Vaccine Price ಕೋವಾಕ್ಸಿನ್, ಕೋವಿಶೀಲ್ಡ್ ಬೆಲೆ ಕಡಿತಕ್ಕೆ ಮುಂದಾದ ಕೇಂದ್ರ, ಕೇವಲ 275 ರೂಗೆ ಸಿಗಲಿದೆ ಕೋವಿಡ್ ಲಸಿಕೆ!

By Suvarna NewsFirst Published Jan 26, 2022, 8:52 PM IST
Highlights
  • ಕೊರೋನಾ ವಿರುದ್ದದ ಹೋರಾಟ ಮತ್ತಷ್ಟು ಚುರುಕುಗೊಳಿಸಿದ ಕೇಂದ್ರ
  • ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಕ್ರಮ, ಬೆಲೆ ಕಡಿತಕ್ಕೆ ನಿರ್ಧಾರ
  • ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ, ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಸಿಕೆ

ನವದೆಹಲಿ(ಜ.26): ಭಾರತದ ಕೊರೋನಾ ವೈರಸ್(Coronavirus) ವಿರುದ್ಧದ ಹೋರಾಟ ಇತರ ದೇಶಗಳಿಗೆ ಹೋಲಿಸಿದರೆ ಪ್ರಬಲ ಹಾಗೂ ಮುಂಚೂಣಿಯಲ್ಲಿದೆ. ಪ್ರಮುಖವಾಗಿ ಭಾರತ ಲಸಿಕೆ ನೀಡುವಿಕೆಯಲ್ಲಿ(Vaccine Drive) ಇತರ ಎಲ್ಲಾ ದೇಶಗಳಿಗಿಂತ ವೇಗವಾಗಿ ಹಾಗೂ ವ್ಯವಸ್ಥಿತವಾಗಿ ಸಾಧನೆ ಮಾಡುತ್ತಿದೆ. ಇದೀಗ ಇದೇ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರಿಸುಮಾರು 1,000 ರೂಪಾಯಿ ಬೆಲೆಯ ಕೋವಿಡ್ ಲಸಿಕೆ(Vaccine Price) ಕೇವಲ 275 ರೂಪಾಯಿಗೆ ಸಿಗಲಿದೆ.

ಭಾರತದಲ್ಲಿ ಕೋವಾಕ್ಸಿನ್(Covaxin) ಹಾಗೂ ಕೋವಿಶೀಲ್ಡ್ ಲಸಿಕೆ(Covishield) ನೀಡಲಾಗುತ್ತಿದೆ. ಈಗಾಗಲೇ ಶೇಕಡಾ 100 ರಷ್ಟು ಅರ್ಹರು ಮೊದಲ ಡೋಸ್(Dose) ಲಸಿಕೆ ಪಡೆದಿದ್ದಾರೆ. ಸರ್ಕಾರ ಎರಡೂ ಲಸಿಕೆಯನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಎರಡೂ ಡೋಸ್ ಲಸಿಕೆ ಉಚಿತವಾಗಿ(Free Vaccine) ಸಿಗಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗೆ ಈಗಾಗಲೇ ದರ ನಿಗದಿಪಡಿಸಿದೆ. ಇದೇ ಬೆಲೆಯನ್ನು ಇದೀಗ ಕಡಿತಗೊಳಿಸಲಾಗುತ್ತಿದೆ.

Covid Booster Dose India: ಕೇವಲ 8 ದಿನದಲ್ಲಿ 50 ಲಕ್ಷ ಜನರಿಗೆ 3ನೇ ಡೋಸ್‌

ಖಾಸಗಿ ಆಸ್ಪತ್ರೆಗಳಲ್ಲಿ(Private Hospital) ಕೋವಾಕ್ಸಿನ್ ಲಸಿಕೆ ಬೆಲೆ 1,200 ರೂಪಾಯಿ. ಇದರಲ್ಲಿ ಆಸ್ಪತ್ರೆ ಹಾಕುವ ಸರ್ವೀಸ್ ಚಾರ್ಜ್ ಕೂಡ ಸೇರಿದೆ. ಇನ್ನು ಕೋವಿಶೀಲ್ಡ್ ಲಸಿಕೆ ಬೆಲೆ 780 ರೂಪಾಯಿ. ಇದೀಗ ಈ ಬೆಲೆಯನ್ನು 275 ರೂಪಾಯಿಗೆ ಕಡಿತಗೊಳಿಸಲಾಗುತ್ತಿದೆ. ಇದರಲ್ಲಿ ಖಾಸಗಿ ಆಸ್ಪತ್ರೆ ಹಾಕುವ 150 ರೂಪಾಯಿ ಕೂಡ ಸೇರಿದೆ.

ಡ್ರಗ್ಸ್ ಕಂಟ್ರೋಲರ್ ಇಂಡಿಯಾ, ರಾಷ್ಟ್ರೀಯ ಫಾರ್ಮಾ ಬೆಲೆ ನಿಗದಿ ಕೇಂದ್ರ (NPPA) ಇದೀಗ ಈ ಬೆಲೆಯನ್ನು ಸರ್ಕಾರದ ಸೂಚನೆಯಂತೆ ಕಡಿತಗೊಳಿಸಲು ಮುಂದಾಗಿದೆ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಲು ಸರ್ಕಾರ ಮುಂದಾಗಿದೆ.  ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿರುವ ಲಸಿಕೆ ಬಾಕಿ ಇದೆ. ಹೀಗಾಗಿ ಸರ್ಕಾರ ಬೆಲೆ ಕಡಿತಗೊಳಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.

Covid-19 : ಕೇರಳದಲ್ಲಿ 55,475 ಕೇಸು: ಸಾರ್ವಕಾಲಿಕ ಗರಿಷ್ಠ

2021ರ ಜನವರಿ 16 ರಂದು ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ಆರಂಭಗೊಂಡಿದೆ. ಒಂದು ವರ್ಷದಲ್ಲಿ ಭಾರತ ಶೇಕಡಾ 100 ರಷ್ಟು ಮೊದಲ ಡೋಸ್ ನೀಡಿದೆ. ಮೊದಲ ಹಲವು ಹಂತಗಳಲ್ಲಿ ಲಸಿಕಾ ಅಭಿಯಾನವನ್ನು ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಅಭಿಯಾನದ ವೇಗ ಹೆಚ್ಚಿಸಿದೆ.

ಕೊರೋನಾ ಫ್ರಂಟ್‌ಲೈನ್ ವಾರಿಯರ್ಸ್, ಕೊರೋನಾ ವಾರಿಯರ್ಸ್, 60 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಮಸ್ಯೆ ಎದುರಿಸುತ್ತಿರುವರಿಗೆ ಹೀಗೆ ಹಂತ ಹಂತವಾಗಿ ಕೊವಿಡ್ ಲಸಿಕೆ ವಿಸ್ತರಣೆಯಾಗುತ್ತಾ ಕೊನೆಗೆೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಾಯಿತು. ಇದಾದ ಬಳಿಕ 15 ರಿಂದ 18 ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದೆ. 

ಇತರ ದೇಶಗಳಿಗೆ ಹೋಲಿಸಿದರೆ ಭಾರತ ಅತ್ಯಂತ ವೇಗವಾಗಿ ಲಸಿಕೆ ನೀಡುತ್ತಿದೆ. ಇದೇ ಕಾರಣದಿಂದ ದೇಶದಲ್ಲಿ ಸದ್ಯ ಎದ್ದಿರುವ 3ನೇ ಕೊರೋನಾ ಅಲೆ ಹೆಚ್ಚು ಪರಿಣಾಮ ಬೀರಿಲ್ಲ. ಕೊರೋನಾ ಹರಡುವಿಕೆ ಹೆಚ್ಚಾಗಿದ್ದರೂ, ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಇಷ್ಟೇ ಅಲ್ಲ ಗುಣಮುಖರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಒಮಿಕ್ರಾನ್ ಪ್ರಕರಣ ಕೂಡ ವರದಿಯಾಗುತ್ತಿದೆ. ಆದರೆ ಈ ಹಿಂದಿನ ಕೊರೋನಾ ಅಲೆಗೆ ಹೋಲಿಸಿದರೆ ಪರಿಣಾಮ ಗಂಭೀರವಾಗಿಲ್ಲ. ಫೆಬ್ರವರಿ 2ನೇ ವಾರದಲ್ಲಿ ಭಾರತದಲ್ಲಿ 3ನೇ ಕೊರೋನಾ ಅಲೆ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಜಾಗ್ರತೆ ಅಗತ್ಯ ಎಂದು ತಜ್ಞರು ಹೇಳಿದ್ದಾರೆ.

click me!