CJP ಪ್ರತಿಭಟನೆಯಲ್ಲಿ ಗಾಂಧಿ ವೇಷಧಾರಿ ವೈರಲ್‌; ಪೊಲೀಸರಿಂದ ತಪ್ಪಿಸಿಕೊಳ್ಳಲು ರನ್‌! ಕೋಲು ಬಿಟ್ಟರೂ ಓಟ ಮಾತ್ರ ನಿಲ್ಲಲಿಲ್ಲ!

Published : Oct 12, 2026, 06:06 PM IST
CJP gandhi

ಸಾರಾಂಶ

ದೆಹಲಿ ಜಂತರ್ ಮಂತರ್‌ನಲ್ಲಿ ಸಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಗಾಂಧೀಜಿ ವೇಷಧಾರಿಯೊಬ್ಬರು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿದ ವಿಡಿಯೋ ವೈರಲ್ ಆಗಿದೆ. ಕೈಯಲ್ಲಿದ್ದ ಕೋಲು ಬಿದ್ದರೂ ಲೆಕ್ಕಿಸದೆ ದೋತಿ ಎತ್ತಿ ಹಿಡಿದು ಓಡಿದ ದೃಶ್ಯ ನೆಟ್ಟಿಗರ ನಗೆಪಾಟಲಿಗೆ ಕಾರಣವಾಗಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರ (CEC) ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಅಲಿಯಾಸ್‌ ಸಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದು ಈಗ ಜಾರಿಯಾಲ್ಲಿದೆ. ಅಲ್ಲಿ ನಿನ್ನೆಯಿಂದ ಹಲವು ವಿಡಿಯೋ ವೈರಲ್‌ ಆಗಿವೆ. ಅದರಲ್ಲಿ ಕೋಲು ಹಿಡಿದು ಓಡುತ್ತಿರುವ ಗಾಂಧಿ ವೇಷಧಾರಿಯಂತು ಮಿಲಿಯನ್‌ಗಟ್ಟಲೇ ವಿವ್ಸ್‌ ಬರ್ತಿದೆ. ಅಷ್ಟಕ್ಕೂ ಅಲ್ಲಿ ಆ ವೇಷಧಾರಿ ಹೇಳಿದ್ದೇನು? ವೈರಲ್‌ ಆದ ಪೋಸ್ಟ್‌ಗೆ ಬಂದ ಪ್ರತಿಕ್ರಿಯೆ ಏನು? ಇಲ್ಲಿದೆ ಸಂಪೂರ್ಣ ವಿವರ.

ವೈರಲ್ ಆದ ವಿಡಿಯೋ!

ಪ್ರತಿಭಟನೆಯಲ್ಲಿ ಮಹಾತ್ಮ ಗಾಂಧೀಜಿ ಅವರಂತೆ ವೇಷ ಧರಿಸಿದ್ದ (ಧೋತಿ ಮತ್ತು ಕೈಯಲ್ಲಿ ಲಾಠಿ ಹಿಡಿದಿದ್ದ) ವ್ಯಕ್ತಿಯೊಬ್ಬರು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯಲು ಮುಂದಾದಾಗ, ಗಾಂಧಿ ವೇಷಧಾರಿ ವ್ಯಕ್ತಿ ಪೊಲೀಸರಿಗೆ ಸಿಗಬಾರದೆಂದು ಜೋರಾಗಿ ಓಡಲು ಪ್ರಾರಂಭಿಸಿದರು. ಆ ವೇಳೆ ಜೋರಾಗಿ ಓಡುವ ಗಡಿಬಿಡಿಯಲ್ಲಿ ಅವರ ಕೈಲಿದ್ದ ಕೋಲು (ಲಾಠಿ) ಕೆಳಗೆ ಬಿದ್ದರೂ, ಅವರು ಅದನ್ನು ಎತ್ತಿಕೊಳ್ಳದೆ ದೋತಿ ಮೇಲೆತ್ತಿ ಹಿಡಿದು ವೇಗವಾಗಿ ಓಡಿದ್ದಾರೆ. ಅದು ಈಗ ನಗೆ ಪಾಟಲಿಗೆ ಕಾರಣವಾಗಿದೆ.

ವೈರಲ್ ಆಡಿಯೋ ಸಂಭಾಷಣೆ!

ಓಡುತ್ತಿರುವಾಗ ಹಿನ್ನೆಲೆಯಲ್ಲಿ ಯಾರೋ ಒಬ್ಬರು ಹಾಸ್ಯದ ಧಾಟಿಯಲ್ಲಿ "ಗಾಂಧೀಜಿಯವರೇ, ಎಲ್ಲಿಗೆ ಓಡುತ್ತಿದ್ದೀರಿ?" ಎಂದು ಹಿಂದಿಯಲ್ಲಿ ಕೂಗುವ ಧ್ವನಿ ಕೇಳಿಬರುತ್ತದೆ. ಅಷ್ಟೇ ಅಲ್ಲ ಅದಕ್ಕೆ ಬಂದ ಪ್ರತಿಕ್ರಿಯೆ ವಿಭಿನ್ನವಾಗಿದ್ದವು. ಅಹಿಂಸಾತ್ಮಕ ಪ್ರತಿಭಟನೆಯ ನಡುವೆ ನಡೆದ ಈ ಹಾಸ್ಯಭರಿತ ಸನ್ನಿವೇಶದ ವಿಡಿಯೋಗೆ ನೆಟ್ಟಿಗರು ತರಹೇವಾರಿ ಮೀಮ್ಸ್ ಹಾಗೂ ತಮಾಷೆಯ ಕಮೆಂಟ್‌ಗಳ ಮೂಲಕ ಭಾರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಹಿಂಸೆಯ ಮಾರ್ಗ ಬಿಟ್ಟು ಗಾಂಧೀಜಿ ಈಗ ಮಿಂಚಿನ ಓಟದ ಮಾರ್ಗ ಹಿಡಿದಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈ ವಯಸ್ಸಿನಲ್ಲೂ ಗಾಂಧೀಜಿಯವರ ಓಟದ ವೇಗ ನೋಡಿ ಪೊಲೀಸರೇ ಬೆರಗಾಗಿದ್ದಾರೆ, ಅವರಿಗಿಂತ ಸೂಪರ್ ಫಾಸ್ಟ್ ಆಗಿ ಓಡುತ್ತಿದ್ದಾರೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಕೋಲು ಬಿಟ್ಟರೂ ಓಟ ನಿಲ್ಲಲಿಲ್ಲ!

ಕೈಯಲ್ಲಿದ್ದ ಸತ್ಯದ ಕೋಲು ಕೆಳಗೆ ಬಿದ್ದರೂ ಪರವಾಗಿಲ್ಲ, ಪೊಲೀಸರ ಕೈಗೆ ಮಾತ್ರ ಸಿಗಬಾರದು ಎಂದು ದೋತಿ ಎತ್ತಿ ಓಡುತ್ತಿರುವುದು ಮಜವಾಗಿದೆ ಎಂಬ ಪ್ರತಿಕ್ರಿಯೆಗಳು ಬಂದಿವೆ. ಅದನ್ನು ರನ್ನಿಂಗ್ ರೇಸ್‌ಗೆ ಹೋಲಿಕೆ ಮಾಡಿದ್ದಾರೆ. ಇದು ಪ್ರತಿಭಟನೆಯೋ ಅಥವಾ ಪೊಲೀಸರು ಮತ್ತು ಗಾಂಧೀಜಿ ನಡುವಿನ ರನ್ನಿಂಗ್ ರೇಸ್ ಸ್ಪರ್ಧೆಯೋ ತಿಳಿಯುತ್ತಿಲ್ಲ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲ ಹಾಲಿವುಡ್ ಸಿನಿಮಾಗೂ ಹೋಲಿಕೆ ಮಾಡಿದ್ದಾರೆ. ಇದನ್ನು ನೋಡಿದರೆ 'ಫಾರೆಸ್ಟ್ ಗಂಪ್' ಸಿನಿಮಾದ 'ರನ್ ಫಾರೆಸ್ಟ್ ರನ್' ಡೈಲಾಗ್ ನೆನಪಾಗುತ್ತಿದೆ ಎಂದು ಮೀಮ್ಸ್ ಕ್ರಿಯೇಟರ್ಸ್ ಪೋಸ್ಟ್ ಮಾಡುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಕೆಲಸ ಬಿಡುವುದು ಸುಲಭವಾಗಿರಲಿಲ್ಲ…’ 23 ವರ್ಷಗಳ Microsoft ನಂಟು ಕಡಿದುಕೊಂಡ VP, ಕಾರಣ ಕಣ್ಣೀರಾಗಿಸುತ್ತೆ!
Neha Bora: ಯಾರೀಕೆ ನೇಹಾ ಬೋರಾ? BJPಗೆ ಬೆಂಬಲ ನೀಡುವ ಕುಟುಂಬದಿಂದ ಬಂದ ಈಕೆ ಏನು ಓದಿದ್ದಾರೆ?