ಸೈಡ್‌ ಎಫೆಕ್ಟ್ ಬೀರಿದೆ ಎಂದು ಲಸಿಕೆಗೆ ತಡೆ ನೀಡಲಾಗದು: ಕೇಂದ್ರ

By Kannadaprabha NewsFirst Published Dec 2, 2020, 9:31 AM IST
Highlights

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಯು ಪ್ರಯೋಗ ಹಂತ, ಅಡ್ಡ ಪರಿಣಾಮ| ಸೈಡ್‌ ಎಫೆಕ್ಟ್ ಬೀರಿದೆ ಎಂದು ಲಸಿಕೆಗೆ ತಡೆ ನೀಡಲಾಗದು

ನವದೆಹಲಿ(ಡಿ.02): ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಯು ಪ್ರಯೋಗ ಹಂತದಲ್ಲಿ ಚೆನ್ನೈನ ಸ್ವಯಂಸೇವಕರೊಬ್ಬರ ಮೇಲೆ ಅಡ್ಡ ಪರಿಣಾಮ ಬೀರಿದೆ ಎಂದ ಮಾತ್ರಕ್ಕೆ ಪ್ರಯೋಗಕ್ಕೆ ತಡೆ ನೀಡಲು ಸಾಧ್ಯವಿಲ್ಲ. ಆರೋಪ ಸತ್ಯವೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಔಷಧ ನಿಯಂತ್ರಣ ಸಂಸ್ಥೆಯ ಜವಾಬ್ದಾರಿ ಎಂದು ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ಆಗಸ್ಟ್‌ ಒಳಗೆ 30 ಕೋಟಿ ಜನರಿಗೆ ಲಸಿಕೆ: ಕೇಂದ್ರ!

ಈ ಮೂಲಕ ಅಪವಾದ ಎದುರಿಸುತ್ತಿದ್ದ ಸೀರಂ ಇನ್‌ಸ್ಟಿಟ್ಯೂಟ್‌ಗೆ ಕೇಂದ್ರ ಸರ್ಕಾರ ಕ್ಲೀನ್‌ಚಿಟ್‌ ನೀಡಿದೆ. ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನಿಕಾ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್‌’ ಲಸಿಕೆಯ ಪ್ರಯೋಗ ಮತ್ತು ಉತ್ಪಾದನೆಗೆ ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ ಹಕ್ಕು ಪಡೆದಿದೆ.

ಕೊರೋನಾ ಕುರಿತಾಗಿ ಮತ್ತೊಂದು ಶಾಕಿಂಗ್ ಮಾಹಿತಿ ಬಯಲು!

ಆದರೆ ಇತ್ತೀಚೆಗೆ 3ನೇ ಹಂತದ ಪ್ರಯೋಗದಲ್ಲಿ ಭಾಗಿಯಾಗಿದ್ದ ಚೆನ್ನೈ ಮಹಿಳೆಯೊಬ್ಬರ ಮೇಲೆ ಲಸಿಕೆಯು ಅಡ್ಡ ಪರಿಣಾಮ ಬೀರಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 5 ಕೋಟಿ ರು. ಪರಿಹಾರ ಕೋರಿ ಸೆರಂ ಇನ್‌ಸ್ಟಿಟ್ಯೂಟ್‌ ವಿರುದ್ಧ ನೋಟಿಸ್‌ ಸಹ ಜಾರಿ ಮಾಡಲಾಗಿತ್ತು. ಆದರೆ ಸೆರಂ ಈ ಆರೋಪವನ್ನು ಅಲ್ಲಗಳೆದಿತ್ತು.

click me!