
ನವದೆಹಲಿ(ಮಾ.29): ಕೊರೋನಾ ಆರ್ಭಟ ಕೆಲ ದೇಶಗಳಲ್ಲಿ ಹೆಚ್ಚಾಗುತ್ತಿದ್ದರೂ, ವಿಶ್ವದಲ್ಲಿ ಕೊಂಚ ಇಳಿಮುಖದತ್ತ ಸಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಕೋವಿಡ್ ಗಣನೀಯ ಇಳಿಕೆಯಾಗಿದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ವರದಿ ಬಹಿರಂಗ ಪಡಿಸಿದೆ. ಈ ವರದಿ ಪ್ರಕಾರ ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ವಿಶ್ವದಲ್ಲೇ ಅತೀ ಕಡಿಮೆ ಎಂದಿದೆ.
ಭಾರತದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಪ್ರತಿ ಮಿಲಿಯನ್ ಜನಸಂಖ್ಯೆಗೆ 374 ಮಾತ್ರ. ಆದರೆ ಅಮೆರಿಕ, ಬ್ರೆಜಿಲ್, ರಷ್ಯಾ, ಮೆಕ್ಸಿಕೋ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ಈ ಸಂಖ್ಯೆ ಹೆಚ್ಚಾಗಿದೆ. ವಿಶ್ವದ ಎಲ್ಲಾ ರಾಷ್ಟ್ರಗಳಗೆ ಹೋಲಿಸಿದರೆ ಭಾರತದಲ್ಲಿ ಅತೀ ಕಡಿಮೆ ಸಾವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.
ಕೋವಿಡ್‌ಗೆ ಬಲಿಯಾದ ಪತಿ: ಕೆಲಸಕ್ಕಾಗಿ SSLC ಪರೀಕ್ಷೆ ಬರೆದ ಪತ್ನಿ
ವಿಶ್ವ ಆರೋಗ್ಯ ಸಂಸ್ಥೆ ವರದಿ ಕುರಿತು ಕೇಂದ್ರದ ರಾಜ್ಯ ಖಾತೆ ಆರೋಗ್ಯ ಸಚಿವ ಭಾರತಿ ಪ್ರವೀಣ್ ಪವಾರ್ ರಾಜ್ಯಸಭೆಯಲ್ಲಿ ಅಂಕಿ ಅಂಶ ತೆರೆದಿಟ್ಟಿದ್ದಾರೆ. ಕೆಲ ವರದಿಗಳು ಭಾರತದಲ್ಲಿ ಅತೀ ಹೆಚ್ಚಿನ ಕೋವಿಡ್ ಸಾವಾಗಿದೆ ಎಂದು ವರದಿ ಮಾಡಿದೆ. ಆದರೆ ಈ ವರದಿಗಳಲ್ಲಿ ಉಲ್ಲೇಖಿಸಿರುವ ಸಾವಿನ ಸಂಖ್ಯೆ ಭಾರತದ ಅಧಿಕೃತ ದಾಖಲೆಗಳಲ್ಲಿರುವ ಸಾವಿನ ಸಂಖ್ಯೆಗಿಂತ ಹೆಚ್ಚಾಗಿದೆ ಎಂದರು.
ಭಾರತದಲ್ಲಿನ ಕೋವಿಡ್ ಸಾವು ನೋವುಗಳ ಕುರಿತು ಹಲವು ವರದಿಗಳಿವೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ನಿಖರ ಅಂಕಿ ಅಂಶಗಳನ್ನು ಹೆಕ್ಕಿ ತೆಗೆದು ವರದಿ ನೀಡಿದೆ. ಆದರೆ ಈಗಾಗಲೇ ಕೆಲ ಎಜೆನ್ಸಿಗಳು ನೀಡಿರುವ ವರದಿ ನಂಬಲು ಸಾಧ್ಯವಿಲ್ಲ. ಈ ಎಜೆನ್ಸಿಗಳು ನಡೆಸಿದ ಅಧ್ಯಯನ ವಿಧಾನವೂ ತಪ್ಪಾಗಿದೆ ಎಂದು ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.
ಶೀಘ್ರದಲ್ಲೇ ಕೋವಿಡ್-19 ಕಾಲರ್ ಟ್ಯೂನ್ ಬಂದ್: ಟ್ವೀಟರ್‌ನಲ್ಲಿ ಮೀಮ್ಸ್ ಸುರಿಮಳೆ
ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ ಇತರ ದೇಶಗಳಿಗಿಂತ ಹೆಚ್ಚಾಗಿದೆ ಅನ್ನೋ ವರದಿ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಭಾರತಿ ಪ್ರವೀಣ್ ಪವಾರ್ WHO ವರದಿ ಮೂಲಕ ಉತ್ತರ ನೀಡಿದ್ದಾರೆ. ವಿಶ್ವ ಸಂಸ್ಥೆ ವರದಿ ಎಲ್ಲರೂ ನೋಡಬಹುದು. ನಂಬಿಕಸ್ಥ ವರದಿಗಳನ್ನೇ ಆಧರಿಸಿ ಹೇಳಿಕೆ ನೀಡಿ ಎಂದು ಸಚಿವರು ಮನವಿ ಮಾಡಿದ್ದಾರೆ.
ಎಲ್ಲಿ ಎಷ್ಟುಸಾವು? (ಪ್ರತಿ ದಶಲಕ್ಷ ಜನಸಂಖ್ಯೆಗೆ)
ಬ್ರೆಜಿಲ್: 3092 ಸಾವು
ಅಮೆರಿಕ: 2920 ಸಾವು
ರಷ್ಯಾ: 2506 ಸಾವು
ಮೆಕ್ಸಿಕೋ: 2498 ಸಾವು
ಭಾರತ :374 ಸಾವು
ಪ್ರತಿ ದಶಲಕ್ಷ ಜನಸಂಖ್ಯೆಗೆ ಅಮೆರಿಕದಲ್ಲಿ 2920, ಬ್ರೆಜಿಲ್‌ನಲ್ಲಿ 3092, ರಷ್ಯಾದಲ್ಲಿ 2506, ಮೆಕ್ಸಿಕೋದಲ್ಲಿ 2498 ಸಾವುಗಳು ಸಂಭವಿಸಿವೆ. ಆದರೆ ಭಾರತದಲ್ಲಿ 374 ಸಾವು ಕಂಡುಬಂದಿವೆ. ಇದು ಕಡಿಮೆ ಪ್ರಮಾಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ದಾಖಲೆಗಳು ಹೇಳುತ್ತವೆ ಎಂದು ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.
ಕೊರೋನಾ ಕಾಲದಲ್ಲಿ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ. ನಾಗರಿಕ ನೋಂದಣಿ ವ್ಯವಸ್ಥೆಗೂ, ಅಧಿಕೃತ ಮರಣ ಸಂಖ್ಯೆಗೂ ತಾಳೆಯಾಗುತ್ತಿಲ್ಲವೇ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಇದೇ ವೇಳೆ, ಕೇಂದ್ರ ಸರ್ಕಾರ ಪ್ರಕಟಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸಾವುಗಳು ಕೋವಿಡ್‌ನಿಂದ ದೇಶದಲ್ಲಿ ಸಂಭವಿಸಿವೆ ಎಂದು ಕೆಲವು ಊಹಾಪೋಹದ ವರದಿಗಳು ಪ್ರಕಟವಾಗಿವೆ ಎಂದಿದ್ದಾರೆ.
1259 ಕೋವಿಡ್ ಕೇಸು, ಸಕ್ರಿಯ ಸೋಂಕು 15,378ಕ್ಕೆ ಇಳಿಕೆ
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತಷ್ಟುಇಳಿಕೆಯಾಗಿದ್ದು, ಮಂಗಳವಾರ ಮುಂಜಾನೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1,259 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 35 ಸೋಂಕಿತರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಸಕ್ರಿಯ ಸೋಂಕುಗಳ ಸಂಖ್ಯೆ 15,378ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.22 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.25 ರಷ್ಟಿದೆ. ಕೋವಿಡ್ ಚೇತರಿಕೆಯ ದರವು ಶೇ. 98.75ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 183.53 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ