LIVE NOW
Published : Apr 28, 2026, 06:52 AM ISTUpdated : Apr 28, 2026, 11:54 AM IST

India Latest News Live: ಕಲ್ಮಾ ಪಠಿಸಲು ಹೇಳಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿದ ಝುಬೇರ್, ಪೆಹಲ್ಗಾಂ ನೆನಪಿಸಿದ ದಾಳಿ

ಸಾರಾಂಶ

ನವದೆಹಲಿ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದಂತೆಯೇ ದೇಶದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಸೋಮವಾರ ಉತ್ತರಪ್ರದೇಶದ ಬಾಂದಾದಲ್ಲಿ ಉಷ್ಣಾಂಶವು ಗರಿಷ್ಠ 47.6 ಡಿ.ಸೆ. ತಲುಪಿದ್ದು, ಇದು ದೇಶದಲ್ಲಿ ದಾಖಲಾದ ಅತಿಹೆಚ್ಚು ತಾಪಮಾನವಾಗಿದೆ. ಇದು ಸಾಮಾನ್ಯಕ್ಕಿಂತ 5.4 ಡಿ.ಸೆ.ನಷ್ಟು ಹೆಚ್ಚು. ಇಲ್ಲಿ 2022ರ ಏಪ್ರಿಲ್‌ನಲ್ಲಿ 47.4 ಡಿ.ಸೆ. ತಾಪಮಾನ ದಾಖಲಾಗಿತ್ತು.ಅತ್ತ ಮಹಾರಾಷ್ಟ್ರದ ಅಕೋಲಾದಲ್ಲಿ 46.9 ಡಿ.ಸೆ. ದಾಖಲಾಗಿದೆ. 46.8 ಡಿ.ಸಿ. ಉಷ್ಣಾಂಶದಲ್ಲಿ ಬೆಂದ ಅಮರಾವತಿಯೂ ಅದರ ಬೆನ್ನಿಗೇ ಇದೆ.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 46.7 ಡಿಗ್ರಿ, ಬರ್ಮೆರ್‌ನಲ್ಲಿ 46 ಡಿಗ್ರಿ, ಕೋಟಾ ಮತ್ತು ವನಸ್ಥಲಿಯಲ್ಲಿ 45.7 ಡಿಗ್ರಿ ದಾಖಲಾಗಿದೆ. ಅತ್ತ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಉಷ್ಣಾಂಶವು 44 ಡಿಗ್ರಿ ಆಗಿದೆ. ಉತ್ತರ ಮತ್ತು ಮಧ್ಯ ಭಾರತದಿಂದ ಬೀಸುತ್ತಿರುವ ಬಿಸಿ ಗಾಳಿ, ಸೂರ್ಯನ ತಾಪ ತಗ್ಗಿಸಲು ಮೋಡವೇ ಇಲ್ಲದಿರುವುದು, ಮುಂಗಾರು ವಿಳಂಬಗಳು ಇದಕ್ಕೆ ಕಾರಣ ಎನ್ನಲಾಗಿದೆ.

11:54 AM (IST) Apr 28

ಕಲ್ಮಾ ಪಠಿಸಲು ಹೇಳಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿದ ಝುಬೇರ್, ಪೆಹಲ್ಗಾಂ ನೆನಪಿಸಿದ ದಾಳಿ

ಕಲ್ಮಾ ಪಠಿಸಲು ಹೇಳಿ ಸೆಕ್ಯೂರಿಟಿ ಗಾರ್ಡ್‌ಗೆ ಚಾಕು ಇರಿದ ಝುಬೇರ್, ಪೆಹಲ್ಗಾಂ ನೆನಪಿಸಿದ ದಾಳಿ, ಅಮೆರಿಕದಿಂದ ಭಾರತಕ್ಕೆ ಮರಳಿದ 31ರ ಹರೆಯದ ಝೈಬ್ ಝುಬೇರ್ ಅನ್ಸಾರಿ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ.

 

Read Full Story

11:12 AM (IST) Apr 28

ವಿದೇಶಿ ಮದ್ಯ ಎಷ್ಟು ತರಬೇಕು? ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದ ಏರ್ಪೋರ್ಟ್ ಸುತ್ತೋಲೆ

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಮದ್ಯ ಸಾಗಣೆಗೆ ಸಂಬಂಧಿಸಿದಂತೆ ಹೊಸ ಕಸ್ಟಮ್ಸ್ ಸುತ್ತೋಲೆ ಗೊಂದಲ ಸೃಷ್ಟಿಸಿದೆ. ಈ ನಿಯಮದ ಪ್ರಕಾರ, 2 ಲೀಟರ್‌ಗಿಂತ ಹೆಚ್ಚು ಮದ್ಯವನ್ನು ದಂಡ ಪಾವತಿಸಿ ಕೊಂಡೊಯ್ಯುವ ಅವಕಾಶವನ್ನು ರದ್ದುಪಡಿಸಲಾಗಿದ್ದು, ಹೆಚ್ಚುವರಿ ಮದ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Read Full Story

10:33 AM (IST) Apr 28

ಮಂಗ ಹಿಡಿಯಿರಿ ₹600 ಸಂಪಾದಿಸಿ, ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಮಹಾರಾಷ್ಟ್ರ ಸರ್ಕಾರ ಹೊಸ ಪ್ಲಾನ್!

ಮಹಾರಾಷ್ಟ್ರದಲ್ಲಿ ಮಂಗಗಳ ಉಪಟಳ ತಡೆಯಲು, ಅವುಗಳನ್ನು ಸುರಕ್ಷಿತವಾಗಿ ಹಿಡಿದುಕೊಡುವವರಿಗೆ ಸರ್ಕಾರ 600 ರೂ. ಬಹುಮಾನ ಘೋಷಿಸಿದೆ. ಅಲ್ಲದೆ, ಮಂಗಗಳು ಎದುರಾದಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

10:28 AM (IST) Apr 28

ಗ್ಯಾಂಗ್ಟಾಕ್‌ ಮೈದಾನದಲ್ಲಿ ಯುವ ಆಟಗಾರರೊಂದಿಗೆ ಫುಟ್ಬಾಲ್ ಆಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಸಿಕ್ಕಿಂ ಪ್ರವಾಸದ ವೇಳೆ ಗ್ಯಾಂಗ್ಟಾಕ್‌ನಲ್ಲಿ ಯುವ ಆಟಗಾರರೊಂದಿಗೆ ಫುಟ್ಬಾಲ್ ಆಡಿದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅವರು, ಸಿಕ್ಕಿಂನ 50ನೇ ರಾಜ್ಯೋತ್ಸವ ದಿನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
Read Full Story

10:04 AM (IST) Apr 28

ವೈಟ್‌ಹೌಸ್ ಗುಂಡಿನ ದಾಳಿಯ ನಡುವೆ ವೈನ್ ಬಾಟಲ್ ಎತ್ತಿದ ಮಹಿಳೆ - ವೀಡಿಯೋ ವೈರಲ್

ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದು ಆತಂಕ ಸೃಷ್ಟಿಯಾಗಿತ್ತು. ಈ ಗೊಂದಲದ ನಡುವೆಯೂ, ಓರ್ವ ಮಹಿಳೆ ಎರಡು ವೈನ್ ಬಾಟಲ್‌ಗಳನ್ನು ಎತ್ತಿಕೊಂಡು ಹೋಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.
Read Full Story

10:02 AM (IST) Apr 28

ನರಭಕ್ಷಕರಾದ್ರಾ ರಷ್ಯಾ ಸೈನಿಕರು? ಜತೆಗಾರನ ಕಾಲು ಕತ್ತರಿಸಿ ತಿನ್ನುತ್ತಿದ್ದ ಆಡಿಯೋ

ಉಕ್ರೇನ್ ಯುದ್ಧದ ನಡುವೆ ರಷ್ಯಾ ಸೈನಿಕರು ಆಹಾರದ ಕೊರತೆಯಿಂದ ನರಭಕ್ಷಕರಾಗುತ್ತಿದ್ದಾರೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಸಹ ಸೈನಿಕನ ಕಾಲು ತಿನ್ನಲು ಯತ್ನಿಸಿದ ಘಟನೆಯ ಆಡಿಯೋವೊಂದು ಲಭಿಸಿದ್ದು, ಇದು ಉಕ್ರೇನ್‌ ಗುಪ್ತಚರರ ಕುತಂತ್ರ ಎಂದು ರಷ್ಯಾ ಆರೋಪವನ್ನು ತಳ್ಳಿಹಾಕಿದೆ.
Read Full Story

09:40 AM (IST) Apr 28

ಮತ್ತೆ ಗಾಯಗೊಂಡ MS Dhoni, ಐಪಿಎಲ್‌ಗೆ ಗುಡ್ ಬೈ ಹೇಳ್ತಾರಾ? ಫ್ಲೆಮಿಂಗ್ ಹೇಳಿದ್ದೇನು?

ಸರಣಿ ಗಾಯಗಳಿಂದ ಬಳಲುತ್ತಿರುವ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ದೂರ ಉಳಿಯಲಿದ್ದಾರೆಯೇ? ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಏನು ಹೇಳಿದ್ದಾರೆ ಇಲ್ಲಿದೆ.

Read Full Story

08:59 AM (IST) Apr 28

ಮನು ಭಾಕರ್ ವರ್ಸಸ್ ವೈಭವ್ ಸೂರ್ಯವಂಶಿ - ಯುವ ಕ್ರಿಕೆಟರ್‌ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?

ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅನೇಕರು ಪ್ರಶ್ನೆ ಕೇಳಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Read Full Story

08:24 AM (IST) Apr 28

ಪವರ್ ಪಾಯಿಂಟ್ | ವಿದೇಶದಲ್ಲಿರುವ ಭಾರತೀಯರೇ ತಾಯ್ನಾಡು ಕಟ್ಟಲು ಬನ್ನಿ!

ಝೋಹೋ ಸಂಸ್ಥಾಪಕ ಶ್ರೀಧರ್‌ ವೆಂಬು ಅವರು ಅಮೆರಿಕದಲ್ಲಿ ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಭಾರತೀಯರ ಮೇಲಿನ ಮನೋಭಾವವನ್ನು ವಿವರಿಸುತ್ತಾರೆ. ಅಮೆರಿಕದಲ್ಲಿರುವ ಭಾರತೀಯ ಪ್ರತಿಭೆಗಳು ತಾಯ್ನಾಡಿಗೆ ಹಿಂತಿರುಗಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

Read Full Story

08:02 AM (IST) Apr 28

Sanjay Dutt KD movie controversy - ಜೋಗಿ ಪ್ರೇಮ್ ಸಿನಿಮಾದ ಗೀತೆಗೆ ಸಂಜಯ್ ದತ್ ಕ್ಷಮೆ

'ಕೆಡಿ' ಸಿನಿಮಾದ 'ಸರ್ಕೆ ಚುನಾರ್' ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ಲಿಖಿತ ಕ್ಷಮೆಯಾಚಿಸಿದ್ದಾರೆ. ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ ಅವರು, ಪ್ರಾಯಶ್ಚಿತ್ತವಾಗಿ 50 ಬುಡಕಟ್ಟು ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗುವ ಭರವಸೆ ನೀಡಿದ್ದಾರೆ.
Read Full Story

07:38 AM (IST) Apr 28

IPL 2026 - ನಿನ್ನೆ ನಡೆದ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಭುವನೇಶ್ವರ್‌ ಕುಮಾರ್‌ ಮತ್ತು ಜೋಶ್‌ ಹೇಜಲ್‌ವುಡ್‌ ಅವರ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಕೇವಲ 75 ರನ್‌ಗಳಿಗೆ ಕುಸಿಯಿತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಬ್ಯಾಟಿಂಗ್ ನೆರವಿನಿಂದ ಕೇವಲ 6.3 ಓವರ್‌ಗಳಲ್ಲಿ ಭರ್ಜರಿ ಜಯ ಸಾಧಿಸಿತು.
Read Full Story

More Trending News