
ನವದೆಹಲಿ (ಜ. 26): ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ (Transparency International ) 2021ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, 40 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಭಾರತ (India) 180 ದೇಶಗಳ ಪಟ್ಟಿಯಲ್ಲಿ 85ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತ ಸೇರಿದಂತೆ 147 ದೇಶಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಹೇಳಿದೆ.
ಸೊನ್ನೆಯಿಂದ 100ರವರೆಗೆ ಅಂಕಗಳನ್ನು ನೀಡುವ ಮೂಲಕ ಭ್ರಷ್ಟಾಚಾರದ ಪ್ರಮಾಣವನ್ನು ಅಳತೆ ಮಾಡಲಾಗುತ್ತದೆ. ಸೊನ್ನೆ ಅಂಕ ಪಡೆಯುವ ದೇಶ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿದ್ದರೆ, 100 ಅಂಕ ಪಡೆಯುವ ದೇಶ ಭ್ರಷ್ಟಾಚಾರ ಮುಕ್ತ ಎಂದು ಗುರುತಿಸಲ್ಪಡುತ್ತದೆ. ಭಾರತದೊಂದಿಗೆ ಮಾಲ್ಡೀವ್‌್ಸ ಸಹ 85ನೇ ಸ್ಥಾನವನ್ನು ಹಂಚಿಕೊಂಡಿದೆ. 88 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಡೆನ್ಮಾರ್ಕ್, ಫಿನ್ಲೆಂಡ್ ಮತ್ತು ನ್ಯೂಜಿಲೆಂಡ್‌ಗಳು ಮೊದಲ ಸ್ಥಾನ ಪಡೆದುಕೊಂಡಿವೆ.
ಭಾರತದ ನೆರೆಯ ದೇಶಗಳಾದ ಶ್ರೀಲಂಕಾ (Sri Lanka) 102, ಬಾಂಗ್ಲಾದೇಶ (Bangladesh) 147, ಅಷ್ಘಾನಿಸ್ತಾನ 174ನೇ ಸ್ಥಾನ ಪಡೆದುಕೊಂಡಿವೆ. ಕಳೆದ ಬಾರಿ 120ನೇ ಸ್ಥಾನ ಪಡೆದುಕೊಂಡಿದ್ದ ಪಾಕಿಸ್ತಾನ ಭಾರಿ ಕುಸಿತ ಕಂಡಿದೆ. ಈ ಬಾರಿ 28 ಅಂಕಗಳೊಂದಿಗೆ 140ನೇ ಸ್ಥಾನದಲ್ಲಿದೆ. ಕೇವಲ 11 ಅಂಕಗಳನ್ನು ಪಡೆದುಕೊಂಡಿರುವ ದಕ್ಷಿಣ ಸೂಡಾನ್ ಕೊನೆಯ ಸ್ಥಾನದಲ್ಲಿದೆ. ಪಾಕಿಸ್ತಾನವು 100ರಲ್ಲಿ 28 ಅಂಕ ಸಂಪಾದನೆ ಮಾಡಿ ಮ್ಯಾನ್ಮಾರ್ ನೊಂದಿಗೆ ಜಂಟಿ 140ನೇ ಸ್ಥಾನ ಪಡೆದಿದ್ದರೆ, 85 ಅಂಕ ಸಂಪಾದನೆ ಮಾಡಿರುವ ನಾರ್ವೆ, ಸಿಂಗಾಪುರ ಮತ್ತು 88 ಅಂಕ ಸಂಪಾದಿಸಿರುವ ಸ್ವೀಡನ್ ಅತೀ ಕಡಿಮೆ ಭ್ರಷ್ಟರನ್ನು ಹೊಂದಿರುವ ದೇಶಗಳಾಗಿವೆ.
2010 ರಿಂದ ಈ ಶ್ರೇಯಾಂಕಗಳಲ್ಲಿ ಪಾಕಿಸ್ತಾನದ ಅತ್ಯಂತ ಕೆಟ್ಟ ಕುಸಿತ ಇದಾಗಿದೆ. 2010 ರಲ್ಲಿ, ಪಾಕಿಸ್ತಾನವು ತನ್ನ ಕೆಟ್ಟ ಪ್ರದರ್ಶನವನ್ನು ದಾಖಲಿಸಿತ್ತು ಮತ್ತು 146 ನೇ ಶ್ರೇಯಾಂಕಕ್ಕೆ ತಳ್ಳಲ್ಪಟ್ಟಿತು. 800 ಶತಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ತಾವು ಸಂಗ್ರಹಿಸಿರುವುದಾಗಿ ಪಾಕಿಸ್ತಾನದ ವಾಚ್‌ಡಾಗ್ ಹೇಳಿಕೆಯ ಹೊರತಾಗಿಯೂ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಬರ್ಲಿನ್-ನೇಸ್ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಶನಲ್ ಹೇಳಿದೆ. ನಯಾ ಪಾಕಿಸ್ತಾನ್ ನಿರ್ಮಾಣ ಮಾಡುವುದಾಗಿ ಅಧಿಕಾರಕ್ಕೇರಿದ್ದ ಇಮ್ರಾನ್ ಖಾನ್ (Imran Khan)ಆಡಳಿತದ ಸಮಯದಲ್ಲಿಯೇ ಪಾಕಿಸ್ತಾನದ ಶ್ರೇಯಾಂಕದಲ್ಲಿ ತೀವ್ರಮಟ್ಟದ ಕುಸಿತ ಉಂಟಾಗಿದೆ. ಇಮ್ರಾನ್ ಅಧಿಕಾರಕ್ಕೆ ಏರುವ ವೇಳೆ ಪಾಕಿಸ್ತಾನ 100 ರಲ್ಲಿ 33 ಅಂಕ ಹೊಂದಿದ್ದರೆ, 2019ರಲ್ಲಿ 32 ಹಾಗೂ 2020ರಲ್ಲಿ 31ನೇ ಸ್ಥಾನಕ್ಕೆ ಕುಸಿದಿತ್ತು.
cVIGIL App ಚುನಾವಣೆ ಅಕ್ರಮ ತಡೆಯಲು ಸಿವಿಜಿಲ್ ಆ್ಯಪ್, ದೂರು ನೀಡಲು ನಾಗರೀಕರ ಕೈಗೆ ಆಸ್ತ್ರ ನೀಡಿದ ಆಯೋಗ!
ಸ್ವಿಜರ್ಲೆಂಡ್, ನೆದರ್ಲೆಂಡ್, ಲಕ್ಸಮ್ ಬರ್ಗ್ ಮತ್ತು ಜರ್ಮನಿ ದೇಶಗಳೊಂದಿಗೆ ಜಗತ್ತಿನ ಅಗ್ರ ಕಡಿಮೆ ಭ್ರಷ್ಟಾಚಾರ ಹೊಂದಿರುವ ಟಾಪ್ 10 ಲಿಸ್ಟ್ ಮುಕ್ತಾಯವಾಗಿದೆ. ಇಂಗ್ಲೆಂಡ್ 11ನೇ ಸ್ಥಾನದಲ್ಲಿದ್ದರೆ, ಹಾಂಕಾಂಗ್ 12ನೇ ಸ್ಥಾನದಲ್ಲಿದೆ. ಅಮೆರಿಕ ಈ ಪಟ್ಟಿಯಲ್ಲಿ 67 ಅಂಕದೊಂದಿಗೆ 27ನೇ ಸ್ಥಾನದಲ್ಲಿದೆ.
Corruption in Energy Dept: ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರೀ ಅಕ್ರಮ: ಸುನಿಲ್ ಕುಮಾರ್!
ಲಂಚ, ಸಾರ್ವಜನಿಕ ನಿಧಿಯ ಸ್ವಂತ ಬಳಕೆ, ಅಧಿಕಾರಿಗಳು ತಮ್ಮ ಸಾರ್ವಜನಿಕ ಕಚೇರಿಯನ್ನು ಖಾಸಗಿ ಲಾಭಕ್ಕಾಗಿ ಅದರ ಪರಿಣಾಮವನ್ನು ಎದುರಿಸದೇ ಬಳಸಿಕೊಳ್ಳುವುದು, ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಸರ್ಕಾರಗಳ ಸಾಮರ್ಥ್ಯ, ನಾಗರಿಕ ಸೇವೆಯಲ್ಲಿ ಸ್ವಜನಪಕ್ಷಪಾತ ನೇಮಕಾತಿಗಳು ಸೇರಿದಂತೆ ಇನ್ನೂ ಹತ್ತು ಹಲವು ಕಾರಣಗಳನ್ನು ಇಟ್ಟುಕೊಂಡು ಭ್ರಷ್ಟಾಚಾರ ಸೂಚ್ಯಂಕವನ್ನು ಅಳೆಯಲಾಗುತ್ತದೆ. ಪಾಕಿಸ್ತಾನದಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳನ್ನು ಟೀಕೆ ಮಾಡಲು ಇಮ್ರಾನ್ ಖಾನ್ ಪ್ರಧಾನವಾಗಿ ಸಿಪಿಐ (corruption perception index ) ಸೂಚ್ಯಂಕವನ್ನೇ ಹೇಳುತ್ತಿದ್ದರು. 2004ರಿಂದಲೂ ಇದೇ ಸೂಚ್ಯಂಕದಲ್ಲಿ ಪಾಕಿಸ್ತಾದ ಕಳಪೆ ನಿರ್ವಹಣೆಯನ್ನು ಇಟ್ಟುಕೊಂಡು ಆಡಳಿತದಲ್ಲಿದ್ದ ಪಕ್ಷವನ್ನು ಟೀಕೆ ಮಾಡುತ್ತಿದ್ದರು. ಈಗ ಸ್ವತಃ ಇಮ್ರಾನ್ ಖಾನ್ ಅಧಿಕಾರದಲ್ಲಿಯೇ ಪಾಕಿಸ್ತಾನ ಈ ಸೂಚ್ಯಂಕದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ