ನವದೆಹಲಿ: ಜಾಗತಿಕ ಏರಿಳಿತಗಳು, ಮಧ್ಯಪ್ರಾಚ್ಯ ಸಂಘರ್ಷ, ಎಲ್ ನಿನೋ ಎಫೆಕ್ಟ್ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಜಾಗತಿಕ ರೇಟಿಂಗ್ ಏಜೆನ್ಸಿಗಳಲ್ಲಿ ಒಂದಾಗಿರುವ ಮೂಡೀಸ್, ಇದೀಗ ದೇಶದ ಆರ್ಥಿಕ ಬೆಳವಣಿಗೆ ದರದ ಮುನ್ನೋಟವನ್ನು ತನ್ನ ಈ ಹಿಂದಿನ ಶೇ.6ರಿಂದ ಶೇ.7ಕ್ಕೇರಿಸಿದೆ.
ಭಾರತದ ಬಿಎಎ3 ಸಾವರಿನ್ ರೇಟಿಂಗ್ ಮೇಲಿನ ನಿಯಮಿತ ಪರಿಶೀಲನೆ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮೂಡೀಸ್, ದೇಶದ ಸಾಲ ಮರುಪಾವತಿಯು ನಿಧಾನವಾಗಿ ಹೆಚ್ಚಾಗಲಿದೆ ಎಂದು ಹೇಳಿದೆ.
ಆದರೆ, ಮಧ್ಯಏಷ್ಯಾ ಸಂಘರ್ಷ ಮುಂದುವರಿಕೆ, ತೈಲ ದರ ಏರಿಕೆ ಹಾಗೂ ವಾರ್ಷಿಕ ಸರಾಸರಿ ಹಣದುಬ್ಬರದ ಹೆಚ್ಚಳ, ಎಲ್ ನಿನೋ ಪರಿಣಾಮಗಳಿಂದಾಗಿ ಆಹಾರ ವಸ್ತುಗಳ ದರ ಏರಿಕೆಯಾಗಬಹುದು. ಇದು ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದೂ ಎಚ್ಚರಿಸಿದೆ.
09:30 AM (IST) Sep 19
09:23 AM (IST) Sep 19
08:37 AM (IST) Sep 19
08:13 AM (IST) Sep 19
ಗಣೇಶ ಹಬ್ಬದಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ 'ಆಮ್ರಪಾಲಿ ಭಾರತಂ' ಎಂಬ ವಿಶೇಷ ನೆಕ್ಲೆಸ್ ಎಲ್ಲರ ಗಮನ ಸೆಳೆದಿದೆ. ದೇಶದ ವಿವಿಧ ಭಾಗಗಳ ಪ್ರಾಚೀನ ಆಭರಣಗಳನ್ನು3 ವರ್ಷಗಳ ಕಾಲ ಸಂಗ್ರಹಿಸಿ ಈ ಅಪರೂಪದ ಹಾರವನ್ನು ತಯಾರಿಸಲಾಗಿದೆ. ಇದರ ಬೆಲೆ ಬಹಿರಂಗವಾಗಿಲ್ಲದಿದ್ದರೂ, ಇದು ಲಕ್ಷಾಂತರ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
08:09 AM (IST) Sep 19