ಜಾಗತಿಕ ಸೈಬರ್ ಸೆಕ್ಯೂರಿಟಿ ಸೂಚ್ಯಂಕದಲ್ಲಿ ಭಾರತಕ್ಕೆ 10ನೇ ಸ್ಥಾನ; ಚೀನಾ, ಪಾಕ್‌ಗಿಂತ ಸುರಕ್ಷಿತ!

By Suvarna News  |  First Published Jun 29, 2021, 7:50 PM IST
  • ಸದ್ಯ ಜಗತ್ತಿನಲ್ಲಿ ಅತ್ಯಂತ ಸವಾಲಿನ ಕ್ಷೇತ್ರ ಸೈಬರ್ ಸೆಕ್ಯೂರಿಟಿ
  • ಸೈಬರ್ ಭದ್ರತೆಯಲ್ಲಿ ಭಾರತ ಗಣನೀಯ ಸುಧಾರಣೆ
  • ಯುನೈಟೆಡ್ ನೇಶನ್ ಅಧ್ಯಯನ ವರದಿ ಬಿಡುಗಡೆ

ನವದೆಹಲಿ(ಜೂ.29):  ಸೈಬರ್ ಸೆಕ್ಯೂರಿಟಿ ವಿಶ್ವಕ್ಕೆ ಅತ್ಯಂತ ಸವಾಲಾಗಿದೆ. ಆದರೆ ಭಾರತ ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಮಹತ್ವದ ಹೆಜ್ಜೆಗಳನ್ನಿಡುತ್ತಿದೆ. ಜೊತೆಗೆ ಸುರಕ್ಷತೆಗೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರಿಣಾಮ ಭಾರತ ಜಾಗತಿಕ ಸೈಬರ್ ಸೆಕ್ಯೂರಿಟಿ ಸೂಚ್ಯಂಕದಲ್ಲಿ 10ನೇ ಸ್ಥಾನ ಪಡೆದಿದೆ.

ಯುವಕರೇ ಹುಷಾರ್‌: ಯುವತಿಯರ ಬಣ್ಣದ ಮಾತಿಗೆ ಮರುಳಾದ್ರೆ ಪಂಗನಾಮ ಗ್ಯಾರಂಟಿ..!.

Tap to resize

Latest Videos

undefined

ಯುನೈಟೆಡ್ ನೇಶನ್ ಅಧ್ಯಯನ ವರದಿಯಲ್ಲಿ ಭಾರತ 10ನೇ ಸ್ಥಾನ ಪಡೆದುಕೊಂಡಿದೆ. 2019ರಲ್ಲಿ ಭಾರತದ ಸ್ಥಾನ 49. ಆದರೆ ಕಳೆದ 2 ವರ್ಷದಲ್ಲಿ ಭಾರತ ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಗಣನೀಯವಾಗಿ ಬದಲಾವಣೆ ತಂದಿದೆ. ಯುನೈಟೆಡ್ ನೇಶನ್ ಸೆಬರ್ ಸೆಕ್ಯೂರಿಟಿ ಅಧ್ಯಯನ ವರದಿಯಲ್ಲಿ ಚೀನಾ 33ನೇ ಸ್ಥಾನ ಪಡೆದುಕೊಂಡಿದ್ದರೆ, ಪಾಕಿಸ್ತಾನ 79ನೇ ಸ್ಥಾನದಲ್ಲಿದೆ.

ಚೀನಾ, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತ ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಸುರಕ್ಷತಿವಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಸೈಬರ್ ಸೆಕ್ಯೂರಿಟಿಯನ್ನು ಮತ್ತಷ್ಟು ಬಲಪಡಿಸಲು ಭಾರತ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.

ಸೈಬರ್ ದಾಳಿಗೆ ನಲುಗಿದ ಅಮೆರಿಕ; ಇಂಧನ ಪೂರೈಕೆ ಸ್ಥಗಿತ

ಭಯೋತ್ಪಾದಕರು ಜಮ್ಮ ಜಾಲವನ್ನು ವಿಸ್ತರಿಸಲು , ದ್ವೇಷವನ್ನು ಪ್ರಚೋದಿಸಲು ಸೈಬರ್ ಬಳಕೆ ಮಾಡುತ್ತಿದ್ದಾರೆ.   ಭಯೋತ್ಪಾದನೆಗೆ ಸೈಬರ್ ಡೊಮೇನ್‌ ಬಳಕೆಯಾಗುತ್ತಿರುವುದು ಅಪಾಯಕಾರಿ ಎಂದು ಹರ್ಷ್ ವರ್ಧನ್ ಹೇಳಿದ್ದಾರೆ.

click me!