15 ನಗರಗಳ ಮೇಲೆ ಭಾರತ ಡ್ರೋನ್‌ ದಾಳಿ

ಸಾರಾಂಶ

ಭಾರತವು ರಷ್ಯಾ ನಿರ್ಮಿತ ಎಸ್-೪೦೦ (ಸುದರ್ಶನ ಚಕ್ರ) ವ್ಯವಸ್ಥೆ ಬಳಸಿ ಪಾಕಿಸ್ತಾನದ ಕ್ಷಿಪಣಿ ದಾಳಿಯನ್ನು ತಡೆದಿದೆ. ಪ್ರತಿದಾಳಿಯಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ಧ್ವಂಸಗೊಂಡಿದೆ. ಭಾರತದ ಡ್ರೋನ್ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಗಾಯಗೊಂಡಿದ್ದಾರೆ. ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳು ವರದಿಯಾಗಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.

ನವದೆಹಲಿ (ಮೇ.8): ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಮೇಲೆ ಸುದರ್ಶನ ಚಕ್ರ ಪ್ರಯೋಗ ಮಾಡಿದೆ. ರಷ್ಯಾ ನಿರ್ಮಿತ ಏರ್‌ ಡಿಫೆನ್ಸ್‌ ವ್ಯವಸ್ಥೆಯಾದ ಎಸ್‌-400ಗೆ ಭಾರತೀಯ ಸೇನೆ ಸುದರ್ಶನ ಚಕ್ರ ಎಂದು ಹೆಸರಿಟ್ಟಿದ್ದು, ಇದರ ಮೂಲಕವೇ ನಿನ್ನೆ ರಾತ್ರಿ ಪಾಕಿಸ್ತಾನದ ದಾಳಿಗೆ ಪ್ರತ್ಯುತ್ತರ ನೀಡಿದೆ.

ಪಾಕಿಸ್ತಾನ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲು ಮುಂದಾಗಿತ್ತು. ಭಾರತದತ್ತ ಕ್ಷಿಪಣಿ ಬರುತ್ತಿರುವುದನ್ನು ಅರಿತ ಎಸ್‌-400 ಏರ್‌ ಡಿಫೆನ್ಸ್‌ ಸಿಸ್ಟಮ್‌ ತಾನಾಗಿಯೇ ಆಕ್ಟಿವೇಟ್‌ ಆಗಿ ಈ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದಕ್ಕೆ ಪ್ರತಿಯಾಗಿ ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಚೀನಾ ನಿರ್ಮಿತ ಎಚ್‌ಕ್ಯು 16 ಎಡಿಎಸ್‌ ಸಿಸ್ಟಮ್‌ ಸಂಪೂರ್ಣವಾಗಿ ಧ್ವಂಸವಾಗಿದೆ.

S-400 ವಾಯು ರಕ್ಷಣಾ ವ್ಯವಸ್ಥೆಯು 600 ಕಿ.ಮೀ ದೂರದವರೆಗೆ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚಬಲ್ಲದು ಮತ್ತು ಫೈಟರ್ ಜೆಟ್‌ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಬಲ್ಲದು, ಇದು ಭಾರತದ ಭದ್ರತಾ ಶಸ್ತ್ರಾಗಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕ್ಷಿಪಣಿಗಳು ಹಲವಾರು ಸ್ಥಳಗಳಿಗೆ ಅಪ್ಪಳಿಸಿ ಎರಡು ಡಜನ್‌ಗೂ ಹೆಚ್ಚು ಜನರನ್ನು ಕೊಂದ ಒಂದು ದಿನದ ನಂತರ, ಭಾರತವು ಪಾಕಿಸ್ತಾನದ ಮೇಲೆ ದಾಳಿ ಡ್ರೋನ್‌ಗಳನ್ನು ಹಾರಿಸಿ ದಾಳಿ ಮಾಡಿದ್ದು, ಇದರಲ್ಲಿ  ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಇಸ್ರೇಲ್‌ ನಿರ್ಮಿತ ಹಾರ್ಪರ್‌ ಡ್ರೋನ್‌ಅನ್ನು ಭಾರತ ಬಳಸಿದ್ದು, 25 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದಾಗಿ ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಡ್ರೋನ್ ದಾಳಿಯ ಕೆಲವು ಗಂಟೆಗಳ ನಂತರ, ಭಾರತದ ರಕ್ಷಣಾ ಸಚಿವಾಲಯವು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ, ಆದರೆ ಅದು ಡ್ರೋನ್‌ಗಳನ್ನು ಬಳಸಿದ್ದರ ಬಗ್ಗೆ ಖಚಿತತೆ ನೀಡಿರಲಿಲ್ಲ.
ಕಳೆದ ತಿಂಗಳು ಭಾರತ ನಿಯಂತ್ರಿತ ಕಾಶ್ಮೀರದಲ್ಲಿ ಟೆರರಿಸ್ಟ್‌ಗಳು 26 ಜನರನ್ನು ಕೊಂದ ನಂತರ, ಅದರಲ್ಲಿ ಹೆಚ್ಚಿನವರು ಭಾರತೀಯ ಹಿಂದೂ ಪ್ರವಾಸಿಗರು, ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಭಾರತ ಆರೋಪಿಸಿದೆ ಆದರೆ ಇಸ್ಲಾಮಾಬಾದ್ ಅದನ್ನು ನಿರಾಕರಿಸಿದೆ.

ಲಾಹೋರ್‌, ರಾವಲ್ಪಿಂಡಿ ಸೇನಾ ಕಚೇರಿ ಬಳಿ ಸ್ಫೋಟ:  ಲಾಹೋರ್‌ನಲ್ಲಿ, ವಾಲ್ಟನ್ ವಿಮಾನ ನಿಲ್ದಾಣದ ಬಳಿ ಜೋರಾಗಿ ಸ್ಫೋಟಗಳ ಸರಣಿ ಕೇಳಿಬಂದಂತೆ ಸೈರನ್‌ಗಳು ಮೊಳಗಿದವು ಮತ್ತು ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು ಎಂದು ರಾಯಿಟರ್ಸ್ ಮತ್ತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವುದನ್ನು ಮತ್ತು ಹೊಗೆಯ ಮೋಡಗಳನ್ನು ನೋಡುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಅದರೊಂದಿಗೆ ರಾವಲ್ಪಿಂಡಿ ಕ್ರಿಕೆಟ್‌ ಸ್ಟೇಡಿಯಂ,  ಸೇನಾ ಮುಖ್ಯ ಕಚೇರಿ ಮೇಲೆ ಭಾರತದ ಸೇನೆ ಟಾರ್ಗೆಟ್‌ ಮಾಡಿದೆ ಎಂದು ವರದಿಯಾಗಿದೆ.

ಲಾಹೋರ್‌ನ ಐಷಾರಾಮಿ ಕೇಂದ್ರ ವ್ಯಾಪಾರ ಜಿಲ್ಲೆ ಮತ್ತು ಲಾಹೋರ್ ಸೇನಾ ಕಂಟೋನ್ಮೆಂಟ್‌ಗೆ ಹೊಂದಿಕೊಂಡಿದೆ. ಸಿಯಾಲ್‌ಕೋಟ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ಅಥವಾ ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ