ದೇಶದಲ್ಲಿ ಒಂದೇ ದಿನ ದಾಖಲೆಯ 7720 ಜನಕ್ಕೆ ವೈರಸ್‌!

By Kannadaprabha NewsFirst Published May 30, 2020, 10:32 AM IST
Highlights

ದಾಖಲೆಯ 7720 ಜನಕ್ಕೆ ವೈರಸ್‌| 2ನೇ ದಿನವೂ 7000 ಗಡಿ ದಾಟಿದ ಸೋಂಕಿತರ ಸಂಖ್ಯೆ| 150 ಸಾವು

ನವದೆಹಲಿ(ಮೇ.30): ನಾಲ್ಕನೇ ಹಂತದ ಲಾಕ್‌ಡೌನ್‌ ಮುಕ್ತಾಯಗೊಳ್ಳಲು ಕೇವಲ ಒಂದು ದಿನ ಬಾಕಿ ಇರುವಾಗಲೇ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಲು ಆರಂಭಿಸಿದೆ. ಗುರುವಾರ ದಾಖಲೆಯ 7135 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಶುಕ್ರವಾರ ಈ ದಾಖಲೆ ಕೂಡ ಭಗ್ನಗೊಂಡಿದ್ದು 7720 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 151 ಮಂದಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ 1,68,386ಕ್ಕೆ ಏರಿಕೆಯಾಗಿದ್ದರೆ, ಸಾವಿಗೀಡಾದವರ ಸಂಖ್ಯೆ 4784ಕ್ಕೇರಿಕೆಯಾಗಿದೆ. ಸಾವಿನ ವೇಗ ಗಮನಿಸುತ್ತಿದ್ದರೆ, ಇನ್ನೆರಡು ದಿನಗಳಲ್ಲಿ 5000 ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ. ಈ ನಡುವೆ, ದೇಶದಲ್ಲಿ ಕೊರೋನಾದಿಂದ 81,702 ಮಂದಿ ಚೇತರಿಸಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡನಿಗೆ ಕೊರೋನಾ ಭೀತಿ

ಈ ನಡುವೆ, ಮಹಾರಾಷ್ಟ್ರದಲ್ಲಿ ಒಂದೇ ದಿನ 116 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 2098ಕ್ಕೆ ಹೆಚ್ಚಳವಾಗಿದೆ. 2682 ಮಂದಿಯಲ್ಲಿ ಸೋಂಕು ಕಂಡುಬಂದಿದ್ದು, ಸೋಂಕಿತರ ಸಂಖ್ಯೆ 62228ಕ್ಕೆ ಹೆಚ್ಚಳವಾಗಿದೆ. ಈ ನಡುವೆ, ಶುಕ್ರವಾರ ಒಂದೇ ದಿನ 8381 ಮಂದಿ ಡಿಸ್ಚಾಜ್‌ರ್‍ ಆಗಿದ್ದಾರೆ. ಇದರೊಂದಿಗೆ ಚೇತರಿಕೆಯಾದವರ ಸಂಖ್ಯೆ 26998ಕ್ಕೆ ಹೆಚ್ಚಳವಾಗಿದೆ.

click me!