ಭಾರತದಲ್ಲಿ 21 ಹೊಸ ಕೋವಿಡ್ ತಳಿ JN.1 ಪ್ರಕರಣ ದೃಢ, 4ನೇ ಅಲೆ ಭೀತಿ!

Published : Dec 20, 2023, 04:22 PM ISTUpdated : Dec 20, 2023, 04:30 PM IST
ಭಾರತದಲ್ಲಿ 21 ಹೊಸ ಕೋವಿಡ್ ತಳಿ JN.1 ಪ್ರಕರಣ ದೃಢ, 4ನೇ ಅಲೆ ಭೀತಿ!

ಸಾರಾಂಶ

ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಕೇರಳದಲ್ಲಿ ಹೊಸ ಕೋವಿಡ್ ತಳಿ JN.1 ಪತ್ತೆಯಾಗಿ ಆತಂಕ ಹೆಚ್ಚಾಗಿತ್ತು.ಇದು ದೇಶದ ಮೊದಲ JN.1  ಪ್ರಕರಣವಾಗಿತ್ತು. ಇದೀಗ ಆತಂಕ ಮತ್ತಷ್ಟು ಹೆಚ್ಚಾಗಿದೆ. ಭಾರತದಲ್ಲಿ 21 ಹೊಸ ತಳಿ JN.1 ಪ್ರಕರಣ ಪತ್ತೆಯಾಗಿದೆ.

ನವದೆಹಲಿ(ಡಿ.20) ಭಾರತದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಕೇರಳದಲ್ಲಿ ದೇಶದ ಶೇಕಡಾ 90 ರಷ್ಟು ಪ್ರಕರಣ ಪತ್ತೆಯಾಗಿದೆ. ಮಂಗಳವಾರದ ಕೇರಳದಲ್ಲಿ 115 ಕೋವಿಡ್ ಕೇಸ್ ಪತ್ತೆಯಾಗಿತ್ತು. ಇದರ ನಡುವೆ ಹೊಸ ಕೋವಿಡ್ ತಳಿ JN.1 ವೈರಸ್ ಆತಂಕ ಶುರುವಾಗಿತ್ತು. ದೇಶದ ಮೊದಲ JN.1 ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲ ಮಾರ್ಗಸೂಚಿ ಪ್ರಕಟಿಸಿದೆ. ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಕೆಲ ಕೋವಿಡ್ ನಿಯಮಗಳು ಜಾರಿಯಾಗಿದೆ. ಇದೀಗ ಮತ್ತೊಂದು ಆತಂಕ ಎದುರಾಗಿದೆ. ದೇಶದಲ್ಲಿ ಹೊಸ ಕೋವಿಡ್ ತಳಿ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಇದೀಗ 21 ಕೋವಿಡ್ JN.1 ಪ್ರಕರಣ ಪತ್ತೆಯಾಗಿದೆ.

ಪತ್ತೆಯಾಗಿರುವ 21 ಪ್ರಕರಣಗಳ ಪೈಕಿ 19 ಪ್ರಕರಣ ಗೋವಾದಲ್ಲೇ ಪತ್ತೆಯಾಗಿದೆ. ಇನ್ನು ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಒಂದೊಂದು ಪ್ರಕರಣ ಪತ್ತೆಯಾಗಿದೆ. ದೇಶದಲ್ಲಿ JN.1ಪ್ರಕರಣ ಕ್ಷಿಪ್ರಗತಿಯಲ್ಲಿ ಹರಡುವ ಸಾಧ್ಯತೆ ಇದೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ನೀತಿ ಆಯೋಗ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ದೇಶದಲ್ಲಿ ಇದೀಗ 21 ಪ್ರಕರಣ ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ, ಸ್ಪಷ್ಟಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಒಂದೇ ವಾರದಲ್ಲಿ JN.1 ಪ್ರಕರಣ ಒಂದರಿಂದ 21ಕ್ಕೆ ಏರಿಕೆಯಾಗಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಮಹತ್ವದ ಸಭೆ ನಡೆಸಿದ್ದಾರೆ. ದೇಶದ ಕೋವಿಡ್ ಸ್ಥಿತಿಗತಿ ಕುರಿತು ಅವಲೋಕನ ನಡೆಸಿದ್ದಾರೆ. ಹೊಸ ವೈರಸ್ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಬೇಕು. ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿರಬೇಕು. ಜನರಿಗೆ ಸೂಕ್ತವಾದ ಚಿಕಿತ್ಸೆ, ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಸಿಗಬೇಕು. ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧಿಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ಮನ್ಸುಕ್ ಮಾಂಡವಿಯಾ ಸೂಚಿಸಿದ್ದಾರೆ.

ಭಾರತದಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ. ಆದರೆ ತಜ್ಞ ವೈದ್ಯರ ಪ್ರಕಾರ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಸದ್ಯ ಕಾಣಿಸಿಕೊಂಡಿರುವ ಪ್ರಕರಣಗಳು ಮೈಲ್ಡ್ ಸಿಂಪ್ಟಮ್ಸ್ ಹೊಂದಿದೆ. ಆಸ್ಪತ್ರೆ ದಾಖಲಾಗುವ ಸಂಖ್ಯೆ ತೀರಾ ವಿರಳ. ಹೋಮ್ ಐಸೋಲೇಶನ್‌ನಲ್ಲಿ ಕೋವಡ್ ಗುಣವಾಗುತ್ತಿದೆ. ಹೀಗಾಗಿ ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ಪಾಲಿಸಿದರೆ ಕೋವಿಡ್‌ನಿಂದ ದೂರ ಉಳಿಯಬಹುದು ಎಂದು ತಜ್ಞವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದರೆ.

ಕೋವಿಡ್ ಸೋಂಕು ಹೆಚ್ಚಳ; ರಾಜ್ಯದಲ್ಲಿ ಗರ್ಭಿಣಿ, ಬಾಣಂತಿಯರಿಗೂ ಮಾಸ್ಕ್ ಕಡ್ಡಾಯ

ಮಂಗಳವಾರ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 288 ಹೊಸ ಕೋವಿಡ್‌ ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. ಈ ಪೈಕಿ ಕೇರಳವೊಂದರಲ್ಲೇ 115 ಕೋವಿಡ್ ಕೇಸು ದಾಖಲಾಗಿದ್ದು, ಉಳಿದ ಒಟ್ಟು ದೇಶಾದ್ಯಂತ 173 ಕೇಸು ದಾಖಲಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ