ನಿರ್ಮಾಣ ಹಂತದ ಭಾರತದ ಅತಿದೊಡ್ಡ ಸೇತುವೆ ಕುಸಿದು 1 ಸಾವು , 9 ಮಂದಿ ಗಂಭೀರ

By Suvarna News  |  First Published Mar 22, 2024, 4:32 PM IST

ಕೋಸಿ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ದೇಶದ ಅತಿದೊಡ್ಡ ಸೇತುವೆ ಕುಸಿದ್ದು ಓರ್ವ ಸಾವನ್ನಪ್ಪಿ 9 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.


ಪಾಟ್ನಾ (ಮಾ.22): ಕೋಸಿ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ದೇಶದ ಅತಿದೊಡ್ಡ ಸೇತುವೆ ಕುಸಿದ್ದು ಓರ್ವ ಸಾವನ್ನಪ್ಪಿ 9 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ  ಸುಪೌಲ್ ಜಿಲ್ಲೆಯಲ್ಲಿ  ಕಾಮಗಾರಿ ಹಂತದಲ್ಲಿರುವ ಬಕೌರ್ ಸೇತುವೆ ಮಾರ್ಚ್ 22 ರಂದು  ಕುಸಿದುಬಿದ್ದು, ಈ ದುರಂತ ಸಂಭವಿಸಿದೆ. ಕೋಸಿ ನದಿಗೆ ಅಡ್ಡಲಾಗಿ 10.2 ಕಿಮೀ ಸೇತುವೆಯನ್ನು ಬಿಹಾರದ ಮಧುಬನಿ ಮತ್ತು ಸುಪೌಲ್ ಜಿಲ್ಲೆಗಳಲ್ಲಿ ಭೇಜಾ ಮತ್ತು ಬಕೌರ್ ನಡುವೆ ನಿರ್ಮಿಸಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ ಸುಪೌಲ್‌ನಲ್ಲಿ ನಿರ್ಮಾಣ ಹಂತದ ಸೇತುವೆಯ ಮೂರು ಪಿಲ್ಲರ್‌ಗಳು ಕುಸಿದು ಬಿದ್ದಾಗ ಕನಿಷ್ಠ ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದಾನೆ. ಗಾಯಾಳುಗಳು ಸ್ಥಳೀಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tap to resize

Latest Videos

ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್‌ ವಿರುದ್ಧ ಹಿಗ್ಗಾಮುಗ್ಗಾ ಥಳಿತ!

ಸುಪೌಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಕೌಶಲ್ ಕುಮಾರ್ ಅವರು ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.  ಹೆಚ್ಚಿನ ಕಾರ್ಮಿಕರ ಸಾವಿನ ಸಾಧ್ಯತೆಯನ್ನು ಅವರು ತಳ್ಳಿಹಾಕದಿದ್ದರೂ ಸಹ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮಧುಬನಿಯ ಭೇಜಾ ಮತ್ತು ಸುಪೌಲ್ ಜಿಲ್ಲೆಯ ಬಕೌರ್ ನಡುವೆ ಕೋಸಿ ನದಿಯ ಮೇಲೆ 10.2 ಕಿಮೀ ಸೇತುವೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸುತ್ತಿದೆ. 

ಘಟನೆ ನಡೆದಾಗ 40ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು  ತಿಳಿದುಬಂದಿದ್ದು, ಇದುವರೆಗೆ 9 ಕಾರ್ಮಿಕರನ್ನು ರಕ್ಷಿಸಲಾಗಿದೆ. ಕೋಸಿ ನದಿಗೆ ಅಡ್ಡಲಾಗಿ 10.2 ಕಿಮೀ ಸೇತುವೆಯನ್ನು ಬಿಹಾರದ ಮಧುಬನಿ ಮತ್ತು ಸುಪೌಲ್ ಜಿಲ್ಲೆಗಳಲ್ಲಿ ಭೇಜಾ ಮತ್ತು ಬಕೌರ್ ನಡುವೆ ನಿರ್ಮಿಸಲಾಗುತ್ತಿದೆ. ಸೇತುವೆಯು 170 ಸ್ಪ್ಯಾನ್‌ಗಳನ್ನು ಒಳಗೊಂಡಿದೆ.

ನಟ ಶಿವರಾಜ್‌ ಕುಮಾರ್ ನಟಿಸಿರುವ ಸಿನಿಮಾಗಳಿಗೆ ನಿರ್ಬಂಧ ಹೇರಿ, ಬಿಜೆಪಿ ದೂರು ದಾಖಲು!

ಗ್ಯಾಮನ್ ಇಂಡಿಯಾ ಮತ್ತು ಟ್ರಾನ್ಸ್ ರೈಲ್ ಲೈಟಿಂಗ್ ಲಿಮಿಟೆಡ್ ಎಂಬ ಎರಡು ಕಂಪನಿಗಳು ಜಂಟಿಯಾಗಿ  984 ಕೋಟಿ ರೂ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸುತ್ತಿವೆ.

ಸೇತುವೆಯನ್ನು 2023 ರ ವೇಳೆಗೆ ಪೂರ್ಣಗೊಳಿಸಬೇಕಾಗಿತ್ತು ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. ಈ ವರ್ಷದ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ. 

click me!