
ನವದೆಹಲಿ (ಜೂ.5): ನವೀಕರಿಸಬಹುದಾದ ಇಂಧನ(Renewable energy)ದತ್ತ ಮುಖ ಮಾಡುತ್ತಿರುವ ಭಾರತ(India)ವು 2025ರಲ್ಲಿ 37 ಗಿಗಾವ್ಯಾಟ್‌ನಷ್ಟು ಹೆಚ್ಚುವರಿ ಸೌರ ವಿದ್ಯುತ್(Solar power) ಉತ್ಪಾದಿಸುವ ಸಾಮರ್ಥ್ಯಗಳಿಸಿಕೊಂಡಿದ್ದು, ಸೋಲಾರ್ ಸಾಮರ್ಥ್ಯ ವೃದ್ಧಿ ಸಾಧಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿದಿದೆ.
‘ಅಗತ್ಯ ನೀತಿಗಳ ಮೂಲಕ ಬೆಂಬಲ, ನಾವೀನ್ಯತೆ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯದ ಲಭ್ಯತೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ(Pralhad joshi) ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
315 ಗಿ.ವ್ಯಾ.ನಷ್ಟು ಸಾಮರ್ಥ್ಯ ವೃದ್ಧಿಯೊಂದಿಗೆ ಚೀನಾ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಅಮೆರಿಕ ಕಳೆದ ವರ್ಷ 34 ಗಿ.ವ್ಯಾ.ನಷ್ಟು ಹೆಚ್ಚು ಸೌರ ವಿದ್ಯುತ್ ಉತ್ಪಾದಿಸಲು ಶಕ್ತವಾಗಿದೆ. ಭಾರತವು 2025ರಲ್ಲಿ 37 ಗಿಗಾವ್ಯಾಟ್‌ನಷ್ಟು ಹೆಚ್ಚುವರಿ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯಗಳಿಸಿಕೊಂಡಿದೆ. 2024ರಲ್ಲಿ 25.4 ಗಿ.ವ್ಯಾ. ಮತ್ತು 2023ರಲ್ಲಿ 9.6 ಗಿ.ವ್ಯಾ. ಹೆಚ್ಚುವರಿ ಉತ್ಪಾದನೆಯ ಸಾಮರ್ಥ್ಯವನ್ನು ಗಳಿಸಿಕೊಂಡಿತ್ತು.
ಗಮನಿಸಬೇಕಾದ ಅಂಶವೆಂದರೆ, ಒಟ್ಟು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಅಮೆರಿಕವು (211.6 ಗಿ.ವ್ಯಾ.) ಭಾರತಕ್ಕಿಂತ (135.5 ಗಿ.ವ್ಯಾ.) ಮುಂದೆಯೇ ಇದೆ.
Vision for 2047 is clear, every household should have rooftop solar and every consumer should also be an electricity producer. pic.twitter.com/GDFSYvu2Ro
— Pralhad Joshi (@JoshiPralhad) June 4, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ