ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಚೂಣಿಯಲ್ಲಿದೆ ಭಾರತ; ಪ್ರಧಾನಿ ಮೋದಿ!

By Suvarna News  |  First Published Jul 28, 2020, 3:56 PM IST

ಕೊರೋನಾ ವೈರಸ್ ವಿರುದ್ಧ ಎಲ್ಲಾ ದೇಶಗಳು ಹೋರಾಡುತ್ತಿದೆ. ವಿಶೇಷ ಪ್ಯಾಕೇಜ್ ಘೋಷಿಸಿವೆ. ಇತ್ತ ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿದ ವಿವರ ಇಲ್ಲಿದೆ.


ನವದೆಹಲಿ(ಜು.28):  ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ಭಾರತ ಕೈಗೊಂಡಿದೆ. ವೈದ್ಯಕೀಯ ಸಲಕರಣೆ, ಸೋಕಿತರ ಚಿಕಿತ್ಸೆಗೆ ಆಸ್ಪತ್ರೆ, ಸೇರಿದಂತೆ ಎಲ್ಲಾ ವಿಭಾಗದಲ್ಲೂ ಭಾರತ ಯಶಸ್ಸು ಸಾಧಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ವೇಗವಾಗಿ ಕರೋನಾ ವೈರಸ್ ವಿರುದ್ಧ ಹೋರಾಟ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾ: ಬಟ್ಟೆ ಒಗೆದು ಕೈ ನೋವು ಹೋಯ್ತು ಎಂದ ಸಿಎಂ ಚೌಹಾಣ್..!.

Tap to resize

Latest Videos

ನೋಯ್ಡಾ, ಮುಂಬೈ ಹಾಗೂ ಕೋಲ್ಕತಾ ನಗರಗಳಲ್ಲಿನ ಕೊರೋನಾ ವೈರಸ್ ಟೆಸ್ಟ್ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಮೋದಿ, ಹೆಚ್ಚು ಜನಸಂಖ್ಯೆ ಹೊಂದಿದ ದೇಶಗಳಲ್ಲಿ ಕೊರೋನಾಗೆ ಬಲಿಯಾಗುತ್ತಿರುವ ಪ್ರಮಾಣ ಕೂಡ ಅತೀಯಾಗಿದೆ. ಆದರೆ ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಈಗ 2 ಕೇಸ್: 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!

ಕೊರೋನಾ ಸೋಂಕಿತರ ಗುಣ ಮುಖ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕೆಲ ರಾಜ್ಯ ಹಾಗೂ ನಗರಗಳನ್ನು ಹೊರತು ಪಡಿಸಿದರೆ ಒಟ್ಟಾರೆ ಭಾರತದಲ್ಲಿ ಗುಣಮುಖರ ಸಂಖ್ಯೆ ಇತರ ದೇಶಗಳಿಗಿಂತ ಹೆಚ್ಚಿದೆ. ಇದುವರೆಗೆ ದೇಶದಲ್ಲಿ 10  ಲಕ್ಷ ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ ಎಂದರು.

ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. 11,000 ಕೊರೋನಾ ಆರೋಗ್ಯ ಕೇಂದ್ರ ಹಾಗೂ 11 ಲಕ್ಷ ಐಸೋಲೇಶನ್ ಬೆಡ್ ಭಾರತದಲ್ಲಿದೆ. ಕೊರೋನಾ ವಕ್ಕರಿಸಿದ ಆರಂಭದಲ್ಲೇ ಭಾರತ 15,000 ಕೋಟಿ ರೂಪಾಯಿಯನ್ನು ಈ ಹೋರಾಟಕ್ಕೆ ಮೀಸಲಿಡಲಾಗಿದೆ ಎಂದು ಮೋದಿ ಹೇಳಿದರು.

ಜನವರಿಯಲ್ಲಿ ಭಾರತದಲ್ಲಿ ಕೇವಲ 1 ಕೋರನಾ ಪರೀಕ್ಷಾ ಕೇಂದ್ರವಿತ್ತು. ಇದೀಗ 1,300 ಲ್ಯಾಬ್‌ಗಳು ಭಾರತದಲ್ಲಿದೆ. ಸದ್ಯ ಪ್ರತಿ ದಿನ 5 ಲಕ್ಷ ಮಂದಿಯ ಪರೀಕ್ಷೆ ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ಕೆಲವೇ ವಾರಗಳಲ್ಲಿ 10 ಲಕ್ಷಕ್ಕೆ ಏರಿಸಲಾಗುವುದು. ಹೆಚ್ಚು ಪರೀಕ್ಷೆ ಮಾಡಿದರೆ, ವೇಗವಾಗಿ ಕೊರೋನಾ ಹರಡುವುದನ್ನು ನಿಯಂತ್ರಣ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.

click me!