ಚೀನಾಕ್ಕೆ ಠಕ್ಕರ್ ನೀಡಲು ಸರ್ವ ಸಿದ್ಧತೆ, ನೇಪಾಳ-ಭೂತಾನ್ ಗಡಿ ಮೇಲೂ ಹದ್ದಿನ ಕಣ್ಣು

By Suvarna NewsFirst Published Sep 2, 2020, 8:48 PM IST
Highlights

ಮುಂದುವರಿದ ಚೀನಾ ತಂಟೆ ಗಡಿಯಲ್ಲಿ ಹೈ ಅಲರ್ಟ್/ ಸುಮ್ಮನೆ ಕುಳಿತುಕೊಳ್ಳುವ ಮಾತೇ ಇಲ್ಲ/ ಲಡಾಕ್ ನಂತರ  ಪ್ಯಾಂಗಾಂಗ್  ಲೇಕ್ ಬಳಿ ಚೀನಾ ಉದ್ಧಟತನ/ ನೇಪಾಳ ಮತ್ತು ಭೂತಾನ್ ಗಡಿಯಲ್ಲಿಯೂ ಹದ್ದಿನ ಕಣ್ಣು

ನವದೆಹಲಿ (ಸೆ. 02) ಗಡಿಯಲ್ಲಿ ಮತ್ತೆ ಕ್ಯಾತೆ ಮಾಡಿದ  ಚೀನಾಕ್ಕೆ ಭಾರತ ದಿಟ್ಟ ಉತ್ತರ ನೀಡುತ್ತಲೇ ಇದ್ದು ಈಗ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡಿದೆ. ಲೈನ್ ಆಫ್ ಕಂಟ್ರೋಲ್ ನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜತೆಗೆ ನೇಪಾಳ ಮತ್ತು ಭೂತಾನ್ ಗಡಿಯಲ್ಲಿಯೂ ಹದ್ದಿನ ಕಣ್ಣು ಇಡಲಾಗಿದೆ.

ಎಲ್ ಎಸಿಯಲ್ಲಿನ ಭಾರತೀಯ ಸೈನಿಕರು ಉದ್ಧಟತನವನ್ನು ನಿಲ್ಲಿಸದೇ ಇದ್ದರೆ ಮುಂದಾಗುವ ಪರಿಣಾಮಗಳನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ಹೇಳಿತ್ತು.

ಕೊನೆಗೂ ಪಬ್ ಜಿ ಬ್ಯಾನ್, ಜತೆಗೆ 118 ಅಪ್ಲಿಕೇಶನ್

ಎಲ್ಎಸಿನಲ್ಲಿ ಪ್ಯಾಂಗಾಂಗ್ ಲೇಕ್ ಬಳಿ ಚೀನಾ ಯೋಧರ ಅತಿಕ್ರಮಣವನ್ನು ಭಾರತೀಯ ಸೈನಿಕರು ಹಿಮ್ಮೆಟಿಸಿದ್ದರು. ಸೇನಾ ಸಾಮರ್ಥ್ಯ ಪ್ರದರ್ಶಿಸಲು ಬಂದರೆ ಚೀನಾದ ಸೇನೆ ಖಂಡಿತ ಭಾರತದ ಸೇನೆಗೆ 1962ರಲ್ಲಿ ಉಂಟುಮಾಡಿದ್ದಕ್ಕಿಂತ ಹೆಚ್ಚು ನಷ್ಟ ಉಂಟುಮಾಡುವುದು ನಿಶ್ಚಿತ ಎಂದು ಪತ್ರಿಕೆ   ಹೇಳಿತ್ತು.

ಭಾತರತೀಯ ಸೇನಾ ಟ್ಯಾಂಕರ್ ಗಳು  ಗಡಿಯಲ್ಲಿ ಸಿದ್ಧವಾಗಿ ನಿಂತಿವೆ.  ಒಮ್ಮೆ ಮಾತುಕತೆಗೆ ಸಿದ್ಧ ಎಂದು ಹೇಳಿದ್ದ ಚೀನಾ ತಂಟೆಯನ್ನು ಮಾತ್ರ ನಿಲ್ಲಿಸಿಲ್ಲ. ಇದೆಲ್ಲದರ ನಡುವೆ ಭಾರತ ಮತ್ತೊಂದುನ ಡಿಜಿಟಲ್ ಸಮರ ಸಾರಿದ್ದು ಪಬ್ ಜಿ ಸೇರಿದಂತೆ  118  ಚೀನಾ ಮೂಲದ ಅಪ್ಲಿಕೇಶನ್ ಗಳಿಗೆ ಮಂಗಳ  ಹಾಡಿದೆ.

click me!