Padma Awards : ಪ್ರಶಸ್ತಿ ಧಿಕ್ಕರಿಸಿದ ಮೂವರು ಬಂಗಾಳಿಗರು, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

By Suvarna NewsFirst Published Jan 26, 2022, 8:18 PM IST
Highlights

ಪದ್ಮ ಪ್ರಶಸ್ತಿ ನಿರಾಕರಿಸಿದ ಮೂವರು ಬಂಗಾಳಿಯರು
ಬುದ್ಧದೇವ್ ಭಟ್ಟಾಚಾರ್ಯ, ಸಂಧ್ಯಾ ಮುಖರ್ಜಿ ಹಾಗೂ ಪಂಡಿತ್ ಆನಿದ್ಯ ಚಟರ್ಜಿಯಿಂದ ಪ್ರಶಸ್ತಿ ತಿರಸ್ಕಾರ
ಪದ್ಮ ಪ್ರಶಸ್ತಿಗೆ ಧಿಕ್ಕಾರ ಹೇಳಿದ್ದು ಇದೇ ಮೊದಲಲ್ಲ ಹಿಂದೆಯೂ ಆಗಿತ್ತು ಇಂಥ ಘಟನೆಗಳು

ನವದೆಹಲಿ (ಜ. 26): "ನನ್ನ ಸಮಕಾಲೀನರು ಹಾಗೂ ಕಿರಿಯ ಆರ್ಟಿಸ್ಟ್ ಗಳಿಗೆ ಕೆಲ ವರ್ಷಗಳ ಹಿಂದೆಯೇ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇದೇ ಪ್ರಶಸ್ತಿ 10 ವರ್ಷಗಳ ಹಿಂದೆ ಬಂದಿದ್ದರೆ ಸ್ವೀಕಾರ ಮಾಡುತ್ತಿದ್ದೆ. ನನ್ನ ಕಲಾ ಜೀವನದ ಈ ಹಂತದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಮನಸ್ಸು ಬರುತ್ತಿಲ್ಲ" ಎಂದು ಹೇಳುವ ಮೂಲಕ ಪ್ರಸಿದ್ಧ ತಬಲಾ ವಾದಕ ಪಂಡಿತ್ ಆನಿದ್ಯ ಚಟರ್ಜಿ (tabla player Pandit Anindya Chatterjee) ತಮಗೆ ಘೋಷಣೆಯಾಗಿರುವ ಪದ್ಮಶ್ರೀ (Padma Shri)ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಆ ಮೂಲಕ ಪಶ್ಚಿಮ ಬಂಗಾಳದ (West Bengal) ಮೂವರು ವ್ಯಕ್ತಿಗಳು ಈ ಬಾರಿಯ ಪದ್ಮಪ್ರಶಸ್ತಿಯನ್ನು ನಿರಾಕರಿಸಿದಂತಾಗಿದೆ. ಇದಕ್ಕೂ ಮುನ್ನ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (ಪದ್ಮವಿಭೂಷಣ) ಹಾಗೂ ಗಾಯಕಿ ಸಂಧ್ಯಾ ಮುಖರ್ಜಿ (ಪದ್ಮಶ್ರಿ) ತಮಗೆ ಘೋಷಣೆಯಾಗಿದ್ದ ಪದ್ಮ ಪ್ರಶಸ್ತಿಗಳನ್ನು ಸ್ವೀಕರಿಸಲು ಭಿನ್ನ ಕಾರಣಗಳಿಗಾಗಿ ನಿರಾಕರಿಸಿದ್ದರು.

ಪಂಡಿತ್ ರವಿಶಂಕರ್, ಉಸ್ತಾದ್ ಅಮ್ಜದ್ ಅಲಿ ಖಾನ್ ಮತ್ತು ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಂತಹ ಶಾಸ್ತ್ರೀಯ ಮಾಂತ್ರಿಕರೊಂದಿಗೆ `ಜುಗಲ್ ಬಂದಿ' (ಯುಗಳ) ಮಾಡಿದ ಖ್ಯಾತ ತಬಲಾ ವಾದಕ ಪಂಡಿತ್ ಆನಿದ್ಯ ಚಟರ್ಜಿ, ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಗೌರವವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಮಂಗಳವಾರ ದೆಹಲಿಯಿಂದ ನನಗೆ ಕರೆ ಬಂದಿತ್ತು. ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ಕೋರಿ ಕರೆ ಮಾಡಲಾಗಿತ್ತು ಈ ವೇಳೆ ನಾನು ವಿನಯವಾಗಿಯೇ ಅದನ್ನು ತಿರಸ್ಕಾರ ಮಾಡಿದೆ ಎಂದಿದ್ದಾರೆ. ನನ್ನ ವೃತ್ತಿಜೀವನದ ಈ ಹಂತದಲ್ಲಿ ಪದ್ಮಶ್ರೀ ಸ್ವೀಕರಿಸಲು ನಾನು ಸಿದ್ಧನಿಲ್ಲ. ನಾನು ಆ ಹಂತವನ್ನು ದಾಟಿದ್ದೇನೆ" ಎಂದು 2002 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು (Sangeet Natak Akademi award ) ಪಡೆದ ಚಟರ್ಜಿ ಹೇಳಿದರು.

ಇದಕ್ಕೂ ಮುನ್ನ 90 ವರ್ಷದ ಗಾಯಕಿ ಸಂಧ್ಯಾ ಮುಖರ್ಜಿ (Sandhya Mukherjee) ಕೂಡ ಇಂಥದ್ದೇ ಕಾರಣಗಳಿಗಾಗಿ ಪ್ರಶಸ್ತಿ ತಿರಸ್ಕರಿಸಿದ್ದರು. "90ನೇ ವರ್ಷದಲ್ಲಿ ಪದ್ಮಶ್ರಿ ಪ್ರಶಸ್ತಿ ಸ್ವೀಕಾರ ಮಾಡುವುದೆಂದರೆ ನಿಜಕ್ಕೂ ಅದು ಅವಮಾನದ ರೀತಿ' ಎಂದು ಖ್ಯಾತ ಗಾಯಕಿಯ ಪುತ್ರಿ ಸೌಮಿ ಸೆನ್ ಗುಪ್ತಾ (Soumi Sengupta) ಹೇಳಿದ್ದಾರೆ. ಆದರೆ, ತಮ್ಮ ನಿರ್ಧಾರ ಯಾವುದೇ ರಾಜಕೀಯ ಪ್ರೇರಿತ ಕಾರಣವಲ್ಲ ಎಂದು ಹೇಳಿದ್ದಾರೆ. ''ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರು ಯಾವುದೇ ರಾಜಕೀಯವನ್ನು ಮೀರಿದವರು. ದಯವಿಟ್ಟು ಅದರಲ್ಲಿ ಯಾವುದೇ ರಾಜಕೀಯ ಕಾರಣಗಳನ್ನು ಹುಡುಕಲು ಪ್ರಯತ್ನಿಸಬೇಡಿ. ಆಕೆ ಇದರಿಂದ ಅವಮಾನಿತಳಾಗಿದ್ದಾಳೆ, ಅಷ್ಟೇ” ಎಂದು ಸೌಮಿ ಸೆನ್ ಗುಪ್ತಾ ಹೇಳಿದರು.

ಆದರೆ, ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ನಾಗರೀಕ ಪುರಸ್ಕಾರವನ್ನು ತಿರಸ್ಕಾರ ಮಾಡಿದ್ದು ಇದೇ ಮೊದಲಲ್ಲ. ಹಿಂದೆಯೂ ಇಂಥ ಪ್ರಕರಣಗಳು ಆಗಿದ್ದವು.

- ಲೇಖಕಿ ಗೀತಾ ಮೆಹ್ತಾ (Gita Mehta) ಅವರು ಸಾಹಿತ್ಯ ಮತ್ತು ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ 2019 ರಲ್ಲಿ ಅವರಿಗೆ ನೀಡಲಾದ ಪದ್ಮಶ್ರೀಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅದೇ ವರ್ಷ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದರಂದ ಜನ ಇದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿಯಾಗಿರುವ ಮೇಹಾ, ಈ ಪ್ರಶಸ್ತಿಯು "ಬಿಜು ಜನತಾ ದಳದ ಭಾರತೀಯ ಜನತಾ ಪಕ್ಷದ ಬೆಂಬಲವನ್ನು ಸೆಳೆಯುವ ಒಂದು ಮಾರ್ಗವಾಗಿದೆ" ಎಂದು ನಂಬಿದ್ದರು.

Padma Awards: ಪದ್ಮ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ!
- 1970ರ ದಶಕದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಸೇರಿದ್ದ ಪತ್ರಕರ್ತ ವೀರೇಂದ್ರ ಕಪೂರ್ (Virendra Kapoor) ಅವರು 2016ರಲ್ಲಿ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು, ತಾನು ಯಾವುದೇ ಸರ್ಕಾರದಿಂದ ಏನನ್ನೂ ಸ್ವೀಕರಿಸಿಲ್ಲ ಮತ್ತು ಸರ್ಕಾರದಿಂದ ಏನನ್ನೂ ತೆಗೆದುಕೊಳ್ಳುವುದರಲ್ಲಿ ತಮಗೆ ನಂಬಿಕೆ ಇಲ್ಲ ಎಂದಿದ್ದರು.

- ತಮಿಳು ಬರಹಗಾರ ಮತ್ತು ನಿರ್ದೇಶಕ ಬಾಹುಲೇಯನ್ ಜಯಮೋಹನ್ (Bahuleyan Jeyamohan)ಅವರು 2016 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದರು. ಏಕೆಂದರೆ ತಾನು "ಹಿಂದುತ್ವದ ಸಹಾನುಭೂತಿ" ಎಂದು ಲೇಬಲ್ ಅಡಿಯಲ್ಲಿ ಇರಲು ಬಯಸುವುದಿಲ್ಲ ಎಂದಿದ್ದರು.

Padma Awards 2022: ದೇವೇಂದ್ರಗೆ ಪದ್ಮಭೂಷಣ, ನೀರಜ್, ಅವನಿಗೆ ಒಲಿದ ಪದ್ಮಶ್ರೀ
- 2013ರಲ್ಲಿ ಹಿನ್ನಲೆ ಗಾಯಕಿ ಎಸ್. ಜಾನಕಿ ( Sistla Janaki)ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದರು. ಈ ಪ್ರಶಸ್ತಿಯು ಬಹಳ ತಡವಾಗಿ ಬಂದಿದೆ. ಎಸ್. ಜಾನಕಿ ಅವರ ಸಾಧನೆಗೆ ಈಗ ಭಾರತ ರತ್ನವೇ ಪ್ರಶಸ್ತಿಯೇ ನ್ಯಾಯ ನೀಡುತ್ತದೆ ಎಂದು ಅವರ ಕುಟುಂಬದವರು ನಂಬಿದ್ದರು.

click me!