
ನವದೆಹಲಿ(ಮೇ.30): ಕೊರೋನಾ ಶಂಕಿತರ ಗಂಟಲು ದ್ರವ ಮಾದರಿಯನ್ನು ಕೋತಿಗಳ ಗುಂಪೊಂದು ಹೊತ್ತೊಯ್ದಿರುವ ವಿಚಿತ್ರ ಘಟನೆ ಶುಕ್ರವಾರ ಉತ್ತರ ಪ್ರದೇಶದ ಮೇರಠ್ ವೈದ್ಯ ಕಾಲೇಜು ಆವರಣದಲ್ಲಿ ನಡೆದಿದೆ.
ಕೊರೋನಾ ಶಂಕಿತರ ಗಂಟಲು ದ್ರವ ಪರೀಕ್ಷೆಗೆಂದು ಸ್ಯಾಂಪಲ್ಸ್ ಹಿಡಿದು ಬರುತ್ತಿದ್ದ ಪ್ರಯೋಗಾಲಯ ಸಿಬ್ಬಂದಿ ಮೇಲೆ ದಾಳಿ ಮಾಡಿದ ಕೋತಿಗಳ ಗುಂಪು, ಮೂವರು ಶಂಕಿತರ ಸ್ಯಾಂಪಲ್ ಕಿಟ್‌ಗಳನ್ನು ಹೊತ್ತೊಯ್ದಿದೆ. ಈ ಕಪಿಚೇಷ್ಟೆ ವಿಡಿಯೋ ವೈರಲ್ ಆಗಿದ್ದು, ಕೋತಿಯೊಂದು ಮರದ ಮೇಲೆ ಕುಳಿತು ಮಾದರಿ ಸಂಗ್ರಹಿಸಿದ ಕಿಟ್‌ಅನ್ನು ಅಗಿಯುವ ದೃಶ್ಯವಿದೆ.
ಘಟನೆ ಸಂಬಂಧ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಮಂಗಗಳನ್ನು ಇನ್ನೂ ಸೆರೆಹಿಡಿದಿಲ್ಲರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ವೈದ್ಯರು ಮತ್ತೊಮ್ಮೆ ಶಂಕಿತರ ಗಂಟಲು ದ್ರವವನ್ನು ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ