ಶೇ.35ರಷ್ಟು ತರಿಗೆ ಆದರೂ ಏನೂ ಸರಿಯಿಲ್ಲ, ವೈರಲ್ ಪೋಸ್ಟ್‌ನಿಂದ ಭಾರತ v ನಾರ್ಡಿಕ್ ಚರ್ಚೆ

Published : Jul 07, 2025, 07:05 PM ISTUpdated : Jul 07, 2025, 07:11 PM IST
pothole accident

ಸಾರಾಂಶ

ಭಾರತದಲ್ಲಿ ಕಟ್ಟುವ ತೆರಿಗೆ ಹಾಗೂ ಸಿಗುವ ಸೌಲಭ್ಯದ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಇದೀಗ ವೈರಲ್ ಪೋಸ್ಟ್ ಭಾರತದ ನಾರ್ಡಿಕ್ ಕಂಟ್ರಿ ನಡುವಿನ ಚರ್ಚೆ ಹುಟ್ಟು ಹಾಕಿದೆ. ಏನಿದು ಹೊಸ ಚರ್ಚೆ

ನವದೆಹಲಿ (ಜು.07) ಭಾರತದಲ್ಲಿ ಪ್ರತಿಯೊಬ್ಬನ್ನು ತೆರಿಗೆ ಕಟ್ಟಲೇಬೇಕು. ಆದರೆ ಆತನಿಗೆ ಸಿಗುವ ಸೌಲಭ್ಯವೇನು? ಭಾರತದಲ್ಲಿ ಶೇಕಡಾ 35ರಷ್ಟು ತೆರಿಗೆ ಕಟ್ಟಿದರೂ ಯಾವೂದು ಸರಿಯಿಲ್ಲ. ಆದರೆ ಉತ್ತರ ಯೂರೋಪ್ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಭಾರತದಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಲು ಇನ್ನೆಷ್ಟು ವರ್ಷ ಬೇಕು ಎಂಬ ಪ್ರಶ್ನೆ ಶುರುವಾಗಿದೆ. ಟೆಕ್ ಉದ್ಯಮಿ ವಿನೀತ್ ಕೆ ಮಾಡಿದ ವೈರಲ್ ಪೋಸ್ಟ್ ಇದೀಗ ಭಾರತದ ರಿಯಾಲಿಟಿ ಹಾಗೂ ಉತ್ತರ ಯೂರೋಪ್ ದೇಶಗಳ ಸೌಲಭ್ಯ ಭಾರಿ ಚರ್ಚೆಯಾಗುತ್ತಿದೆ.

ಉತ್ತರ ಯೂರೋಪ್ ದೇಶಗಳಲ್ಲಿ ತೆರಿಗೆ ಕಟ್ಟಿದರೂ ನಿಮಗೆ ನಿರಾಸೆಯಾಗುವುದಿಲ್ಲ. ಕಾರಣ ಅತ್ಯುತ್ತಮ ಸೌಲಭ್ಯಗಳು ಪ್ರಜೆಗಳಿಗೆ ಸಿಗುತ್ತದೆ. ಆದರೆ ಭಾರತದಲ್ಲಿ ಕನಿಷ್ಠ ಉತ್ತಮ ರಸ್ತೆ ಕೂಡ ಇಲ್ಲದಾಗಿದೆ. ಗುಂಡಿ ಬಿದ್ದ ರಸ್ತೆ, ಇತರ ಮೂಲಭೂತ ಸೌಕರ್ಯಗಳೇ ಮಾಯವಾಗಿದೆ ಎಂದು ಡೀಲ್ಸ್ ಧಮಾಕಾ ಹಾಗೂ ಪಾಯಿಂಟ್ ಪರ್ಕ್ಸ್ ಪಿಕ್ಸ್ ಮಾಲೀಕ ವಿನೀತ್ ಕೆ ಆರೋಪಿಸಿದ್ದಾರೆ. ಇದಕ್ಕ ಭಾರತದ ಪರಿಸ್ಥಿತಿ ಹಾಗೂ ಉತ್ತರ ಯೂರೋಪ್ ದೇಶಗಳಲ್ಲಿನ ಸೌಲಭ್ಯದ ಕುರಿತು ಹೇಳಿದ್ದಾರೆ. ಇಷ್ಟೇ ಭಾರತದಲ್ಲಿ ಶೇಕಡಾ 35ರಷ್ಟು ತೆರಿಗೆ ಕಟ್ಟಿದ ಪ್ರಜೆಗೆ ಸಿಗುತ್ತಿರುವುದೇನು? ಉತ್ತರ ಯೂರೋಪ್ ದೇಶದಲ್ಲಿ ಸಿಗುವುದೇನು ಎಂದು ವಿವರಿಸಿದ್ದಾರೆ.

ಉತ್ತರ ಯೂರೋಪ್ ದೇಶದಲ್ಲಿ 30 ರಿಂದ 40 ಶೇಕಡಾ ತೆರಿಗೆ ಕಟ್ಟುವ ಪ್ರಜೆಗೆ ಸಿಗವುದೇನು?

ಉಚಿತ ಶಿಕ್ಷಣ

ಉಚಿತ ಆರೋಗ್ಯ ಸೌಲಭ್ಯ

ಉತ್ತಮ ಕೆಲಸದ ವಾತವಾರಣ ಹಾಗೂ ಸೌಲಭ್ಯ

ಅತ್ಯುತ್ತಮ ರಸ್ತೆ ಹಾಗೂ ಮೂಲಭೂತ ಸೌಕರ್ಯ

ಉದ್ಯೋಗ ಕಳೆದುಕೊಂಡರು ರಕ್ಷಣೆ

ಭಾರತದಲ್ಲಿ ಶೇಕಡಾ 35ರಷ್ಟು ತೆರಿಗೆ ಪಾವತಿಸಿದರೆ ಸಿಗುವುದೇನು?

ಗುಂಡಿ ಬಿದ್ದ ರಸ್ತೆ

ಭ್ರಷ್ಟ ನಾಯಕರು

ಆರೋಗ್ಯ-ಚಿಕಿತ್ಸೆ ಮೇಲೂ ದುಬಾರಿ ತೆರಿಗೆ

ಉದ್ಯೋಗ ಕಳೆದುಕೊಂಡರೆ ಯಾವುದೇ ರಕ್ಷಣೆ ಇಲ್ಲ

 

 

ಉತ್ತರ ಯೂರೋಪ್ ದೇಶಗಳು ಹಲವು ಉತ್ಪನ್ನಗಳ ರಫ್ತು ಮೂಲಕ ತಮ್ಮ ಆದಾಯ ಹಾಗೂ ಬಜೆಟ್‌ನ್ನು ಯಾವತ್ತೂ ಲಾಭದಲ್ಲಿರಿಸುತ್ತದೆ. ದೇಶದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಇಲ್ಲ. ತಕ್ಷಣವೇ ಸರ್ಕಾರ ಸ್ಪಂದಿಸಿ ಕಾರ್ಯಪ್ರವೃತ್ತವಾಗುತ್ತದೆ. ಆದರೆ ಭಾರತದಲ್ಲಿ ಇಷ್ಟು ವರ್ಷವಾದರೂ ಕನಿಷ್ಠ ಮೂಲಭೂತ ಸೌಕರ್ಯಗಳೇ ಸಿಗುತ್ತಿಲ್ಲ ಎಂದು ವಿನೀತ್ ಹೇಳಿದ್ದಾರೆ.

ಹಲವರು ವಿನೀತ್ ಕೆ ಮಾತನ್ನು ಬೆಂಬಲಿಸಿದ್ದಾರೆ. ಭಾರತ ಸಾಕಷ್ಟು ಹಿಂದಿದೆ ಎಂದಿದ್ದಾರೆ. ಇದೇ ವೇಳೆ ಭಾರತವನ್ನು ಇತರ ದೇಶಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇಲ್ಲಿನ ಜನಸಂಖ್ಯೆ, ನಾರೀಕ ಪ್ರಜ್ಞೆ, ಶಿಕ್ಷಣ, ಭೌಗೋಳಿಕತೆ, ಆಡಳಿತ ವ್ಯವಸ್ಥೆ ಎಲ್ಲವೂ ಭಿನ್ನ. ಅಭಿವೃದ್ಧಿ ವೇಗ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ. ಆದರೆ ಅಭಿವೃದ್ಧಿಯಾಗುತ್ತಿದೆ. ಮಹತ್ತರ ಬದಲಾವಣೆಗಳು ಆಗಿದೆ. ಸಾಕಷ್ಟು ದೂರ ಕ್ರಮಿಸಬೇಕಿದೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..