ದಸರಾ ಫೆಸ್ಟಿವ್ ಸೇಲ್: 2 ದಿನದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ₹24,200 ಕೋಟಿ ಖರ್ಚು ಮಾಡಿದ ಭಾರತೀಯರು!

Published : Oct 12, 2026, 08:00 PM IST
Dasara Diwali Festive sale

ಸಾರಾಂಶ

ಅಮೆಜಾನ್, ಫ್ಲಿಪ್‌ಕಾರ್ಟ್ ಹಬ್ಬದ ಮಾರಾಟದಲ್ಲಿ ಭಾರತೀಯರು ಹುಚ್ಚೆದ್ದು ಶಾಪಿಂಗ್ ಮಾಡಿದ್ದಾರೆ. ಕೇವಲ ಎರಡು ದಿನಗಳಲ್ಲಿ 9 ಕೋಟಿ ಆರ್ಡರ್‌ಗಳ ಮೂಲಕ ₹24,200 ಕೋಟಿ ಹಣ ಖರ್ಚಾಗಿದೆ. ದೊಡ್ಡ ನಗರಗಳಲ್ಲ, ಈ ಬಾರಿ ಹಳ್ಳಿಗಳೇ ಶಾಪಿಂಗ್‌ನಲ್ಲಿ ನಂಬರ್ 1! ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ನವರಾತ್ರಿ ಹಾಗೂ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದೆ. ಬರೀ ದೇವಸ್ಥಾನಗಳಲ್ಲ, ಆನ್‌ಲೈನ್ ಮಾರುಕಟ್ಟೆಯಲ್ಲೂ ಈಗ ಹಬ್ಬದ ಜೋರು ಶುರುವಾಗಿದೆ! ಅಮೆಜಾನ್ (Amazon), ಫ್ಲಿಪ್‌ಕಾರ್ಟ್ (Flipkart), ಮೀಶೋ ಮುಂತಾದ ಇ-ಕಾಮರ್ಸ್ ದೈತ್ಯರು ಹಬ್ಬದ ಆಫರ್‌ಗಳನ್ನು ಘೋಷಿಸುತ್ತಿದ್ದಂತೆ ಭಾರತೀಯರು ಮುಗಿಬಿದ್ದು ಶಾಪಿಂಗ್ ಮಾಡಿದ್ದಾರೆ. ಇದರ ಫಲವಾಗಿ, ಕೇವಲ ಎರಡೇ ದಿನಗಳಲ್ಲಿ (48 ಗಂಟೆಗಳಲ್ಲಿ) ಭಾರತೀಯರು ಆನ್‌ಲೈನ್‌ನಲ್ಲಿ ಖರ್ಚು ಮಾಡಿರುವ ಮೊತ್ತ ಬರೋಬ್ಬರಿ ₹24,200 ಕೋಟಿ!

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಆನ್‌ಲೈನ್ ಖರೀದಿ ಬರೋಬ್ಬರಿ 6 ಪಟ್ಟು ಹೆಚ್ಚಾಗಿದೆ. ಜೀ ಬ್ಯುಸಿನೆಸ್ (Zee Business) ನಡೆಸಿರುವ ಇತ್ತೀಚಿನ ಸಂಶೋಧನೆಯು ಈ ಅಚ್ಚರಿಯ ಅಂಕಿಅಂಶಗಳನ್ನು ಹೊರಹಾಕಿದೆ. ಹಾಗಾದರೆ, ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಜನರು ಖರೀದಿಸಿದ್ದೇನು? ಭಾರತೀಯರ ಶಾಪಿಂಗ್ ಕ್ರೇಜ್ ಹೇಗಿದೆ? ಇಲ್ಲಿದೆ ಅಚ್ಚರಿಯ ಮಾಹಿತಿ.

2 ದಿನಗಳಲ್ಲಿ 9 ಕೋಟಿ ಆರ್ಡರ್‌ಗಳು!

ಹಬ್ಬದ ಆರಂಭಿಕ ಎರಡು ದಿನಗಳಲ್ಲಿ ದೇಶಾದ್ಯಂತ ಒಟ್ಟು 8 ರಿಂದ 9 ಕೋಟಿ ಆರ್ಡರ್‌ಗಳು ದಾಖಲಾಗಿವೆ. ಬ ಸುಮಾರು 6 ರಿಂದ 6.5 ಕೋಟಿ ಜನರು ಆನ್‌ಲೈನ್ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದರು.

ಮೊದಲ ಸ್ಥಾನದಲ್ಲಿ ಸ್ಮಾರ್ಟ್‌ಫೋನ್‌!

ಈ ಬಾರಿಯ ಸೇಲ್‌ನಲ್ಲಿ ಜನ ಅತಿ ಹೆಚ್ಚು ಖರೀದಿಸಿದ್ದು ಯಾವುದ ಗೊತ್ತಾ? ಅದುವೇ ಸ್ಮಾರ್ಟ್‌ಫೋನ್‌ಗಳು! ಒಟ್ಟು ಮಾರಾಟದ ಶೇ. 38 ರಿಂದ 40ರಷ್ಟು ಪಾಲು ಮೊಬೈಲ್‌ಗಳದ್ದೇ ಆಗಿದೆ. ಕೇವಲ ಎರಡು ದಿನಗಳಲ್ಲಿ ₹9,100 ರಿಂದ ₹9,600 ಕೋಟಿ ಮೌಲ್ಯದ ಮೊಬೈಲ್‌ಗಳು ಮಾರಾಟವಾಗಿವೆ! ಇನ್ನು ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟವು ₹6,000 ಕೋಟಿ ದಾಟಿದ್ದರೆ, ಫ್ಯಾಷನ್ ಉತ್ಪನ್ನಗಳ ಮಾರಾಟದಲ್ಲಿ ಶೇ. 25ರಷ್ಟು ಭರ್ಜರಿ ಜಿಗಿತ ಕಂಡಿದೆ.

ಹಣದುಬ್ಬರ ಇದ್ದರೇನು, ಪ್ರೀಮಿಯಂ ವಸ್ತುಗಳೇ ಬೇಕು!

"ಸಾಮಾನ್ಯ ಜನರಿಗೆ ಹಣದುಬ್ಬರದ ಬಿಸಿ ತಟ್ಟಿದೆ" ಎನ್ನುವ ಮಾತುಗಳ ನಡುವೆಯೂ, ಆನ್‌ಲೈನ್‌ನಲ್ಲಿ ಪ್ರೀಮಿಯಂ ವಸ್ತುಗಳ ಮಾರಾಟ ಮಾತ್ರ ಎವರೇಜ್ ಮುಟ್ಟಿದೆ. 55 ಮತ್ತು 65 ಇಂಚಿನ ದೊಡ್ಡ ಸ್ಮಾರ್ಟ್ ಟಿವಿಗಳ ಮಾರಾಟ ಶೇ. 20ರಷ್ಟು ಹೆಚ್ಚಾಗಿದೆ. ₹45,000 ಕ್ಕಿಂತ ಹೆಚ್ಚಿನ ಬೆಲೆಯ ಕಾಸ್ಟ್ಲಿ ಫೋನ್‌ಗಳನ್ನು ಕೊಳ್ಳಲು ಜನರು ಹಿಂದೆಮುಂದೆ ನೋಡಿಲ್ಲ.

ದೊಡ್ಡ ದೊಡ್ಡ ಸಿಟಿಗಳಲ್ಲ, ಈ ಬಾರಿ ಹಳ್ಳಿಗಳೇ ನಂಬರ್ 1!

ಈ ವರದಿಯ ಅತ್ಯಂತ ರೋಚಕ ಸಂಗತಿಯೆಂದರೆ ಶಾಪಿಂಗ್ ಮಾಡಿದವರು ಯಾರು ಎಂಬುದು! ಹೌದು, ಆನ್‌ಲೈನ್ ಶಾಪಿಂಗ್ ಮಾಡುತ್ತಿರುವವರಲ್ಲಿ ಮೂರನೇ ಎರಡರಷ್ಟು ಭಾಗದಷ್ಟು ಜನ ಸಣ್ಣ ನಗರಗಳು ಮತ್ತು ಕುಗ್ರಾಮಗಳ ಕನ್ನಡಿಗರು/ಭಾರತೀಯರು! ಮೊದಲ ಬಾರಿಗೆ ಆನ್‌ಲೈನ್ ಶಾಪಿಂಗ್ ಜಗತ್ತಿಗೆ ಕಾಲಿಟ್ಟವರ ಸಂಖ್ಯೆ ದುಪ್ಪಟ್ಟಾಗಿದೆ. ಇನ್ನು ಯುವಪೀಳಿಗೆ (Gen Z) ಕೂಡ ಹಿಂದೆ ಬಿದ್ದಿಲ್ಲ.

4-5 ಪಟ್ಟು ಬೆಳೆದ ಕ್ವಿಕ್ ಕಾಮರ್ಸ್ (Quick Commerce):

ಬೆಣ್ಣೆ, ಹಾಲಿನಿಂದ ಹಿಡಿದು ಹಬ್ಬದ ಪೂಜಾ ಸಾಮಗ್ರಿಗಳವರೆಗೆ ಎಲ್ಲವನ್ನೂ ನಿಮಿಷಗಳಲ್ಲಿ ಮನೆಗೆ ತಲುಪಿಸುವ 'ಕ್ವಿಕ್ ಕಾಮರ್ಸ್' ಬ್ಯುಸಿನೆಸ್ ಈ ಬಾರಿ 4 ರಿಂದ 5 ಪಟ್ಟು ಹೆಚ್ಚಾಗಿದೆ. ನಗರಗಳಲ್ಲಿ ಜನರು ಪ್ರತಿ ಆರ್ಡರ್‌ಗೆ ಹಿಂದೆಗಿಂತ ಶೇ. 20ರಷ್ಟು ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಹಬ್ಬದ ಈ ಆನ್‌ಲೈನ್ ಭರಾಟೆ ಹೀಗೆಯೇ ಮುಂದುವರೆದರೆ, ಮುಂಬರುವ ದಿನಗಳಲ್ಲಿ ಆನ್‌ಲೈನ್ ಶಾಪರ್ಸ್ ಸಂಖ್ಯೆ 10 ಕೋಟಿ ದಾಟಲಿದ್ದು, ಭಾರತದ ಇ-ಕಾಮರ್ಸ್ ಇತಿಹಾಸದಲ್ಲೇ ಇದು ಸಾರ್ವಕಾಲಿಕ ದಾಖಲೆ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಬ್ಬಬ್ಬಾ ಈ ಒಂದು ಮೀನಿನ ಬೆಲೆ ಬರೋಬ್ಬರಿ ಇಷ್ಟೊಂದು ಸಾವಿರನಾ? ನಿಮ್ಮ ಊಹೆ ತಪ್ಪಾಗಿರೊ ಚಾನ್ಸೇ ಜಾಸ್ತಿ!
CJP ಪ್ರತಿಭಟನೆಯಲ್ಲಿ ಗಾಂಧಿ ವೇಷಧಾರಿ ವೈರಲ್‌; ಪೊಲೀಸರಿಂದ ತಪ್ಪಿಸಿಕೊಳ್ಳಲು ರನ್‌! ಕೋಲು ಬಿಟ್ಟರೂ ಓಟ ಮಾತ್ರ ನಿಲ್ಲಲಿಲ್ಲ!