ಮಲೇರಿಯಾ ನಿಯಂತ್ರಿಸಿದ ಭಾರತಕ್ಕೆ ವಿಶ್ವಸಂಸ್ಥೆ ಶಹಬ್ಬಾಸ್!

By Suvarna NewsFirst Published Dec 2, 2020, 1:10 PM IST
Highlights

ಮಲೇರಿಯಾ ನಿಯಂತ್ರಿಸಿದ ಭಾರತಕ್ಕೆ ವಿಶ್ವಸಂಸ್ಥೆ ಶಹಭಾಸ್‌| 2 ಕೋಟಿಯಿಂದ 60 ಲಕ್ಷಕ್ಕೆ ಪ್ರಕರಣ ಕುಸಿತ

ವಿಶ್ವಸಂಸ್ಥೆ(ಡಿ.02): ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಭಾರತ ಪರಿಣಾಮಕಾರಿ ಯಶಸ್ಸು ಸಾಧಿಸಿದೆ. 2000-2019ರವರೆಗೆ ಮಲೇರಿಯಾ ಪ್ರಕರಣಗಳ ಸಂಖ್ಯೆ ಅಂದಾಜು 2 ಕೋಟಿಯಿಂದ 60 ಲಕ್ಷಕ್ಕೆ ಇಳಿಕೆಯಾಗಿದೆ. ಸಾವಿನ ಸಂಖ್ಯೆಯೂ ಕಳೆದ 19 ವರ್ಷಗಳಲ್ಲಿ 29,500ರಿಂದ 7,700ಕ್ಕೆ ತಗ್ಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಟೆಡ್ರೋಸ್‌ ಗೇಬ್ರಿಯಾಸಸ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಗ್ರಹಚಾರ ಅಂದ್ರೆ ಇದೇನಾ! ಡೆಂಗ್ಯೂ, ಮಲೇರಿಯಾ, ಕೊರೋನಾ ಗೆದ್ದಿದ್ದ ವ್ಯಕ್ತಿಗೆ ಕಚ್ಚಿದ ಕಾಳಿಂಗ

ವಿಶ್ವ ಮಲೇರಿಯಾ ವರದಿ-2020 ಅನ್ನು ಡಬ್ಲ್ಯುಎಚ್‌ಒ ಸೋಮವಾರ ಬಿಡುಗಡೆ ಮಾಡಿದ್ದು, ಆಗ್ನೇಯ ಏಷ್ಯಾದಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಶೇ.73ರಷ್ಟುತಗ್ಗಿದೆ. ಇಲ್ಲಿ 2000ನೇ ಇಸವಿಯಲ್ಲಿ 2.3 ಕೋಟಿ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದರೆ, ಕಳೆದ ವರ್ಷ ಕೇವಲ 63 ಲಕ್ಷ ಮಲೇರಿಯಾ ಪ್ರಕರಣಗಳು ದೃಢವಾಗಿವೆ. ಇನ್ನು ಕಾಯಿಲೆಯಿಂದ ಸಾವನ್ನಪ್ಪುವವರ ಪ್ರಮಾಣವೂ 35,000ದಿಂದ 9000ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ಅಲ್ಲದೆ 2019ರಲ್ಲಿ ಜಾಗತಿಕವಾಗಿ 22.9 ಕೋಟಿ ಮಲೇರಿಯಾ ಪ್ರಕರಣಗಳು ದೃಢವಾಗಿವೆ. ಕಳೆದ ವರ್ಷ ಈ ಕಾಯಿಲೆಗೆ 4,09,000 ಜನರು ಬಲಿಯಾಗಿದ್ದರೆ 2018ರಲ್ಲಿ 4,11,000 ಜನರು ಬಲಿಯಾಗಿದ್ದಾರೆ ಎಂದು ಹೇಳಿದೆ.

ವಾಸುಕಿ ವೈಭವ್‌ ರಿಯಲ್‌ ಆಗಿ ಹೇಗೆ ತಿಂತಾರೆ, ಫೋಟೋಗೆ ಹೇಗೆ ಪೋಸ್‌ ಕೊಡ್ತಾರೆ ನೋಡಿ!

ಆದರೆ ಅತಿ ಹೆಚ್ಚು ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿರುವ ಮತ್ತು ಅದರಿಂದ ಅತಿ ಹೆಚ್ಚು ಸಾವು ದಾಖಲಾಗುತ್ತಿರುವ 11 ದೇಶಗಳನ್ನು ಡಬ್ಲ್ಯುಎಚ್‌ಒ ಪಟ್ಟಿಮಾಡಿದ್ದು, ಅದರಲ್ಲಿ ಭಾರತ 5ನೇ ಸ್ಥಾನ ಪಡೆದಿದೆ.

click me!