Covid Crisis: 1.27 ಲಕ್ಷ ಕೋವಿಡ್‌ ಕೇಸು ದಾಖಲು: 1 ತಿಂಗಳ ಕನಿಷ್ಠ

By Kannadaprabha News  |  First Published Feb 6, 2022, 7:30 AM IST

ದೇಶದಲ್ಲಿ ಕೋವಿಡ್‌ ಪ್ರಕರಣಗಳು ಮತ್ತಷ್ಟು ತಗ್ಗಿವೆ. ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1.27 ಲಕ್ಷ ಕೋವಿಡ್‌ ಕೇಸುಗಳು ದಾಖಲಾಗಿದ್ದು ಇದು ಒಂದು ತಿಂಗಳ (ಜ.6ರ ನಂತರ) ಕನಿಷ್ಠವಾಗಿದೆ.


ನವದೆಹಲಿ (ಫೆ.06): ದೇಶದಲ್ಲಿ ಕೋವಿಡ್‌ ಪ್ರಕರಣಗಳು (Covid Cases) ಮತ್ತಷ್ಟು ತಗ್ಗಿವೆ. ಶನಿವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1.27 ಲಕ್ಷ ಕೋವಿಡ್‌ ಕೇಸುಗಳು ದಾಖಲಾಗಿದ್ದು ಇದು ಒಂದು ತಿಂಗಳ (ಜ.6ರ ನಂತರ) ಕನಿಷ್ಠವಾಗಿದೆ. ಇದೇ ಅವಧಿಯಲ್ಲಿ ಕೇರಳದ (Kerala) 595 ಹಳೆಯ ಸಾವುಗಳು ಸೇರಿ ಒಟ್ಟು 1,059 ಸೋಂಕಿತರು ಸಾವಿಗೀಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 1,03,921 ಸಕ್ರಿಯ ಪ್ರಕರಣಗಳು ಇಳಿಕೆಯಾಗುವುದರೊಂದಿಗೆ 13.31 ಲಕ್ಷಕ್ಕೆ ಇಳಿದಿದೆ. ಇದು ಒಟ್ಟು ಪ್ರಕರಣದ ಶೇ.3.16ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರ ಶೇ.7.98ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.11.21ರಷ್ಟಿದೆ. ದೇಶದಲ್ಲಿ ಈವರೆಗೆ 168.98 ಕೋಟಿ ಡೋಸ್‌ ಕೋವಿಡ್‌ ಲಸಿಕೆ (Vaccine) ವಿತರಿಸಲಾಗಿದೆ. ಈವರೆಗೆ ಒಟ್ಟು 4.20 ಕೋಟಿ ಕೋವಿಡ್‌ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ ಮತ್ತು ಒಟ್ಟು ಸಾವು 5.01 ಲಕ್ಷಕ್ಕೆ ಏರಿಕೆಯಾಗಿದೆ.

Latest Videos

ನಿರ್ಬಂಧ ಹಿಂತೆಗೆತ: ಮಧ್ಯಪ್ರದೇಶದಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ, ಮದುವೆ ಕಾರ್ಯಕ್ರಮಗಳ ಮೇಲೆ ವಿಧಿಸಲಾಗಿದ್ದ 250 ಅತಿಥಿಗಳ ಮಿತಿಯನ್ನು ತೆಗೆದುಹಾಕಲಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ (Shivraj Singh Chouhan), ‘ನಿಮ್ಮೆಲ್ಲರಿಗೂ ಬಸಂತ ಪಂಚಮಿಯ ಶುಭಾಷಯಗಳು. ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣದಲ್ಲಿರುವುದು ತೃಪ್ತಿಯ ವಿಷಯವಾಗಿದೆ. 

Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ

ಆದ್ದರಿಂದ ಮದುವೆ ಮತ್ತು ಇನ್ನಿತರ ಸಮಾರಂಭಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ಪಂಚಮಿ ದಿನದಿಂದ ತೆಗೆದು ಹಾಕಲಾಗುತ್ತಿದೆ. ಎಲ್ಲರೂ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಿ ಎಂದು ಅವರು ಟ್ವೀಟ್‌ (Tweet) ಮಾಡಿದ್ದಾರೆ. ಕೋವಿಡ್‌ ಸೋಂಕು ಹೆಚ್ಚಾಗಿದ್ದ ಕಾರಣ ಜ.15ರಿಂದ ಮದುವೆಗಳಲ್ಲಿ ಭಾಗವಹಿಸುವವವರ ಮೇಲಿನ ಮಿತಿಯನ್ನು 250ಕ್ಕೆ ನಿಗದಿ ಮಾಡಲಾಗಿತ್ತು.

5 ಲಕ್ಷ ಗಡಿ ದಾಟಿದ ಕೊರೋನಾ ಸಾವು: ಭಾರತದಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕ, ಬ್ರೆಜಿಲ್‌ ಬಳಿಕ ಕೋವಿಡ್‌ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ.

ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾರ್ಚ್‌ 10ರಂದು ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿತ್ತು. ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ. ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.

Covid Crisis: ಬೆಂಗ್ಳೂರಲ್ಲಿ ವಾರದಲ್ಲಿ 2 ಲಕ್ಷ ಮಂದಿ ಗುಣಮುಖ: 92,000 ಕ್ಕಿಳಿದ ಸಕ್ರಿಯ ಕೇಸ್‌

ಕೋವಿಡ್ ಕೇಸು ಇಳಿಕೆ: ಈವ​ರೆಗೆ ದೈನಂದಿ​ನ ಹೆಚ್ಚು ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸು​ತ್ತಿದ್ದ ಕರ್ನಾ​ಟಕ, ಮಹಾ​ರಾಷ್ಟ್ರ ಸೇರಿ​ದಂತೆ ದೇಶದ 34 ರಾಜ್ಯ​ಗ​ಳಲ್ಲಿ ಕೊರೋನಾ ವೈರ​ಸ್ಸಿನ ತೀವ್ರತೆ ಗಣ​ನೀಯ ಪ್ರಮಾ​ಣ​ದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿ​ಟಿ​ವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯ​ಗ​ಳಲ್ಲಿ ಹೆಚ್ಚು ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗು​ತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿ​ಸಿದೆ. ದೇಶದ ಒಟ್ಟಾರೆ ಜಿಲ್ಲೆ​ಗಳ ಪೈಕಿ 268 ಜಿಲ್ಲೆ​ಗ​ಳಲ್ಲಿ ಕೋವಿಡ್‌ ಪಾಸಿ​ಟಿ​ವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿ​ಣಾ​ಮ​ಕಾರಿ ಲಸಿಕೆ ಅಭಿ​ಯಾ​ನದಿಂದಾಗಿ ಕೋವಿ​ಡ್‌ಗೆ ಬಲಿ​ಯಾ​ಗುವವರ ಸಂಖ್ಯೆ ನಿಯಂತ್ರ​ಣಕ್ಕೆ ಬಂದಿದೆ.

click me!