
Operation sindoor: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಿದ್ದು, ಭಾರತೀಯ ಸೇನೆಯು 'ಆಪರೇಷನ್ ಸಿಂದೂರ್' ಹೆಸರಿನಲ್ಲಿ ಪಾಕಿಸ್ತಾನಿ ಸೈನಿಕರ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಿದೆ. ನಮ್ಮ ಸೈನಿಕರ ಶೌರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ದೇಶಭಕ್ತಿಯನ್ನು ವಿವಿಧ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಈ ನಡುವೆ, ಒಬ್ಬ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಪೋಸ್ಟ್ ತೀವ್ರ ಚರ್ಚೆಗೆ ಕಾರಣವಾಗಿದೆ. 'ಯುದ್ಧವನ್ನು ಆಚರಿಸಬೇಡಿ' ಎಂದು ಅವರು ಗಡಿಯ ಘಟನೆಗಳನ್ನು ಉಲ್ಲೇಖಿಸಿ , ಹಿಂಸೆ ಮತ್ತು ವಿನಾಶವನ್ನು ಪ್ರೋತ್ಸಾಹಿಸುವುದು ತಪ್ಪು ಎಂಬ ಉದ್ದೇಶದಿಂದ. ಆದರೆ, ಈ ಕಾಮೆಂಟ್‌ಗೆ ನೆಟಿಜನ್‌ಗಳ ಪ್ರತಿಕ್ರಿಯೆ ವಿಭಿನ್ನವಾಗಿದೆ. ಕೆಲವರು ಒಪ್ಪಿದರೆ, ಇನ್ನು ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ.
ಯುದ್ಧ ಎಂದರೆ ನಮಗೆ ಹಬ್ಬ:
ಒಬ್ಬ ನೆಟಿಜನ್ ತಮ್ಮ ಪ್ರತಿಕ್ರಿಯೆಯಲ್ಲಿ ಹಿಂದೂ ಸಂಸ್ಕೃತಿಯನ್ನು ಉಲ್ಲೇಖಿಸಿ, ಹಿಂದೂ ಧರ್ಮದ ಹಬ್ಬಗಳಾದ ಹೋಳಿ, ದಸರಾ, ದೀಪಾವಳಿಗಳು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತವೆ. ಹೋಲಿಕಾ, ಮಹಿಷಾಸುರ, ರಾಕ್ಷಸರ ಸಂಹಾರವನ್ನು ಆಚರಿಸುವ ಮೂಲಕ ನಾವು ಈ ಹಬ್ಬಗಳನ್ನು ಸಂಭ್ರಮಿಸುತ್ತೇವೆ. ಯುದ್ಧವೂ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡುವ ಉದ್ದೇಶ ಹೊಂದಿದೆ. ನಮ್ಮ ಸೇನೆ ಭಯೋತ್ಪಾದಕರನ್ನು ತಡೆಯುತ್ತಿದ್ದು, ಇದು ಪಾಕಿಸ್ತಾನಿ ನಾಗರಿಕರಿಗೆ ಹಾನಿಯನ್ನುಂಟುಮಾಡುವುದಿಲ್ಲ. ಇದು ಹಿಂಸೆಯ ಪ್ರೋತ್ಸಾಹವಲ್ಲ, ಬದಲಿಗೆ ಅನ್ಯಾಯದ ಮೇಲಿನ ಗೆಲುವು ಎಂದು ವಾದಿಸಿದ್ದಾರೆ. ಈ ಪ್ರತಿಕ್ರಿಯೆಯನ್ನು ವಿವರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವಿಷಯವನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ ಅವರು, ಯುದ್ಧವು ನೋವಿನ ಸಂಗತಿಯಾದರೂ, ದೇಶ ರಕ್ಷಣೆ ಮತ್ತು ದುಷ್ಟ ಶಕ್ತಿಗಳ ಸೋಲಿಗಾಗಿ ಹೋರಾಡುವುದು ಹಿಂದೂ ಸಂಸ್ಕೃತಿಯ ಭಾಗವೆಂದು ಸ್ಪಷ್ಟಪಡಿಸಿದ್ದಾರೆ. 'ಯುದ್ಧವನ್ನು ಆಚರಿಸಬೇಡಿ' ಎಂದವರಿಗೆ ಉತ್ತರವಾಗಿ, 'ವಿಜಯವನ್ನು ಸಂಕೇತಿಸುವುದು ನಮ್ಮ ಸಂಸ್ಕೃತಿಯಲ್ಲಿ ರೂಢಿಯಾಗಿದೆ' ಎಂದು ಅವರು ತಿರುಗೇಟು ನೀಡಿದ್ದಾರೆ.
ಗಡಿಯಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಚರ್ಚೆಯು ದೇಶದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ