ದಿಂಡಿಗಲ್ (ತಮಿಳುನಾಡು): ಇಲ್ಲಿನ ಪಂಚಂಪಟ್ಟಿ ಗ್ರಾಮದ ಗುಡಿಯೊಂದು ಭಕ್ತರಿಗೆ ಸರ್ಕಾರಿ ಜಾಗದಲ್ಲಿ ಅನ್ನಸಂತರ್ಪಣೆ ಏರ್ಪಡಿಸಿದ್ದಕ್ಕೆ ಕ್ರೈಸ್ತರು ವಿರೋಧ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟಿಸಿದ ಘಟನೆ ನಡೆದಿದೆ. ಕುಂಭಾಭಿಷೇಕದ ನಿಮಿತ್ತ, ಖಾಲಿಯಿದ್ದ ಮೈದಾನದಲ್ಲಿ ಭಕ್ತರಿಗಾಗಿ ಅನ್ನದಾನ ಏರ್ಪಡಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳ ಒಪ್ಪಿಗೆ ಸಿಗದಕ್ಕೆ ಮದ್ರಾಸ್ ಹೈಕೋರ್ಟ್ ಅವಕಾಶ ನೀಡಿತ್ತು. ಆ ಪ್ರದೇಶದಲ್ಲಿ ಬಹುಸಂಖ್ಯಾತರಾಗಿರುವ ಕ್ರೈಸ್ತರನ್ನು ಕೆರಳಿಸಿದೆ. 'ಸಾರ್ವಜನಿಕರ ಸ್ಥಳದಲ್ಲಿ ಒಂದು ಸಮುದಾಯದವರನ್ನು ಹೊರಗಿಡಲಾಗದು' ಎಂಬ ಹೈಕೋರ್ಟ್ ಆದೇಶದ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿ ಭಾನುವಾರ ರಾತ್ರಿ ಅನ್ನದಾನ ನಡೆಯಲಿದ್ದಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದರು. ಸೋಮವಾರವೂ ಇದು ಮುಂದುವರೆದಿದ್ದು, ಸ್ತ್ರೀಯರು, ಮಕ್ಕಳು ಸೇರಿ 500 ಕ್ರೈಸ್ತರು ಜಿಲ್ಲಾಧಿಕಾರಿ ಕಚೇರಿಯ ರಸ್ತೆ ತಡೆದು ಪ್ರತಿಭಟಿಸಿದರು. ಇವರ ವಿರುದ್ಧ 100ಕ್ಕೂ ಹೆಚ್ಚು ಕೇಸಾಗಿವೆ.

12:15 AM (IST) Nov 08
College student dies in accident: ಪುಂಡರ ಗ್ರೂಪ್ ಬೈಕ್ ರೇಸ್‌ಗೆ 23ರ ಹರೆಯದ ಕಾಲೇಜು ಯುವತಿಯೊಬ್ಬಳು ಬಲಿಯಾಗಿದ್ದಾಳೆ. ರಸ್ತೆಯಲ್ಲಿ ಯುವಕರು ಗುಂಪಾಗಿ ಬೈಕ್ ರೇಸ್ ಮಾಡಿ ಯುವತಿ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದಿದ್ದಾನೆ. ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ.
10:43 PM (IST) Nov 07
ಇಲ್ಲೊಂದು ಕಡೆ 68 ವರ್ಷದ ಚಾರ್ಟೆಟ್ ಅಕೌಂಟೆಂಟ್ ಒಬ್ಬರು ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಿದ್ದು, ಬರೋಬ್ಬರು 1.5 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.
09:20 PM (IST) Nov 07
ಹಾಲಿವುಡ್ ಖ್ಯಾತ ನಟಿ, ಗಾಯಕಿ ಸೆಲೆನಾ ಗೋಮೇಜ್‌ನ್ನು ಹೋಲುವ ಈ ಬಾಲೆಯ ಫೋಟೋಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಆದರೆ ಆಕೆ ಸೆಲೆನಾ ಗೋಮೇಜ್ ಅಲ್ಲದೇ ಹೋದರೂ ಆಕೆ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಖ್ಯಾತ ನಟಿಯಾಗಿದ್ದ ಒಬ್ಬರ ಪುತ್ರಿ. ಆಕೆಯ ಬಗ್ಗೆ ಇಲ್ಲಿದೆ ಡಿಟೇಲ್
07:57 PM (IST) Nov 07
German nurse kills patients: ರಾತ್ರಿ ಪಾಳಿಯಲ್ಲಿ ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು, ಜರ್ಮನಿಯ ಪುರುಷ ನರ್ಸ್ ಓರ್ವ 10 ರೋಗಿಗಳನ್ನು ಸಾಯಿಸಿದಂತಹ ಆಘಾತಕಾರಿ ಘಟನೆ ನಡೆದಿದೆ. ಸ್ಥಳೀಯ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
05:57 PM (IST) Nov 07
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆಯ ವೀಡಿಯೋ ವೈರಲ್ ಆದ ಬಳಿಕ ಯುವಕನೋರ್ವ ಸಾವಿಗೆ ಶರಣಾದಂತಹ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮತ್ತೊಂದೆಡೆ ದೆಹಲಿಯಲ್ಲಿ ಮೆಟ್ರೋ ನಿಲ್ದಾಣ ಸಮೀಪ ಮೂತ್ರ ಮಾಡ್ತಿದ್ದ ವ್ಯಕ್ತಿಯನ್ನು ಜನ ಕೂಗಿ ಕರೆದು ಎಚ್ಚರಿಸಿದ ಘಟನೆ ನಡೆದಿದೆ.
04:56 PM (IST) Nov 07
Jakarta Blast: ಶುಕ್ರವಾರದ ಪ್ರಾರ್ಥನೆ ವೇಳೆ ಉತ್ತರ ಜಕಾರ್ತಾದ ಮಸೀದಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 54ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ 'ನರಕಕ್ಕೆ ಸ್ವಾಗತ' ಎಂದು ಬರೆದ ಬಂದೂಕು ಸೇರಿದಂತೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ.
03:12 PM (IST) Nov 07
Ahmedabad air India crash: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಪೈಲಟ್ ಸುಮಿತ್ ಸಭರ್‌ವಾಲ್ ಅವರ 91 ವರ್ಷದ ತಂದೆಗೆ ಸುಪ್ರೀಂಕೋರ್ಟ್ ಸಾಂತ್ವಾನ ಹೇಳಿದೆ. ಈ ದುರಂತಕ್ಕೆ ನಿಮ್ಮ ಮಗನನ್ನು ದೂಷಿಸಲಾಗುವುದಿಲ್ಲ, ಅದೊಂದು ಅಪಘಾತ ಎಂದು ನ್ಯಾಯಾಲಯ ಭರವಸೆ ನೀಡಿದೆ.
01:54 PM (IST) Nov 07
Murder in Moving Train :ಚಲಿಸುತ್ತಿದ್ದ ರೈಲಿನಲ್ಲಿ ಯೋಧ ಜಿಗರ್ ಚೌಧರಿ ಅವರನ್ನು ಕೋಚ್ ಅಟೆಂಡೆಂಟ್ ಜಬೈರ್ ಮೆಮನ್ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ.
10:50 AM (IST) Nov 07
ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್, ಭಾರತೀಯ ಮೂಲದ Zohran Mamdani ವಿರುದ್ಧ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಮ್ದಾನಿ ಅವರನ್ನು ಕಮ್ಯುನಿಸ್ಟ್ ಎಂದು ಕರೆದಿರುವ ಟ್ರಂಪ್, ಅವರ ಆಯ್ಕೆಯಿಂದ ನ್ಯೂಯಾರ್ಕ್‌ನ ಸ್ಥಿತಿ ಭಯಾನಕವಾಗಲಿದೆ ಎಂದು ಎಚ್ಚರಿಸಿದ್ದಾರೆ.