ದೆಹಲಿ ನಗರದಲ್ಲಿ ಹಾಲಿ ಸಂಸದರಿಗೆ ಮನೆ ನೀಡುವ ಪ್ರಕ್ರಿಯಿಗೆ ಲೋಕಸಭಾ ಹೌಸ್ ಕಮಿಟಿ ಚಾಲನೆ ನೀಡಿದ್ದು, ಈ ಹಿಂದೆ ಪ್ರಜ್ವಲ್ ರೇವಣ್ಣ ವಾಸಿಸುತ್ತಿದ್ದ ದೆಹಲಿಯ ಬಿ.ಡಿ.ಪಂತ್ ಮಾರ್ಗ್ ಸರಸ್ವತಿ ಅಪಾರ್ಟ್‌ಮೆಂಟ್‌ನ 9ನೇ ಫ್ಲೋರ್‌ನಲ್ಲಿರುವ ಮನೆಗೆ ಹೋಗಲು ಸಂಸದರು ಇಷ್ಟಪಡುತ್ತಿಲ್ಲ.
ನವದೆಹಲಿ(ಸೆ.10): ಹಾಸನದ ಪೆನ್‌ಡ್ರೈವ್ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಾಸವಿದ್ದ ಮನೆಯ ಸಹವಾಸ ನಮಗೆ ಬೇಡವೇ ಬೇಡ ಎಂದು ನೂತನ ಸಂಸದರು ಲೋಕಸಭಾ ಹೌಸ್ ಕಮಿಟಿಗೆ ಪತ್ರ ಬರೆದಿದ್ದಾರೆ.
ನಗರದಲ್ಲಿ ಹಾಲಿ ಸಂಸದರಿಗೆ ಮನೆ ನೀಡುವ ಪ್ರಕ್ರಿಯಿಗೆ ಲೋಕಸಭಾ ಹೌಸ್ ಕಮಿಟಿ ಚಾಲನೆ ನೀಡಿದ್ದು, ಈ ಹಿಂದೆ ಪ್ರಜ್ವಲ್ ರೇವಣ್ಣ ವಾಸಿಸುತ್ತಿದ್ದ ದೆಹಲಿಯ ಬಿ.ಡಿ.ಪಂತ್ ಮಾರ್ಗ್ ಸರಸ್ವತಿ ಅಪಾರ್ಟ್‌ಮೆಂಟ್‌ನ 9ನೇ ಫ್ಲೋರ್‌ನಲ್ಲಿರುವ ಮನೆಗೆ ಹೋಗಲು ಸಂಸದರು ಇಷ್ಟಪಡುತ್ತಿಲ್ಲ. ಈ ಬಗ್ಗೆ ಕರ್ನಾಟಕದ ಅಷ್ಟೇ ಅಲ್ಲದೆ ಉತ್ತರ ಪ್ರದೇಶದ ಹಲವು ಸಂಸದರು ಕಮಿಟಿಗೆ ಪತ್ರ ಬರೆದಿದ್ದು, ಆ ಮನೆಯ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಕೆಲ ಸಂಸದರು ಒಪ್ಪಿದರೂ ಅವರ ಕುಟುಂಬದ ಸದಸ್ಯರು ಪ್ರಜ್ವಲ್ ಇದ್ದ ಮನೆಗೆ ಹೋಗಲು ಸುತಾರಾಂ ಒಪ್ಪುತ್ತಿಲ್ಲ.
undefined
ಬಾತ್ ರೂಂಗೆ ಹೋಗಬೇಕು ಅಂದರೂ ಬಿಡದೆ ಕೆಲಸದ ಮಹಿಳೆ ಮೇಲೆ ಪ್ರಜ್ವಲ್ ರೇಪ್..!
ವಿನ್ಯಾಸ ಮಾಡಿಸಿದ್ದ ಪ್ರಜ್ವಲ್:
ಕಳೆದ 4 ವರ್ಷದ ಹಿಂದಷ್ಟೇ ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ಪ್ರಜ್ವಲ್ ರೇವಣ್ಣ ತಮಗಾಗಿ ಮನೆ ವಿನ್ಯಾಸ ಮಾಡಿಸಿಕೊಂಡಿದ್ದರು. ಸ್ವತಃ ತಾಯಿ ಭವಾನಿ ಹಾಗೂ ತಂದೆ ರೇವಣ್ಣ ಉಸ್ತುವಾರಿಯಲ್ಲಿ ಮನೆಗೆಲ್ಲಾ ಅಲಂಕಾರ ಮಾಡಲಾಗಿತ್ತು.