ದ್ರೌಪದಿ ನನ್ನ ಮೂಲ ಹೆಸರಲ್ಲ, ನೂತನ ರಾಷ್ಟ್ರಪತಿಯ ಮೊದಲ ಹೆಸರು ಬಹಿರಂಗ!

Published : Jul 25, 2022, 04:12 PM IST
ದ್ರೌಪದಿ ನನ್ನ ಮೂಲ ಹೆಸರಲ್ಲ, ನೂತನ ರಾಷ್ಟ್ರಪತಿಯ ಮೊದಲ ಹೆಸರು ಬಹಿರಂಗ!

ಸಾರಾಂಶ

ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಾಣವಾಗಿದೆ. ದ್ರೌಪದಿ ಮುರ್ಮು ಹೆಸರು ಇದೀಗ ವಿಶ್ವದಲ್ಲೇ ಭಾರಿ ಸದ್ದು ಮಾಡತ್ತಿದೆ. ಆದರೆ ನೂತನ ರಾಷ್ಟ್ರಪತಿಗೆ ಪೋಷಕರಿಟ್ಟ ಹೆಸರು ದ್ರೌಪದಿ ಅಲ್ಲ, ಈ ಕುರಿತು ಸ್ವತಃ ಮುರ್ಮು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ನವದೆಹಲಿ(ಜು.25):  ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಭೂತಪೂರ್ವ ಗೆಲುವಿನೊಂದಿಗೆ ಮುರ್ಮು ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಆದಿವಾಸಿ ಸಮುದಾಯದಿಂದ ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಮೊದಲ ಮಹಿಳೆ ಅನ್ನೋ ಕೀರ್ತಿಗೂ ಭಾಜನರಾಗಿದ್ದಾರೆ. ದ್ರೌಪದಿ ಮುರ್ಮು ಹೆಸರು ಭಾರತ ಮಾತ್ರವಲ್ಲ, ವಿದೇಶದಲ್ಲೂ ಭಾರಿ ಸದ್ದು ಮಾಡುತ್ತಿದೆ. ಆದರೆ ನೂತನ ರಾಷ್ಟ್ರಪತಿಯ ಮೊದಲ ಹೆಸರು ಅಂದರೆ ಪೋಷಕರು ಇಟ್ಟ ಹೆಸರು ದ್ರೌಪದಿ ಎಂದಲ್ಲ. ಶಾಲಾ ದಾಖಲಾತಿ ಸಂದರ್ಭದಲ್ಲಿ ಟೀಚರ್ ಇಟ್ಟ ಹೆಸರು ದ್ರೌಪದಿ. ಹಾಗಾದರೆ ಪೋಷಕರು ಇಟ್ಟ ಹೆಸರೇನು? ಈ ಕುರಿತು ದ್ರೌಪದಿ ಮರ್ಮು ಬಹಿರಂಗ ಪಡಿಸಿದ್ದಾರೆ. ನೂತನ ರಾಷ್ಟ್ರಪತಿಯ ಮೂಲ ಹೆಸರು ಪುತಿ.  ಆದರೆ ಶಾಲಾ ದಾಖಲಾತಿ ವೇಳೆ ಟೀಚರ್, ಮಹಾಭಾರತದಿಂದ ದ್ರೌಪದಿ ಎಂಬ ಹೆಸರು ಆಯ್ಕೆ ಮಾಡಿಕೊಂಡು ಇಟ್ಟಿದ್ದಾರೆ. ಈ ಕುರಿತು ಸ್ವತಃ ಒಡಿಯಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ವತಃ ದ್ರೌಪದಿ ಮುರ್ಮು ಹೇಳಿದ್ದಾರೆ.

ಸಂತಲಿ ಆದಿವಾಸಿ ಸಮುದಾಯದಲ್ಲಿ(santhali community) ಹೆಸರು ಅಜರಾಮರ. ಕಾರಣ ಇಲ್ಲಿ ಮಗಳು ಹುಟ್ಟಿದರೆ ಅಜ್ಜಿಯ ಹೆಸರಿಡುತ್ತಾರೆ. ಮಗ ಹುಟ್ಟಿದರೆ ಅಜ್ಜನ ಹೆಸರಿಡುತ್ತಾರೆ. ಹೀಗಾಗಿ ಒಂದು ಕುಟುಂಬದಲ್ಲಿ ಹೆಸರು ಯಾವತ್ತು ನೆಲೆ ನಿಂತಿರುತ್ತದೆ. ಹೀಗೆ ದ್ರೌಪದಿ ಮುರ್ಮುಗೆ(Draupadi Murmu) ತಮ್ಮ ಅಜ್ಜಿಯ ಹೆಸರಡು ಇಡಲಾಗಿತ್ತು. ಶಾಲಾ ದಾಖಲಾತಿ ವರೆಗೆ ಪುತಿ(Puti) ಅನ್ನೋ ಹೆಸರನ್ನೇ ಕರೆಯುತ್ತಿದ್ದರು. ಆದರೆ ಶಾಲಾ ದಾಖಲಾತಿ ವೇಳೆ ಪುತಿ ಅನ್ನೋ ಹೆಸರಿನ ಬದಲು ದ್ರೌಪದಿ ಎಂದು ಟೀಚರ್ ದಾಖಲಿಸಿದ್ದಾರೆ. ಆದರೆ ದ್ರೌಪದಿ ಹೆಸರನ್ನು ಆದಿವಾಸ ಸಮುದಾಯ ಉಚ್ಚಾರ ಮಾಡಲು ಕಷ್ಟವಾಗುತ್ತಿತ್ತು. ಹೀಗಾಗಿ ಕುಟುಂಬಸ್ಥರು, ಸ್ಥಳೀಯರೆಲ್ಲಾ ಪುತಿ ಎಂದೇ ಕರೆಯುತ್ತಿದ್ದರು. ಕ್ರಮೇಣ ದ್ರೌಪದಿ ಹೆಸರಿಗೆ ಒಗ್ಗಿಕೊಂಡರು ಎಂದು ಮುರ್ಮು ಹೇಳಿದ್ದಾರೆ.

ಭಾರತದ ಮೊಟ್ಟಮೊದಲ ಆದಿವಾಸಿ ರಾಷ್ಟ್ರಪತಿ ಪದಗ್ರಹಣದ ಆಕರ್ಷಕ ಚಿತ್ರಗಳು

ಟೀಚರ್‌ಗೆ ನನ್ನ ಪುತಿ ಹೆಸರು ಹಿಡಿಸಲಿಲ್ಲ. ಹೀಗಾಗಿ ಟೀಚರ್ ನನ್ನ ಹೆಸರನ್ನು ಬದಲಿಸಿದರು. ತುಡು  ಸಮುದಾಯದ ಹೆಸರನ್ನೂ ಇಡಲಾಗಿತ್ತು. ಹೀಗಾಗಿ ದ್ರೌಪದಿ ತುಡು ಎಂದೇ ಶಾಲೆಯಲ್ಲಿ ದಾಖಲಾಗಿ ಮಾಡಲಾಗಿತ್ತು. ಬಳಿಕ ದ್ರೌಪದಿ ತುಡು, ಬ್ಯಾಂಕ್ ಉದ್ಯೋಗಿ ಶ್ಯಾಮ್ ಚರಣ್ ಅವರನ್ನು ಮದುವೆಯಾದರು. ಬಳಿಕ ತಮ್ಮ ಸರ್‌ನೇಮ್‌ನ್ನು ಮುರ್ಮು ಎಂದು ಬದಲಾಯಿಸಿದರು.  ದ್ರೌಪದಿ ಅವರಿಗೆ ಇಬ್ಬರು ಗಂಡು, ಒಂದು ಹೆಣ್ಣು ಮಕ್ಕಳು. ದುರದೃಷ್ಟವಶಾತ್‌ ಅವರು ತಮ್ಮ ಪತಿ ಮತ್ತು ಇಬ್ಬರು ಗಂಡುಮಕ್ಕಳನ್ನು ಕಳೆದುಕೊಂಡಿದ್ದಾರೆ.

 

ದ್ರೌಪದಿ ಮುರ್ಮು ರಾಷ್ಟ್ರಪತಿಯಾಗ್ತಿದ್ದಂತೆ ಸಂತಾಲಿ ಸೀರೆಗೆ ಸಿಕ್ತು ರಾಜ ಮನ್ನಣೆ

ಶೇ.64ರಷ್ಟುಮತಗಳನ್ನು ಪಡೆಯುವ ಮೂಲಕ, ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದ್ರೌಪದಿ ಆಯ್ಕೆಯಾಗಿದ್ದಾರೆ. ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಯಶವಂತ್‌ ಸಿನ್ಹಾ ಶೇ.36ರಷ್ಟುಮತಗಳನ್ನು ಪಡೆದು ಸೋಲನ್ನಪ್ಪಿದ್ದಾರೆ. ಜು.18ರಂದು ನಡೆದ ಚುನಾವಣೆಯಲ್ಲಿ 771 ಸಂಸದರು ಹಾಗೂ 4025 ಶಾಸಕರು ಮತ ಚಲಾಯಿಸಿದ್ದು, ಶೇ.99ರಷ್ಟುಮತದಾನವಾಗಿತ್ತು. ಒಟ್ಟು ಚಲಾವಣೆಯಾದ ಮತಗಳ ಪೈಕಿ ದ್ರೌಪದಿ ಮುರ್ಮು ಅವರು 6,76,803 ಮತ ಪಡೆದರೆ, ಸಿನ್ಹಾ 3,80,177 ಮತಗಳನ್ನು ಪಡೆದಿದ್ದಾರೆ ಎಂದು ರಿಟರ್ನಿಂಗ್‌ ಆಫೀಸರ್‌ ಪಿ.ಸಿ.ಮೋದಿ ಪ್ರಕಟಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ