ರೈಲು ಕೋಚ್‌ನಲ್ಲಿ ಸಾಮೂಹಿಕ ಅತ್ಯಾಚಾ*ರ ಮಾಡಿ, ಹಳಿಯಲ್ಲಿ ಬೀಸಾಡಿ ಹೋದ ಕಾಮುಕರು!

Published : Jul 07, 2025, 05:30 PM IST
Railway Station single woman

ಸಾರಾಂಶ

ಗಂಡನ ಜೊತೆ ಜಗಳವಾಡಿ ಮನೆ ಬಿಟ್ಟು ಬಂದ ಮಹಿಳೆಯ ಮೇಲೆ ರೈಲ್ವೆ ನಿಲ್ದಾಣದಲ್ಲಿ ಮೂವರು ವ್ಯಕ್ತಿಗಳು ಅತ್ಯಾಚಾ*ರ ಎಸಗಿ, ರೈಲು ಹಳಿ ಮೇಲೆ ಬಿಟ್ಟು ಹೋಗಿದ್ದಾರೆ. ರೈಲು ಡಿಕ್ಕಿ ಹೊಡೆದು ಮಹಿಳೆಯ ಕಾಲು ತುಂಡಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮನೆಯಲ್ಲಿ ಗಂಡನ ಜೊತೆ ಜಗಳ ಮಾಡಿಕೊಂಡು ಮನೆಯಿಂದ ಹೊರಬಂದ ಮಹಿಳೆ ರೈಲ್ವೆ ನಿಲ್ದಾಣದ ಬಳಿ ಬಂದು ಕುಳಿತುಕೊಂಡಿದ್ದಾಳೆ. ಆದರೆ, ನಿಮ್ಮನ್ನು ನಿಮ್ಮ ಪತಿ ನಮ್ಮನ್ನು ಕಳುಹಿಸಿದ್ದಾರೆ, ನಿಮ್ಮ ಮನೆಗೆ ಬಿಡುತ್ತೇವೆ ಎಂದು ಕರೆದುಕೊಂಡು ಹೋದ ವ್ಯಕ್ತಿ ರೈಲು ನಿಲ್ದಾಣದಲ್ಲಿದ್ದ ರೈಲ್ವೆ ಕೋಚ್‌ನ ಒಳಗೆ ಎಳೆದೊಯ್ದು ಅತ್ಯಾಚಾ*ರ ಮಾಡಿದ್ದಾನೆ. ಪುನಃ ಇಬ್ಬರು ರೈಲ್ವೆ ಕೋಚ್ ಒಳಗೆ ಬಂದು ಮಹಿಳೆ ಬಿದ್ದು ಕಾಮತೃಷೆ ತೀರಿಸಿಕೊಂಡಿದ್ದಾರೆ. ಇದಾದ ನಂತರ ಮಹಿಳೆಯನ್ನು ರೈಲ್ವೆ ಹಳಿಗೆ ಕಾಲು ಕಟ್ಟಿ ಬಿಟ್ಟು ಹೋಗಿದ್ದು, ರೈಲು ಬಂದು ಗುದ್ದಿದ್ದರಿಂದ ಮಹಿಳೆ ಕಾಲು ತುಂಡಾಗಿದೆ.

ಈ ಭಯಂಕರ ಘಟನೆ ಹರಿಯಾಣದಲ್ಲಿ ನಡೆದಿದೆ. 35 ವರ್ಷದ ಮಹಿಳೆಯ ಮೇಲೆ ರೈಲಿನ ಒಂಟಿ ಕೋಚ್‌ನಲ್ಲಿ ಗ್ಯಾಂಗ್ ರೇಪ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಡನ ಜೊತೆಗೆ ಜಗಳ ಮಾಡಿಕೊಂಡ ನಂತರ ಮಹಿಳೆ ಮನೆಯಿಂದ ಹೊರಟು ಬಂದಿದ್ದು, ಸಾಮೂಹಿಕ ಬಲಾತ್ಕಾರಕ್ಕೆ ಒಳಗಾಗಿದ್ದಾಳೆ. ಈ ಮಹಿಳೆ ಜೂನ್ 24 ರಂದು ಮನೆಯಿಂದ ಕಾಣೆಯಾಗಿದ್ದಳು. ಜೂ.26 ರಂದು ಪತಿ ಪೊಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ಜಗಳ ಮಾಡಿಕೊಂಡು ಹೋದ ಹೆಂಡತಿ ವಾಪಸ್ ಬಂದಿಲ್ಲ. ಈ ಹಿಂದೆಯೂ ಹೀಗೆ ಜಗಳ ಮಾಡಿಕೊಡು ಹೊರಟು ಹೋಗಿದ್ದ ಹೆಂಡತಿ, ವಾಪಸ್ ಬಂದಿದ್ದಳು. ಈಗ ಎರಡು ದಿನವಾದರೂ ವಾಪಸ್ ಬಂದಿಲ್ಲವೆಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು ಮನೆಬಿಟ್ಟು ಬಂದಿದ್ದ ಮಹಿಳೆ ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದಾಗ, ಅಲ್ಲಿಗೆ ಬಂದ ವ್ಯಕ್ತಿ ನಿಮ್ಮ ಹೆಸರೇನು? ಏತಕ್ಕೆ ಅಳುತ್ತಿದ್ದೀರಿ? ಎಂದೆಲ್ಲಾ ಕೇಳಿದ್ದಾನೆ. ನಂತರ ಆಕೆಗೆ ನೀರಿನ ಬಾಟಲಿ ಕೊಟ್ಟು, ನಿಮ್ಮನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮ ಪತಿಯೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಹೇಳಿದ ವ್ಯಕ್ತಿ ನಿಮ್ಮನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿದ್ದಾನೆ. ನಿಮ್ಮ ಪತಿ ಇಲ್ಲೇ ಇದ್ದಾರೆ ಎಂದು ಆಗತಾನೇ ನಿಲ್ದಾಣಕ್ಕೆ ಬಂದು ನಿಲ್ಲಿಸಿದ್ದ ರೈಲಿನ ಖಾಲಿ ಬೋಗಿಗೆ ಕರೆದುಕೊಂಡು ಹೋಗಿ ಅತ್ಯಾಚಾ*ರ ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.

ಆತ ಎದ್ದು ಹೋದ ನಂತರ ಇನ್ನಿಬ್ಬರು ಬೋಗಿಯ ಒಳಗೆ ಬಂದು ನನ್ನ ಮೇಲೆ ಅತ್ಯಾಚಾ*ರ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಮೂವರೂ ಸಾಮೂಹಿಕವಾಗಿ ಬಲಾತ್ಕಾರ ಮಾಡಿದ ನಂತರ ಬಾಯಿಗೆ ಬಟ್ಟೆ ತುರುಕಿ ಕಾಲು ಕಟ್ಟಿ ರೈಲ್ವೆ ಹಳಿ ಮೇಲೆ ಬಿಟ್ಟು ಹೋಗಿದ್ದಾರೆ. ಈ ವೇಳೆ ಹಳಿ ಮೇಲೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದು ಒಂದು ಕಾಲು ಮುರಿದು ಹೋಗಿದೆ. ಇದೀಗ ಮಹಿಳೆ ಚಿಕಿತ್ಸೆಯಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ