ಕೊರೋನಾ ತುರ್ತು ಲಸಿಕೆ ಅನುಮತಿಗೆ ಕೇಂದ್ರದ ಸಿದ್ಧತೆ| ಲಸಿಕೆಗೆ ತುರ್ತು ಅನುಮತಿ ವಿಧಾನಗಳ ಕುರಿತು ನವದೆಹಲಿಯಲ್ಲಿ ಉನ್ನತ ಮಟ್ಟದ ಸಭೆ| 3ನೇ ಹಂತ ಪೂರ್ಣಕ್ಕೂ ಮುನ್ನ, ಸಾಮಾನ್ಯ ಲೈಸೆನ್ಸ್ ಬದಲು ತುರ್ತು ಬಳಕೆಗೆ | ಅವಕಾಶ| ಕೋವಿಶೀಲ್ಡ್ ಲಸಿಕೆಗೆ ಬ್ರಿಟನ್ ಅನುಮತಿ ಸಿಕ್ಕರೆ ಭಾರತದಲ್ಲೂ ತುರ್ತು ಅನುಮತಿ
ನವದೆಹಲಿ(ನ.23): ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಮೂರನೇ ಹಂತದ ಪ್ರಯೋಗ ಮುಗಿಯುವ ಮೊದಲೇ ತುರ್ತು ಸಂದರ್ಭಕ್ಕೆಂದು ಲಸಿಕೆಯ ಬಳಕೆಗೆ ಅನುಮತಿ ನೀಡುವ ಸಾಧ್ಯಾಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಬ್ರಿಟನ್‌ನ ಆಕ್ಸ್‌ಫರ್ಡ್ ಸಿದ್ಧಪಡಿಸುತ್ತಿರುವ ‘ಆ್ಯಸ್ಟ್ರಾಜೆನೆಕಾ’ ಲಸಿಕೆಗೆ ಬ್ರಿಟನ್ ಸರ್ಕಾರ ಅನುಮೋದನೆ ನೀಡಿದರೆ ಭಾರತದಲ್ಲೂ ತುರ್ತು ಬಳಕೆಗೆ ಅನುಮೋದನೆ ಲಭಿಸುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ 41 ಲಕ್ಷ ಮಂದಿಗೆ ಕೊರೋನಾ ಸೋಂಕು ಪರೀಕ್ಷೆ
undefined
‘ಇತ್ತೀಚೆಗೆ ಪೌಲ್, ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಹಾಗೂ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ಬಗ್ಗೆ ಸಭೆ ನಡೆಸಿದರು. ಈ ವೇಳೆ ತುರ್ತು ಬಳಕೆಗಾಗಿ ಲಸಿಕೆ ಖರೀದಿ ಬಗ್ಗೆ ಚರ್ಚಿಸಲಾಯಿತು. ಪ್ರಧಾನಿ ಕಚೇರಿ ರಚಿಸಿರುವ ಲಸಿಕಾ ಕಾರ್ಯಪಡೆಗೆ ಲಸಿಕೆಯ ತುರ್ತು ಪಡೆಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುವ ಅಧಿಕಾರ ನೀಡಲಾಯಿತು’ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಮಾತನಾಡಿದ ನೀತಿ ಆಯೋಗದ ಸದಸ್ಯರೂ ಆದ ರಾಷ್ಟ್ರೀಯ ಕೋವಿಡ್-19 ಲಸಿಕಾ ತಜ್ಞರ ಸಮಿತಿ ಮುಖ್ಯಸ್ಥ ವಿನೋದ್ ಪೌಲ್, ‘ಬ್ರಿಟನ್ ಸರ್ಕಾರವು ಆಸ್ಟ್ರಾಜೆನೆಕಾ ಲಸಿಕೆಗೆ ಅನುಮೋದನೆ ನೀಡಿದರೆ ಭಾರತದಲ್ಲೂ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ನಿಯಂತ್ರಣ ಸಂಸ್ಥೆ ಅನುಮೋದಿಸಬಹುದು’ ಎಂದರು. ಭಾರತದಲ್ಲಿ ಆಸ್ಟ್ರಾಜೆನೆಕಾ ಲಸಿಕೆ ವಿತರಣೆಯ ಹಕ್ಕನ್ನು ಅದರ್ ಪೂನಾವಾಲಾ ಅವರ ಪುಣೆ ಮೂಲದ ಸೀರಂ ಇನ್ಸ್‌ಟಿಟ್ಯೂಟ್ ಪಡೆದುಕೊಂಡಿದೆ.
ಮೊದಲು ವಾರಿಯರ್ಸ್‌ಗೆ, ನಂತರ ಇತರರಿಗೆ ಕೊರೋನಾ ಲಸಿಕೆ
‘ಭಾರತದಲ್ಲಿ ಲಸಿಕೆಯ 3ನೇ ಹಂತದ ಪ್ರಯೋಗ ಇನ್ನೂ ನಡೆದಿದೆ. ಪ್ರಯೋಗ ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಅಧಿಕೃತ ಅನುಮತಿ ಭಾರತ ಸರ್ಕಾರದಿಂದ ಲಭಿಸಿದರೆ, ಆದ್ಯತಾ ಪಟ್ಟಿಯಲ್ಲಿ ಯಾರಿದ್ದಾರೋ ಅವರಿಗೆ ಮೊದಲು ಲಸಿಕೆಯನ್ನು ಮುಂದಿನ ವರ್ಷದ ಆರಂಭದ ಹಂತದಲ್ಲೇ ನೀಡಬಹುದು’ ಎಂದು ಪೌಲ್ ಹೇಳಿದರು.
ಆಸ್ಟ್ರಾಜೆನೆಕಾ, ಕೋವಿಶೀಲ್ಡ್, ಕೋವ್ಯಾಕ್ಸಿನ್, ಫೈಝರ್, ಸ್ಪುಟ್ನಿಕ್-ವಿ, ಝೈಡಸ್ ಕ್ಯಾಡಿಲಾ ಸೇರಿ ಹಲವು ಲಸಿಕೆಗಳು ಇನ್ನೂ ಪ್ರಯೋಗ ಹಂತದಲ್ಲಿದ್ದು, ತೀವ್ರ ಸ್ಪರ್ಧೆ ಏರ್ಪಟ್ಟಿದೆ.