LIVE NOW
Published : Oct 13, 2026, 06:54 AM ISTUpdated : Oct 13, 2026, 09:21 AM IST

India Latest News Live: ರಣಜಿ ಟ್ರೋಫಿ - ಕರ್ನಾಟಕ ವಿರುದ್ಧ ಆಂಧ್ರಕ್ಕೆ 57 ರನ್‌ ಮುನ್ನಡೆ; 19ರ ಹರೆಯದ ರಾಹುಲ್‌ ಶತಕ

ಸಾರಾಂಶ

ಗುವಾಹಟಿ: ‘ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ಅವಧಿಯಲ್ಲಿ ಮತಚೋರಿ ನಡೆದು ಅದರ ಮೂಲಕವೇ ಕರ್ನಾಟಕ, ತೆಲಂಗಾಣ, ಕೇರಳದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಎಂದು ಊಹಿಸಿ ಆ ಸರ್ಕಾರಗಳು ರಾಜೀನಾಮೆ ನೀಡಿದರೆ, ನಾನು ಕೂಡಾ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸದಾಗಿ ಬ್ಯಾಲೆಟ್‌ ಪೇಪರ್‌ ಮೂಲಕ ಚುನಾವಣೆ ಎದುರಿಸಲು ಸಿದ್ಧ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಸವಾಲು ಹಾಕಿದ್ದಾರೆ.

ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಇವಿಎಂ ಮೂಲಕ ಚುನಾವಣೆ ಗೆದ್ದ ಅವರ ಆಡಳಿತ ಸರ್ಕಾರಗಳಿಗೆ ರಾಜೀನಾಮೆ ಕೊಡಿಸಲು ಸಿದ್ಧವಿದ್ದರೆ ನಾನು ಮತಪತ್ರದ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧವಿದ್ದೇನೆ. ಅವರು ಕೂಡ ಜ್ಞಾನೇಶ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ''ಮತ ಕಳ್ಳತನ''ದ ಮೂಲಕವೇ ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳು ರಚನೆಯಾಗಿದ್ದರಿಂದ, ಆ ಸರ್ಕಾರಗಳು ರಾಜೀನಾಮೆ ನೀಡಬೇಕು’ ಎನ್ನುವ ಮೂಲಕ ವಿಪಕ್ಷಗಳಿಗೆ ಟಾಂಗ್‌ ನೀಡಿದರು

 

09:21 AM (IST) Oct 13

ರಣಜಿ ಟ್ರೋಫಿ - ಕರ್ನಾಟಕ ವಿರುದ್ಧ ಆಂಧ್ರಕ್ಕೆ 57 ರನ್‌ ಮುನ್ನಡೆ; 19ರ ಹರೆಯದ ರಾಹುಲ್‌ ಶತಕ

ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಆಂಧ್ರ ತಂಡವು ಮುನ್ನಡೆ ಸಾಧಿಸಿದೆ. ಸೀರಾಂ ವೆಂಕಟ ರಾಹುಲ್ ಅವರ ಅಜೇಯ ಶತಕ ಮತ್ತು ರೇವಂತ್ ರೆಡ್ಡಿ ಅವರ ಅದ್ಭುತ ಆಟದಿಂದ ಆಂಧ್ರ ತಂಡವು ಎರಡನೇ ದಿನದಂತ್ಯಕ್ಕೆ 331 ರನ್ ಕಲೆಹಾಕಿದೆ. ಬೌಲಿಂಗ್ ವೈಫಲ್ಯದಿಂದಾಗಿ ಕರ್ನಾಟಕ ತಂಡವು ಹಿನ್ನಡೆ ಅನುಭವಿಸಿದೆ.
Read Full Story

09:00 AM (IST) Oct 13

Big Billion Days - ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್ - ಆರಂಭದಲ್ಲೇ ನಿಮಿಷಕ್ಕೆ 63 ಲಕ್ಷ ಗ್ರಾಹಕರ ಲಾಗಿನ್

ಫ್ಲಿಪ್‌ಕಾರ್ಟ್‌ನ 13ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಮೊದಲ ನಿಮಿಷದಲ್ಲೇ 63 ಲಕ್ಷ ಗ್ರಾಹಕರು ಭೇಟಿ ನೀಡಿ ದಾಖಲೆ ಬರೆದಿದ್ದಾರೆ. ಈ ಬಾರಿಯ ಮಾರಾಟದಲ್ಲಿ ಮೆಟ್ರೋ ನಗರಗಳಿಗಿಂತ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಭಾಗಗಳೇ ಮುಂಚೂಣಿಯಲ್ಲಿವೆ.

Read Full Story

09:00 AM (IST) Oct 13

Deepavali - ಪಟಾಕಿ ಸಿಡಿಸುವುದರಲ್ಲಿ ಧಾರ್ಮಿಕತೆ ಏನಿದೆ? ಸುಪ್ರೀಂ ಕೋರ್ಟ್ ಪ್ರಶ್ನೆ

ದೆಹಲಿ-ಎನ್‌ಸಿಆರ್‌ ವಲಯದಲ್ಲಿ ದೀಪಾವಳಿ ವೇಳೆ ಆಗುವ ವಾಯುಮಾಲಿನ್ಯದ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸುವುದಕ್ಕೂ ಧಾರ್ಮಿಕ ಆಚರಣೆಗೂ ಏನು ಸಂಬಂಧ ಎಂದು ಪ್ರಶ್ನಿಸಿದೆ. ಸಾರ್ವಜನಿಕರು ನ್ಯಾಯಾಂಗದ ಆದೇಶ ಕಾಯದೆ ಸ್ವಯಂಪ್ರೇರಿತರಾಗಿ ಪರಿಸರ ರಕ್ಷಿಸಬೇಕು ಎಂದು ಪೀಠ ಸಲಹೆ ನೀಡಿದೆ.
Read Full Story

08:50 AM (IST) Oct 13

ಕ್ಯಾನ್ಸರ್‌ ರೀತಿ ಇತರೆ ಔಷಧಗಳ ಮೇಲೆ ಶೇ. ಲಾಂಭಾಶ ಶೇ.30ಕ್ಕೆ ನಿಗದಿ ಏಕಿಲ್ಲ - ಸುಪ್ರೀಂ

ಕ್ಯಾನ್ಸರ್ ಔಷಧಿಗಳ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸಿರುವ ಕೇಂದ್ರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ತಯಾರಿಕಾ ವೆಚ್ಚಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಕ್ಕೆ ಔಷಧಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಇತರ ಎಲ್ಲಾ ಅಗತ್ಯ ಔಷಧಿಗಳ ದರಕ್ಕೂ ಏಕೆ ಮಿತಿ ಹೇರಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದೆ.
Read Full Story

08:40 AM (IST) Oct 13

ಮದ್ಯ ಹಗರಣದಲ್ಲಿ 2883 ಕೋಟಿ ರೂ. ಅಕ್ರಮ ಗಳಿಕೆ ; 800 ಕೋಟಿ ಕಾಂಗ್ರೆಸ್ ಕಚೇರಿಗೆ?

ಛತ್ತೀಸ್‌ಗಢದ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಮದ್ಯ ಹಗರಣದಲ್ಲಿ 2,883 ಕೋಟಿ ರೂ. ಅಕ್ರಮ ಗಳಿಕೆಯಾಗಿದೆ ಎಂದು ಇ.ಡಿ. ತಿಳಿಸಿದೆ. ಇದರಲ್ಲಿ ಸುಮಾರು 880 ಕೋಟಿ ರೂ. ಹಣವನ್ನು ರಾಯ್ಪುರದ ಕಾಂಗ್ರೆಸ್ ಕಚೇರಿಗೆ ರವಾನಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

Read Full Story

07:04 AM (IST) Oct 13

ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಹಿಂಗಾರು ಮಳೆ ಆರಂಭ - ಯಾವ ಭಾಗದಲ್ಲಿ ಅಧಿಕ ಮಳೆ ?

ರಾಜ್ಯದಲ್ಲಿ ಬರದ ಛಾಯೆ ಇರುವಾಗಲೇ ಅಕ್ಟೋಬರ್ 15ರಿಂದ ಹಿಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಯಾವ ಭಾಗದಲ್ಲಿ ಹಿಂಗಾರು ಮಳೆ ಆಗಲಿದೆ ಎಂಬುದರ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಎಲ್ ನಿನೋ ಪ್ರಭಾವದಿಂದ ಶೇ.12.6ರಷ್ಟು ಮಳೆ ಕೊರತೆಯಾಗಿದೆ.

Read Full Story

More Trending News