Covid Cases In India: ಒಂದೇ ದಿನ 56% ಹೆಚ್ಚಳ, ದೇಶದಲ್ಲಿ 90000+ ಕೇಸ್‌!

By Kannadaprabha NewsFirst Published Jan 7, 2022, 4:15 AM IST
Highlights

* ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

* ಕೇವಲ 9 ದಿನದಲ್ಲಿ ಸೋಂಕಿತರ ಸಂಖ್ಯೆ 1000% ಏರಿಕೆ

* ಒಂದೇ ದಿನ ಕೋವಿಡ್‌ 56% ಹೆಚ್ಚಳ ದೇಶದಲ್ಲಿ 90000+ ಕೇಸ್‌

ನವದೆಹಲಿ(ಜ. 07): ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 90,928 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 200 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಜೊತೆಗೆ ಬುಧವಾರದ ಸೋಂಕಿಗೆ ಹೋಲಿಸಿದರೆ ಒಂದೇ ದಿನದಲ್ಲಿ ಹೊಸ ಪ್ರಕರಣಗಳಲ್ಲಿ ಶೇ.56ರಷ್ಟುಭಾರೀ ಏರಿಕೆ ಕಂಡಿದೆ.

ಕಳೆದ ಬುಧವಾರ ದೇಶದಲ್ಲಿ 9195 ಪ್ರಕರಣ ವರದಿಯಾಗಿತ್ತು. ಈ ಗುರುವಾರ ಅದು 90928ಕ್ಕೆ ತಲುಪಿದೆ. ಅಂದರೆ ಒಟ್ಟಾರೆ ಕೇಸಿನಲ್ಲಿ 10 ಪಟ್ಟು ಅಥವಾ ಶೇ.1000ದಷ್ಟುಹೆಚ್ಚಳವಾಗಿದೆ.

ಇನ್ನು ಗುರುವಾರದ ಹೊಸ ಪ್ರಕರಣಗಳೊಂದಿಗೆ ಒಟ್ಟು ಕೇಸು 3.51 ಕೋಟಿಗೆ ಏರಿಯಾಗಿದೆ. ಜೊತೆಗೆ ಗುರುವಾರ 325 ಸೋಂಕಿತರ ಸಾವಿನೊಂದಿಗೆ ಒಟ್ಟು ಸಾವಿನ ಪ್ರಮಾಣ 4.82 ಲಕ್ಷ ತಲುಪಿದೆ. ಇದೇ ವೇಳೆ ಹೊಸ ಕೇಸಿನ ಪ್ರಮಾಣದಲ್ಲಿ ಏರಿಕೆಯೊಂದಿಗೆ ಸಕ್ರಿಯ ಸೋಂಕಿತರ ಪ್ರಮಾಣ ಕೂಡಾ 2.85 ಲಕ್ಷ ತಲುಪಿದೆ. ಆದರೆ ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 0.81ರಷ್ಟಿದೆ. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ.6.43ರಷ್ಟುದಾಖಲಾಗಿದ್ದು, ಗುಣಮುಖ ದರ ಶೇ.97.81ಕ್ಕೆ ಕುಸಿದಿದೆ.

ಕರ್ನಾಟಕ

- 5031 ಕೇಸ್‌

- 200 ದಿನದ ಗರಿಷ್ಠ

- ಒಂದೇ ದಿನ 16% ಏರಿಕೆ

ಬೆಂಗಳೂರು

- 4523 ಕೇಸ್‌

- 216 ದಿನದ ಗರಿಷ್ಠ

- ಒಂದೇ ದಿನ 20% ಏರಿಕೆ

click me!