LIVE NOW
Published : Mar 22, 2026, 07:13 AM ISTUpdated : Mar 22, 2026, 09:49 AM IST

India Latest News Live: Trudeau - ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ; ಕೆನಡಾ ಮಾಜಿ ಪ್ರಧಾನಿ ಟ್ರೂಡೋ ಆರೋಪ ಅವಿವೇಕತನದ್ದು ಎಂದ ಮಾಜಿ ರಾಯಭಾರಿ

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದಿಂದ ಭಾರತದಲ್ಲಿ ಗ್ಯಾಸ್ ಕೊರತೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದೀಗ ಭಾರತೀಯ ವಿಮಾನಯಾನ ಸಂಸ್ಥೆಗಳಿಗೂ ತಟ್ಟಿದೆ. ವಿಮಾನಗಳ ಇಂಧನ ಬಲೆ ಏರಿಕೆಯಾಗಿದೆ. ಏಷ್ಯಾ ಹಾಗೂ ಯೂರೋಪಿನ್ ದೇಶಗಳಿಗೆ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಕಾರಣ ವಿಮಾನ ಟಕೆಟ್ ದರಗಳು ಏರಿಕೆಯಾಗಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ಹೇಳಿದ್ದಾರೆ. ಯುದ್ಧದಿಂದ ಭಾರತದಲ್ಲಿ ಆಗುತ್ತಿರುವ ಪರಿಣಾಮ, ಭಾರತದ ರಾಜತಾಂತ್ರಿಕ ಮಾತುಕತೆ, ಪಂಚ ರಾಜ್ಯ ಚುನಾವಣೆ ಸೇರಿದಂತೆ ಇಂದಿನ ಕ್ಷಣ ಕ್ಷಣದ ಅಪ್‌ಡೇಟ್ ಇಲ್ಲಿದೆ.

Former Indian Envoy Slams Trudeau Over Ill Advised Nijjar Allegations

09:49 AM (IST) Mar 22

Trudeau - ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ; ಕೆನಡಾ ಮಾಜಿ ಪ್ರಧಾನಿ ಟ್ರೂಡೋ ಆರೋಪ ಅವಿವೇಕತನದ್ದು ಎಂದ ಮಾಜಿ ರಾಯಭಾರಿ

ಖಲಿಸ್ತಾನಿ ಪ್ರತ್ಯೇಕತಾವಾದಿ  ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಮಾಜಿ ಪ್ರಧಾನಿ ಜಸ್ಟಿನ್ ಟ್ರೂಡೋ ಮಾಡಿದ ಆರೋಪ 'ಅವಿವೇಕದ್ದು' ಎಂದು ಮಾಜಿ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ. ರಾಜಕೀಯ ದುರುದ್ದೇಶದಿಂದ ಈ ಆರೋಪ ಮಾಡಲಾಗಿದೆ. ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ.

Read Full Story

09:27 AM (IST) Mar 22

World Water Day - ವಿಶ್ವ ಜಲ ದಿನ - ಪ್ರತಿ ಹನಿ ನೀರು ಉಳಿಸಲು ಮೋದಿ ಕರೆ, ಜಲಶಕ್ತಿ ಸಚಿವಾಲಯದಿಂದ ಬೃಹತ್ ಸಮಾವೇಶ

ವಿಶ್ವ ಜಲ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಹನಿ ನೀರನ್ನು ಉಳಿಸಲು ಪ್ರತಿಜ್ಞೆ ಮಾಡುವಂತೆ ಕರೆ ನೀಡಿದ್ದಾರೆ. ಜಲಶಕ್ತಿ ಸಚಿವಾಲಯವು ಸುಸ್ಥಿರ ಜಲ ನಿರ್ವಹಣೆಯ ಅಗತ್ಯವನ್ನು ಒತ್ತಿಹೇಳಿದ್ದು, ಭಾರತದ ಜಲ ಭದ್ರತೆಯನ್ನು ಬಲಪಡಿಸಲು 'ಇಂಡಸ್ಟ್ರಿ ಫಾರ್ ವಾಟರ್' ಎಂಬ ಸಮಾವೇಶವನ್ನು ಘೋಷಿಸಿದೆ.
Read Full Story

08:19 AM (IST) Mar 22

ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ

ಆಸ್ಪತ್ರೆ ಎಕ್ಸ್‌ರೇ ಕೋಣೆಯಲ್ಲಿ ವಿವಸ್ತ್ರ ಮಹಿಳೆಯರ ವಿಡಿಯೋ ಸೆರೆ ಹಿಡಿಯುತ್ತಿದ್ದ ಚಾಲಕ, ಕೇಸ್ ಆಗಲೇ ಇಲ್ಲ, ಆಸ್ಪತ್ರೆ ಡೀನ್ ಕಚೇರಿಯ ಚಾಲಕ ರಹಸ್ಯವಾಗಿ ಮೊಬೈಲ್ ಮೂಲಕ ವಿವಸ್ತ್ರ ಮಹಿಳೆಯರ ವಿಡಿಯೋಗಳನ್ನು ಸೆರೆ ಹಿಡಿಯುತ್ತಿದ್ದ.

 

Read Full Story

07:13 AM (IST) Mar 22

ಎಪ್ರಿಲ್ 1 ರಿಂದ ವಿಮಾನ ಪ್ರಯಾಣ ದುಬಾರಿ

ಪ್ರತಿ ತಿಂಗಳ ಮೊದಲ ದಿನ ಎವಿಯೇಶನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ನಿರ್ಧಾರಗೊಳ್ಳುತ್ತದೆ. ಈಗಾಗಲೇ ಯುದ್ಧದ ಬಿಸಿ ತಟ್ಟಿರುವ ಕಾರಣ ಎಪ್ರಿಲ್ 1 ರಿಂದ ವಿಮಾನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಚಿವ ರಾಮ್‌ಮೋಹನ್ ನಾಯ್ಡು ಹೇಳಿದ್ದಾರೆ.


More Trending News