'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?

Published : May 11, 2025, 06:51 PM IST
'ಬದುಕಿ, ಬದುಕಲು ಬಿಡಿ' ಕದನ ವಿರಾಮ ಬಗ್ಗೆ ಉತ್ತರ ಪ್ರದೇಶದ ಮೌಲನಾ ಹೇಳಿದ್ದು ಪಾಕಿಸ್ತಾನಕ್ಕಾ? ಭಾರತಕ್ಕಾ?

ಸಾರಾಂಶ

ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆ (LoC)ಯಲ್ಲಿ ಕದನ ವಿರಾಮ ಒಪ್ಪಂದದ ಪರಿಣಾಮವು  ಧನಾತ್ಮಕ ಬದಲಾವಣೆ ತೋರಿಸುತ್ತಿದೆ. ಈ ನಡುವೆ, ದೇಶದ ಪ್ರಮುಖ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ದಿಯೋಬಂದ್‌ನಿಂದ ಶಾಂತಿಗಾಗಿ ಜಮಿಯತ್ ದವತುಲ್ ಮುಸ್ಲಿಮೀನ್‌ನ ಪೋಷಕ ಮತ್ತು ದೇವಬಂದಿ ಸಿದ್ಧಾಂತದ ಖ್ಯಾತ ವಿದ್ವಾಂಸ ಮೌಲಾನಾ ಖಾರಿ ಇಶಾಕ್ ಗೋರಾ ಅವರು ಈ ಕದನ ವಿರಾಮವನ್ನು ಮಾನವೀಯತೆಯ ಪ್ರಾರ್ಥನೆಯ ಫಲವೆಂದು ಬಣ್ಣಿಸಿದ್ದಾರೆ.

ಉತ್ತರ ಪ್ರದೇಶ (ಮೇ.11): ಭಾರತ ಮತ್ತು ಪಾಕಿಸ್ತಾನದ ನಡುವಿನ ನಿಯಂತ್ರಣ ರೇಖೆ (LoC)ಯಲ್ಲಿ ಕದನ ವಿರಾಮ ಒಪ್ಪಂದದ ಪರಿಣಾಮವು  ಧನಾತ್ಮಕ ಬದಲಾವಣೆ ತೋರಿಸುತ್ತಿದೆ. ಈ ನಡುವೆ, ದೇಶದ ಪ್ರಮುಖ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಾದ ದಿಯೋಬಂದ್‌ನಿಂದ ಶಾಂತಿಗಾಗಿ ಜಮಿಯತ್ ದವತುಲ್ ಮುಸ್ಲಿಮೀನ್‌ನ ಪೋಷಕ ಮತ್ತು ದೇವಬಂದಿ ಸಿದ್ಧಾಂತದ ಖ್ಯಾತ ವಿದ್ವಾಂಸ ಮೌಲಾನಾ ಖಾರಿ ಇಶಾಕ್ ಗೋರಾ ಅವರು ಈ ಕದನ ವಿರಾಮವನ್ನು ಮಾನವೀಯತೆಯ ಪ್ರಾರ್ಥನೆಯ ಫಲವೆಂದು ಬಣ್ಣಿಸಿದ್ದಾರೆ.

ಅಲ್ಹಮ್ದುಲಿಲ್ಲಾಹ್! ನ್ಯಾಯ ಮತ್ತು ಶಾಂತಿಯನ್ನು ಪ್ರೀತಿಸುವ ಜನರ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ. ಎರಡು ನೆರೆಯ ದೇಶಗಳ ನಡುವೆ ಶಾಂತಿಯತ್ತ ಒಂದು ಮಹತ್ವದ ಹೆಜ್ಜೆ ಇಡಲಾಗಿದೆ. ಈ ಕದನ ವಿರಾಮವು ಶಾಂತಿಯ ಭರವಸೆಯಾಗಿದೆ. ಇದನ್ನು ನಾವು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಮೌಲಾನಾ ಗೋರಾ ಹೇಳಿದ್ದಾರೆ. ಪಾಕಿಸ್ತಾನವು ಇನ್ನು ಮುಂದೆ ಯಾವುದೇ ಪ್ರಚೋದನಕಾರಿ ಕ್ರಮಗಳಿಂದ ದೂರವಿರುತ್ತದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಭಾರತವು ಶಾಂತಿಪ್ರಿಯ ರಾಷ್ಟ್ರ. ಭಾರತದ ಮೂಲ ತತ್ವವೇ 'ಬದುಕು ಮತ್ತು ಬದುಕಲು ಬಿಡಿ’ ಎಂಬುದಾಗಿದೆ. ನಾವು ಕೇವಲ ನಮಗಾಗಿ ಶಾಂತಿಯನ್ನು ಬಯಸದೆ, ಇಡೀ ಜಗತ್ತಿಗೆ ಶಾಂತಿ ಮತ್ತು ನ್ಯಾಯದ ಸಂದೇಶವನ್ನು ರವಾನಿಸುತ್ತೇವೆ' ಭಾರತೀಯ ಸೇನೆಯ ಧೈರ್ಯವನ್ನು ಕೊಂಡಾಡಿದ ಅವರು, ದೇಶದ ಶತ್ರುಗಳು ಮತ್ತು ಭಯೋತ್ಪಾದಕರ ವಿರುದ್ಧ ಧೈರ್ಯದಿಂದ ಹೋರಾಡಿದ ಸೇನೆಗೆ ನಾವು ಕೃತಜ್ಞರಾಗಿದ್ದೇವೆ. ದೇಶವನ್ನು ರಕ್ಷಿಸುವಲ್ಲಿ ಅವರು ಯಾವುದೇ ಕಸರತ್ತನ್ನು ಬಿಟ್ಟಿಲ್ಲ. ಸೇನೆಯ ಸಂಕಲ್ಪವನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Fact Check: ನಕಲಿ ಮಿಲಿಟರಿ ಖಾತೆಗಳ ಬಗ್ಗೆ ಎಚ್ಚರ, ವ್ಯೋಮಿಕಾ ಸಿಂಗ್, ಸೋಫಿಯಾ ಖುರೇಷಿ ಎಕ್ಸ್‌ ಖಾತೆ ಹೊಂದಿದ್ದಾರೆಯೇ?

'ನಮ್ಮ ಸೈನ್ಯಕ್ಕೆ ಎಲ್ಲ ಕ್ಷೇತ್ರಗಳಲ್ಲೂ ರಕ್ಷಣೆ ಮತ್ತು ಯಶಸ್ಸು ದೊರೆಯಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ದೇಶದ ಸುರಕ್ಷತೆ ಮತ್ತು ಶಾಂತಿಗಾಗಿ ಅವರು ಯಾವಾಗಲೂ ಸನ್ನದ್ಧರಾಗಿರಲಿ ಎಂದು ಪ್ರಾರ್ಥಿಸಿದ್ದಾರೆ. 

ದೀರ್ಘಕಾಲದಿಂದ LoCಯಲ್ಲಿ ಗುಂಡಿನ ಚಕಮಕಿ ಮತ್ತು ಸಂಘರ್ಷದ ವಾತಾವರಣವಿತ್ತು. ಆದರೀಗ ಎರಡೂ ದೇಶಗಳ ಸೇನೆಗಳು ಕದನ ವಿರಾಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿವೆ. ಅದ್ಯಾಗೂ ಕದನ ವಿರಾಮ ಜಾರಿಯಾದ ಮೂರು ಗಂಟೆಯೊಳಗೆ ಪಾಕಿಸ್ತಾನ ಮತ್ತೆ ಡ್ರೋನ್ ದಾಳಿ ನಡೆಸಿರುವುದು, ಬಿಎಸ್ ಯೋಧನೋರ್ವ ಹುತಾತ್ಮನಾಗಿದ್ದು ಹಲವು ಸೈನಿಕರು, ನಾಗರಿಕರು ಗಂಭೀರ ಗಾಯಗೊಂಡಿದ್ದಾರೆ. ಇದು ಭಾರತೀಯ ಸೈನಿಕರನ್ನ ಕೆರಳಿಸಿದ್ದು. ಪಾಕಿಸ್ತಾನ ಶಾಂತಿ ಮಾತುಕತೆಗೆ ಬಗ್ಗೋಲ್ಲ, ಸೈನ್ಯವೇ ಕಠಿಣ ಪ್ರತ್ಯುತ್ತರ ನೀಡಬೇಕೆಂಬ ಮಾತುಗಳು ಕೇಳಿಬಂದಿವೆ. 

ಇದನ್ನೂ ಓದಿ:  Fact Check: ಎಟಿಎಂಗಳು 2-3 ದಿನಗಳವರೆಗೆ ಬಂದ್ ಆಗುತ್ತಾ? ವೈರಲ್ ಆಗಿರೋ ಸುದ್ದಿಯ ಸತ್ಯಾಂಶವೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ