
ಜೈಸಲ್ಮೇರ್(ಮೇ.08) ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ ಎರಡೂ ಕಡೆಯಿಂದ ಪ್ರಬಲ ದಾಳಿ ನಡೆಯುತ್ತಿದೆ. ಪಾಕಿಸ್ತಾನದ ಸತತ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಇದರಂತೆ ಪಾಕಿಸ್ತಾನದ 2 ಫೈಟರ್ ಜೆಟನ್ನು ಭಾರತ ಹೊಡೆದುರುಳಿಸಿದೆ. ಈ ಪೈಕಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಭಾರತ ಪಾಕಿಸ್ತಾನದ ಪೈಲೆಟನ್ನು ಜೀವಂತವಾಗಿ ಸೆರೆ ಹಿಡಿದಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನದ ಫೈಟರ್ ಜೆಟ್ ಭಾರತದ ಮೇಲೆ ದಾಳಿಗೆ ಮುಂದಾಗಿತ್ತು. ಈ ವೇಳೆ ಭಾರತ ತಕ್ಕ ಪಾಠ ಕಲಿಸಿದೆ. ಪಾಕಿಸ್ತಾನ ಫೈಟರ್ ಜೆಟ್‌ನ್ನು ಹೊಡೆದುರುಳಿಸಲಾಗಿದೆ. ಫೈಟರ್ ಜೆಟ್ ಹೊಡೆದುರುಳಿಸುತ್ತಿದ್ದಂತೆ ಪೈಲೆಟ್ ಪ್ಯಾರಾಚ್ಯೂಟ್ ಬಳಸಿ ಜೆಟ್‌ನಿಂದ ಹಾರಿದ್ದರು. ಭಾರತ ಭೂಪ್ರದೇಶದಲ್ಲಿ ಲ್ಯಾಂಡ್ ಆದ ಪಾಕಿಸ್ತಾನಿ ಪೈಲೆಟ್‌ನ್ನು ಭಾರತ ಸೆರೆ ಹಿಡಿದಿದೆ.
ಪಾಕಿಸ್ತಾನಕ್ಕೆ ಇಂದೇ ಮತ್ತೊಂದು ಶಾಸ್ತಿ, ಕಾಶ್ಮೀರದ ಹಲವು ಗ್ರಾಮದಿಂದ ಜನರನ್ನು ಸ್ಥಳಾಂತರ
ಪಾಕಿಸ್ತಾನಿ ಪೈಲೆಟ್ ಮಾಹಿತಿ ಗೌಪ್ಯ
ಭಾರತ ಸೆರೆ ಹಿಡಿದ ಪಾಕಿಸ್ತಾನ ಪೈಲೆಟ್ ಮಾಹಿತಿಯನ್ನು ಭಾರತ ಗೌಪ್ಯವಾಗಿಟ್ಟಿದೆ. ಸದ್ಯ ಸೆರೆ ಹಿಡಿದಿರುವ ಪಾಕಿಸ್ತಾನಿ ಪೈಲೆಟ್‌ಗೆ ಪ್ರಮಥ ಚಿಕಿತ್ಸೆ ನೀಡಲಾಗುತ್ತಿದೆ. ಬಿದ್ಧ ರಭಸದಲ್ಲೆ ಪೈಲೆಟ್ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ವಶದಲ್ಲಿರುವ ಪಾಕಿಸ್ತಾನಿ ಪೈಲೆಟ್ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಎರಡೇ ದಿನದಲ್ಲಿ ಬಿಡುಗಡೆಯಾಗಿದ್ದ ಅಭಿನಂದನ್ ವರ್ಧಮಾನ್
2019ರಲ್ಲಿ ಬಾಲಾಕೋಟ್ ಮೇಲೆ ಭಾರತ ಏರ್‌ಸ್ಟ್ರೈಕ್ ನಡೆಸಿದಾಗ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಭಾರತದ ಫೈಟರ್ ಜೆಟ್‌ನ್ನು ಪಾಕಿಸ್ತಾನ ಹೊಡೆದುರುಳಿಸಿತ್ತು. ಆದರೆ ಭಾರತ ಅಂತಾರಾಷ್ಟ್ರೀಯ ಮಟ್ಟದ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಎರಡೇ ದಿನದಲ್ಲಿ ಅಭಿನಂದನ್ ವರ್ಧಮಾನ್ ಬಿಡುಡೆಯಾಗಿದ್ದರು.
ಇದೀಗ ಪಾಕಿಸ್ತಾನದ ಪೈಲೆಟ್‌ನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ.
ಪಾಕಿಸ್ತಾನ ಪೈಲೆಟ್ ಸೆರೆಯಾಗುತ್ತಿದ್ದಂತೆ ಟೀ ಟ್ರೋಲ್
ಅಭಿನಂದನ್ ವರ್ಧಮಾನ್ ಸೆರೆ ಸಿಕ್ಕ ಬಳಿಕ ಪಾಕಿಸ್ತಾನ ಸೇನೆ ನೀಡಿದ ಚಹಾ ಕುಡಿದು ಚೆನ್ನಾಗಿದೆ ಎಂದಿದ್ದರು. ಇದೇ ಮಾತನ್ನು ಪಾಕಿಸ್ತಾನ ಪದೇ ಪದೇ ಟ್ರೋಲ್ ಮಾಡುತ್ತಲೇ ಇದೆ. ಪಾಕಿಸ್ತಾನ ಕ್ರಿಕೆಟಿರು, ಸೆಲೆಬ್ರೆಟಿಗಳು ಸೇರಿದಂತೆ ಜನಸಾಮಾನ್ಯರು ಭಾರತವನ್ನು ಟೀ ಕುರಿತು ಲೇವಡಿ ಮಾಡುತ್ತಾರೆ. ಆದರೆ ಇದೀಗ ಪಾಕಿಸ್ತಾನ ಪೈಲೆಟ್ ಸೆರೆ ಸಿಕ್ಕ ಬೆನ್ನಲ್ಲೇ ಭಾರತೀಯರು ಟ್ರೋಲ್ ಆರಂಭಿಸಿದ್ದಾರೆ. ಪಾಕಿಸ್ತಾನ ಪೈಲೆಟ್‌ಗೆ ಟೀ ಮಾತ್ರವಲ್ಲ, ರೋಟಿ ಸೇರಿದಂತೆ ಎಲ್ಲಾ ತಿಂಡಿ ತಿನಿಸು ನೀಡುವಂತೆ ಸೂಚಿಸಿದ್ದಾರೆ. ಕಾರಣ ಪಾಕಿಸ್ತಾನದಲ್ಲಿ ಇದ್ಯಾವುದು ಸಿಗುವುದಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ