ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟಿಸಿದೆ. 4ನೇ ಪಟ್ಟಿಯಲ್ಲಿ ತಮಿಳುನಾಡು ಹಾಗೂ ಪುದುಚೇರಿಯ 14 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಪೈಕಿ ಹಿರಿಯ ಹಾಗೂ ಜನಪ್ರಿಯ ನಟ ಶರತ್ ಕುಮಾರ್ ಪತ್ನಿ ರಾಧಿಕಾ ಶರತ್‌ಕುಮಾರ್‌ಗಿ ಬಿಜೆಪಿ ಟಿಕೆಟ್ ನೀಡಿದೆ.
ನವದೆಹಲಿ(ಮಾ.22) ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಇದೀಗ ತನ್ನ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಪ್ರಕಟಿಸಿದೆ. ತಮಿಳನುನಾಡಿನ 14 ಕ್ಷೇತ್ರ ಹಾಗೂ ಪುದುಚೇರಿಯ 1 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ತಮಿಳುನಾಡಿನ ವಿರುಧುನಗರ ಕ್ಷೇತ್ರದಿಂದ ಬಿಜೆಪಿ ಹಿರಿಯ ನಟ ಶರತ್ ಕುಮಾರ್ ಪತ್ನಿ ರಾಧಿಕಾ ಶರತ್‌ಕುಮಾರ್‌ಗೆ ಟಿಕೆಟ್ ಘೋಷಿಸಿದೆ. ಈ ಮೂಲಕ ಬಿಜೆಪಿ ಜೊತೆ ವೀಲಿನಗೊಂಡ ಬೆನ್ನಲ್ಲೇ ರಾಧಿಕಾ ಶರತ್‌ಕುಮಾರ್‌ಗೆ ಮಹತ್ವದ ಟಿಕೆಟ್ ನೀಡಲಾಗಿದೆ.
ಎರಡು ವಾರಗಳ ಹಿಂದೆ ಶರತ್ ಕುಮಾರ್ ನೇತೃತ್ವದ ಅಖಿಯ ಇಂಡಿಯಾ ಸಮಥುವಾ ಮಕ್ಕಳ್ ಕಚ್ಚಿ(AISMK) ಪಕ್ಷವನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಈ ವೀಲಿನಗೊಂಡ ಬೆನ್ನಲ್ಲೇ ಇದೀಗ ಬಿಜೆಪಿ ಶರತ್ ಕುಮಾರ್ ಪತ್ನಿಗೆ ಟಿಕೆಟ್ ಘೋಷಿಸಿದೆ. ವಿಧುನಗರ ಕ್ಷೇತ್ರದಿಂದ ರಾಧಿಕಾ ಶರತ್‌ಕುಮಾರ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯಕಾಂತ್ ಪುತ್ರ ಶಣ್ಮುಗಂ ಪಾಂಡಿಯನ್ ಕಣದಲ್ಲಿದ್ದಾರೆ.
ಕಾಂಗ್ರೆಸ್ ಸೇರಲ್ಲ, ಆದರೆ ಬಿಜೆಪಿ ಶುದ್ದ ಮಾಡುವೆ: ಡಿ.ವಿ.ಸದಾನಂದಗೌಡ
ಪುದುಚೇರಿ ಲೋಕಸಭಾ ಟಿಕೆಟ್ :
ಪುದುಚೇರಿ: ಎ ನಮಶಿವಾಯಂ
ತಮಿಳುನಾಡು ಲೋಕಸಭಾ ಟಿಕೆಟ್:
ಕರೂರ್: ವಿವಿ ಸೆಂಥಿಲನಾಥನ್
ಚಿದಂಬರಂ(ಎಸ್‌ಸಿ): ಕಾರ್ತಿಯಾಯಿನಿ
ತಿರುವಳ್ಳೂರ್ (ಎಸ್): ಬಾಲಗಣಪತಿ
ಚೆನ್ನೈ ಉತ್ತರ : ಪಾಲ್ ಕನಕರಾಜ್
ತಿರುವಣ್ಣಾಮಲೈ:ಅಶ್ವಥಾಮನ್
ನಾಮಕ್ಕಲ್: ಕೆ.ಪಿ.ರಾಮಲಿಂಗಂ
ತಿರುಪ್ಪೂರ್:ಎಪಿ ಮುರುಗಾನಂದಂ
ಪೊಲ್ಲಾಚಿ: ವಸಂತರಾಜನ್
ನಾಗಪಟ್ಟಣಂ (ಎಸ್‌ಸಿ):ಎಸ್‌ಜಿಎಂ ರಮೇಶ್
ತಂಜಾವೂರು :ಮುರುಗಾನಂದಂ
ಶಿವಗಂಗಾ: ದೇವನಾಥನ್ ಯಾದವ್
ವಿರುದುನಗರ: ರಾಧಿಕಾ ಶರತ್‌ಕುಮಾರ್
ಮಧುರೈ: ರಾಮ ಶ್ರೀನಿವಾಸನ್
ತೆಂಕಶಿ: ಜಾನ್ ಪಾಂಡಿಯನ್
ಲೋಕಸಭೆ ಚುನಾವಣೆ 2024: ಅಹಿಂದ ಮತಬೇಟೆಗೆ ರಾಜಕೀಯ ಪಕ್ಷಗಳ ಸರ್ಕಸ್..!
ಗುರುವಾರ(ಮಾ.21) ಬಿಜೆಪಿ ಲೋಕಸಭಾ ಚುನಾವಣೆಯ 3ನೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿತ್ತು. ಈ ಪೈಕಿ ತಮಿಳುನಾಡಿನ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ತಮಿಳುನಾಡು ಬಿಜೆಪಿಗೆ ಹೊಸ ಹುರುಪು ತುಂಬಿ ತಳಮಟ್ಟದಿಂದ ಪಕ್ಷ ಕಟ್ಟಿದ ಅಧ್ಯಕ್ಷ ಅಣ್ಣಾಮಲೈಗೆ ಕೊಯಂಬತ್ತೂರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಿದೆ. ಇತ್ತೀಚೆಗೆ ತೆಲಂಗಾಣ ರಾಝ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದ ತಮಿಳ್‌ಸಾಯ್ ಸೌಂದರರಾಜನ್ ಅವರಿಗೆ ಚೆನ್ನೈ ದಕ್ಷಿಣದ ಟಿಕೆಟ್ ನೀಡಲಾಗಿದೆ. ಮಾಜಿ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಕನ್ಯಾಕುಮಾರಿಯಿಂದ, ಹಾಲಿ ಕೇಂದ್ರ ಸಚಿವ ಎಲ್. ಮುರುಗನ್ ನೀಲಗಿರಿ (ಎಸ್ಸಿ) ಕ್ಷೇತ್ರದಿಂದ ಟಿಕೆಟ್ ಲಭಿಸಿದೆ. ಎಪ್ರಿಲ್ 19 ರಂದು ತಮಿಳುನಾಡಿನಲ್ಲಿ ಒಂದು ಹಂತದಲ್ಲಿ ಮತದಾನ ನಡೆಯಲಿದೆ.
18ನೇ ಲೋಕಸಭಾ ಚುನಾವಣೆ ಎಪ್ರಿಲ್ 19 ರಿಂದ ಆರಂಭಗೊಳ್ಳುತ್ತಿದೆ. ಜೂನ್ 1ರ ವರೆಗೆ 7 ಹಂತದಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ.7 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.