
ನವದೆಹಲಿ(ಏ.16): ಕೊರೋನಾ ವೈರಸ್ ತಡೆಗೆ ಸರ್ಕಾರ ನಾನಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಯಾದರೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬುಧವಾರ ಒಂದೇ ದಿನ ದೇಶಾದ್ಯಂತ 1,120 ಜನರಿಗೆ ವೈರಸ್ ತಗುಲಿದೆ. ಈ ಮೂಲಕ ಸತತ ಎರಡನೇ ದಿನವೂ ಹೊಸ ಸೋಂಕು ಪತ್ತೆಯಾದ ಪ್ರಕರಣಗಳ ಸಂಖ್ಯೆ 1000ದ ಗಡಿ ದಾಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12220ಕ್ಕೇರಿದೆ. ಇನ್ನು ಬುಧವಾರ 36 ಜನ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 417ಕ್ಕೆ ತಲುಪಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರಾಜ್ಯದಲ್ಲಿ 3 ದಿನದಲ್ಲಿ ಸಾವಿನ ಸಂಖ್ಯೆ ಡಬಲ್!
ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಅನ್ವಯ, ಬುಧವಾರ 1344 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 11933ಕ್ಕೆ ತಲುಪಿದೆ. ಜೊತೆಗೆ ಸಾವಿನ ಸಂಖ್ಯೆ 392ಕ್ಕೆ ಏರಿದೆ. ಇನ್ನು 1,343 ಜನರು ಗುಣಮುಖರಾಗಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 10,197 ಇದೆ ಎಂದೂ ಸರ್ಕಾರ ತಿಳಿಸಿದೆ.
ಆಪತ್ತಿಗೆ ಆದ ರಷ್ಯಾ ಸ್ನೇಹಿತ, ಮೋದಿ ಮಾತಿಗೆ ದೊಡ್ಡ ಮೊತ್ತವ ದೇಣಿಗೆ ನೀಡಿದ
ಬುಧವಾರ ಮಹಾರಾಷ್ಟ್ರದಲ್ಲಿ 232, ಮಧ್ಯಪ್ರದೇಶದಲ್ಲಿ 197, ಗುಜರಾತ್‌ನಲ್ಲಿ 114, ಉತ್ತರಪ್ರದೇಶದಲ್ಲಿ 75, ತಮಿಳುನಾಡಿನಲ್ಲಿ 38, ರಾಜಸ್ಥಾನದಲ್ಲಿ 41 ಪ್ರಕರಣಗಳು ಬೆಳಕಿಗೆ ಬಂದಿದೆ. ಇನ್ನು ಹೆಚ್ಚು ಸಾವು ಸಂಭವಿಸಿದ ರಾಜ್ಯಗಳೆಂದರೆ ಮಹಾರಾಷ್ಟ್ರ 187, ಮಧ್ಯಪ್ರದೇಶದಲ್ಲಿ 53, ಗುಜರಾತ್‌ನಲ್ಲಿ 33, ತಮಿಳುನಾಡಿನಲ್ಲಿ 41, ದೆಹಲಿಯಲ್ಲಿ 30, ರಾಜಸ್ಥಾನ 11.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ