ನಗರವಾಸಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಯಶಸ್ವಿ ಯೋಜನೆ ವಿಸ್ತರಣೆ

By Suvarna NewsFirst Published Sep 2, 2020, 11:06 PM IST
Highlights

ಉದ್ಯೋಗ ಖಾತ್ರಿ ಯೋಜನೆ  ವಿಸ್ತರಣೆಗೆ ಕೇಂದ್ರದ ನಿರ್ಧಾರ/ ಸಣ್ಣ ನಗರ ಮತ್ತು ಪಟ್ಟಣಗಳ ಜನರಿಗೂ ಉದ್ಯೋಗ/ ಅತಿ ಯಶಸ್ವಿಯಾದ ಯೋಜನೆ/ ಕೇಂದ್ರ ಸರ್ಕಾರದಿಂದ ಮಾಹಿತಿ

ನವದೆಹಲಿ(ಸೆ. 02)  ಕೊರೋನಾ ಕಾರಣಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಲಾಕ್ ಡೌನ್ ಪರಿಣಾಮ ಲಕ್ಷಾಂತರ ಜನರ ತುತ್ತಿನ ಚೀಲಕ್ಕೆ ತೊಂದರೆಯಾಗಿದೆ. ಇದೀಗ ಕೇಂದ್ರ ಸರ್ಕಾರ ಪರಿಹಾರಾರ್ಥವಾಗಿ ಹೊಸ ಆಲೋಚನೆಯೊಂದನ್ನು ಮಾಡಿದೆ.

ದೇಶ ಮತ್ತು ಹಳ್ಳಿಯ ಜನ ಮೆಚ್ಚಿಕೊಂಡ ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಲು  ಸರ್ಕಾರ ಮುಂದಾಗಿದೆ.  ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕ ಸಂಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು ನರೇಗಾವನ್ನು ಸಣ್ಣ ಮತ್ತು ಮಧ್ಯಮ ನಗರಕ್ಕೆ ವಿಸ್ತರಿಸುವ ಆಲೋಚನೆ ಮಾಡಲಾಗಿದ್ದು ಇದಕ್ಕಾಗಿ 350 ಬಿಲಿಯನ್ ರೂ. (3,51,75,67,20,000 ರೂ.) ಮೀಸಲಿಡುವುದಾಗಿ  ಹೇಳಿದ್ದಾರೆ.

ಜಿಡಿಪಿ ಮಹಾಕುಸಿತ; ಸಕಲ ಅಂಕಿ ಅಂಶ

ಕಳೆದ ವರ್ಷದಿಂದಲೇ ಇಂಥದ್ದೊಂದು ಆಲೋಚನೆ ಮಾಡಿಕೊಂಡು ಬರಲಾಗಿತ್ತು.  ಈಗಾಗಲೇ ಗ್ರಾಮೀಣ ಉದ್ಯೋಗ ಖಾತ್ರಿಗೆ ಕೇಂದ್ರ ಸರ್ಕಾರ ಒಂದು ಟ್ರಿಲಿಯನ್ ಹಣ ವಿನಿಯೋಗ ಮಾಡುತ್ತಿದೆ. 202  ರೂ ದಿನಗೂಲಿ ದರ ನಿಗದಿ ಮಾಲಾಗಿದೆ. ನೂರು ದಿನಗಳಮ ಕೆಲಸ ಪಕ್ಕಾ ಇರುತ್ತದೆ.  ನಗರ ಭಾಗದಲ್ಲಿಯೂ ಇದೇ ಆಲೋಚನೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಸಣ್ಣ ನಗರಗಳಲ್ಲಿ ಮೊದಲು ಇದನ್ನು ಆರಂಭಿಸಲಾಗುವುದು. ದೊಡ್ಡ ನಗರದಲ್ಲಿ ಆದರೆ ವೃತ್ತಿಪರತೆ ಅಗತ್ಯ ಹೆಚ್ಚಿರುತ್ತದೆ ಎಂದು ಹೇಳಿದ್ದಾರೆ. ರಸ್ತೆ ನಿರ್ಮಾಣ, ಬಾವಿ ನಿರ್ಮಾಣದಂತಹ ಕೆಲಸಗಳು ಒಳಗೊಳ್ಳಲಿವೆ. ದೇಶದ 270  ಮಿಲಿಯನ್ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ.

ಕೊರೋನಾ ವೈರಸ್ ಸಣ್ಣ ಪಟ್ಟಣ ಮತ್ತು ನಗರ ಜನರನ್ನು ಕಾಡುತ್ತಿದ್ದು ಅವರನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸಿದ್ದು ಹೊರತರಬೇಕಾಗಿದೆ.  ಏಪ್ರಿಲ್ ತಿಂಗಳಿನಲ್ಲಿ 121  ಮಿಲಿಯನ್ ಜನ ಕೆಲಸ ಕಳೆದುಕೊಂಡಿದ್ದಾರೆ. ಜಿಡಿಪಿ ಸಹ ಕುಸಿತ ಕಂಡಿದ್ದು ಪರಿಹಾರೋಪಾಯದಲ್ಲಿ ಇದು ಒಂದು ಮಾರ್ಗ ಎಂದು ತಿಳಿಸಿದ್ದಾರೆ.

 

click me!