LIVE NOW
Published : Oct 03, 2026, 07:10 AM ISTUpdated : Oct 03, 2026, 08:35 AM IST

India Latest News Live: Asian Games 2026 - 2 ಫೈನಲ್‌, 2 ಚಿನ್ನದ ಮೇಲೆ ಭಾರತದ ಕಣ್ಣು; ಹಾಕಿಯಲ್ಲಿ ಮಲೇಷ್ಯಾ, ಕ್ರಿಕೆಟ್‌ನಲ್ಲಿ ಪಾಕ್‌ ಎದುರಾಳಿ!

ಸಾರಾಂಶ

ಮುಂಬೈ: ಕನ್ನಡದ ‘ಜೂಲಿ’ ಅಲ್ಲದೆ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಪ್ರಸಿದ್ಧ ನಟ ಡಿನೋ ಮೊರೆಯಾ ಅವರನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗ ಶುಕ್ರವಾರ 6 ತಾಸು ವಿಚಾರಣೆ ನಡೆಸಿದೆ.

ಮುಂಬೈನ ಮಿಥಿ ನದಿ ಹೂಳೆತ್ತುವಿಕೆ ಮತ್ತು ಶುದ್ಧೀಕರಣದ ₹65.54 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಅವರನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಮತ್ತೆ ಅಗತ್ಯ ಬಿದ್ದರೆ ವಿಚಾರಣೆಗೆ ಕರೆಯಯವಯದಾಗಿ ಹೇಳಿದ್ದಾರೆ.

ಆರೋಪ ಏನು?:

ಬೃಹನ್ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಮಿಥಿ ನದಿ ಶುದ್ಧೀಕರಣದಲ್ಲಿ ಅಕ್ರಮ ಎಸಗಿದ್ದರು. ಈ ಆರೋಪಿಗಳೊಂದಿಗೆ ಡಿನೋ ಮೊರೆಯಾ ಅವರು ಫೋನ್ ಸಂಪರ್ಕ ಮತ್ತು ಆರ್ಥಿಕ ವಹಿವಾಟು ಹೊಂದಿದ್ದರು ಆರೋಪವಿದೆ. ಈ ಪ್ರಕರಣದಲ್ಲಿ 2025ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಡಿನೋ ಮೊರೆಯಾ ಅವರ ಮನೆ ಮೇಲೆ ದಾಳಿ ನಡೆಸಿ ವಿಚಾರಣೆಗೆ ಒಳಪಡಿಸಿತ್ತು.

08:35 AM (IST) Oct 03

Asian Games 2026 - 2 ಫೈನಲ್‌, 2 ಚಿನ್ನದ ಮೇಲೆ ಭಾರತದ ಕಣ್ಣು; ಹಾಕಿಯಲ್ಲಿ ಮಲೇಷ್ಯಾ, ಕ್ರಿಕೆಟ್‌ನಲ್ಲಿ ಪಾಕ್‌ ಎದುರಾಳಿ!

ಏಷ್ಯನ್ ಗೇಮ್ಸ್‌ನಲ್ಲಿ ಶನಿವಾರ ಭಾರತ ಪುರುಷರ ಹಾಕಿ ಮತ್ತು ಕ್ರಿಕೆಟ್ ತಂಡಗಳು ಫೈನಲ್ ಪಂದ್ಯಗಳನ್ನು ಆಡಲಿವೆ. ಹಾಕಿಯಲ್ಲಿ ಮಲೇಷ್ಯಾ ವಿರುದ್ಧ ಹಾಗೂ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಸೆಣಸಾಡಲಿದ್ದು, ಎರಡರಲ್ಲೂ ಚಿನ್ನದ ಪದಕ ಗೆಲ್ಲುವ ಗುರಿ ಹೊಂದಲಾಗಿದೆ.
Read Full Story

08:24 AM (IST) Oct 03

ಏಷ್ಯನ್ ಗೇಮ್ಸ್ 2026 - ಒಂದೇ ದಿನ ಆರು ಚಿನ್ನಕ್ಕೆ ಭಾರತ ‘ಪಂಚ್‌’; ಪದಕ ಪಟ್ಟಿಯಲ್ಲೀಗ ಭಾರತಕ್ಕೆ ಎಷ್ಟನೇ ಸ್ಥಾನ?

ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಒಂದೇ ದಿನ 6 ಚಿನ್ನ ಸೇರಿ 10 ಪದಕಗಳನ್ನು ಗೆದ್ದುಕೊಂಡಿದೆ. ಮಹಿಳಾ ಹಾಕಿ ತಂಡವು ಚೀನಾ ವಿರುದ್ಧ ಜಯ ಸಾಧಿಸಿ 44 ವರ್ಷಗಳ ಬಳಿಕ ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ 2028ರ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ.
Read Full Story

08:22 AM (IST) Oct 03

ಪ್ರತಿದಿನ 2 ಲಕ್ಷಕ್ಕೂ ಹೆಚ್ಚು ಬೈಕ್‌ಗಳು ಮಾರಾಟ, ಜನ ಹುಚ್ಚರಂತೆ ಈ ಕಂಪನಿ ಹಿಂದೆ ಬಿದ್ದಿದ್ದೇಕೆ?

ಹೊಸ ಬೈಕ್‌ ಖರೀದಿ ಮಾಡಬೇಕು ಅಂದುಕೊಂಡಿದ್ರೆ ಅಥವಾ ನಿಮ್ಮ ಸ್ನೇಹಿತರು ಆ ಪ್ಲಾನ್‌ನಲ್ಲಿದ್ದರೆ.. ಯಾವ ಬೈಕ್‌ ಖರೀದಿ ಮಾಡಬೇಕು? ಯಾವ ಕಂಪನಿಯ ಬೈಕ್‌ಗಳು ಮಾರ್ಕೆಂಟಿಗ್‌ನಲ್ಲಿವೆ ಎಂಬ ಗೊಂದಲ ನಿಮ್ಮನ್ನ ಕಾಡ್ತಿರಬಹುದು. ಪ್ರತಿಷ್ಠಿತ ಕಂಪನಿಯೊಂದು ತನ್ನ ಬೈಕ್‌ ಮಾರಾಟಗಳ ಅಂಕಿ-ಸಂಖ್ಯೆ ಬಿಡುಗಡೆ ಮಾಡಿದೆ.

Read Full Story

More Trending News