ಬೆಂಗಳೂರು: ಒಂದೇ ವಿಳಾಸದಲ್ಲಿ ಹಲವು ಮತದಾರರು ಇದ್ದಾರೆ, ಗುರುತಿನ ಚೀಟಿ ಹೊಂದಿದ್ದಾರೆ, ಒಬ್ಬನೇ ವ್ಯಕ್ತಿ ಹಲವೆಡೆ ಮತ ಹಕ್ಕು ಹೊಂದಿದ್ದಾನೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಅನೇಕ ಆರೋಪಗಳಿಗೆ ಸ್ಥಳೀಯರು ತಿರುಗೇಟು ಕೊಟ್ಟಿದ್ದಾರೆ. ರಿಯಾಲಿಟಿ ಚೆಕ್ ವೇಳೆ ರಾಹುಲ್ ಆರೋಪ ಸುಳ್ಳು ಎಂದು ಹಲವರು ಹೇಳಿದ್ದಾರೆ. ರಾಹುಲ್, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಮತಗಳ್ಳತನದ ಆರೋಪ ಮಾಡಿರುವ ರಾಹುಲ್ ಗಾಂಧಿ ಅವರಿಗೆ ಆಯೋಗದ ಮೇಲೆ ನಂಬಿಕೆ ಇಲ್ಲದಿದ್ದರೆ, ಕನಿಷ್ಠ ನೈತಿಕತೆಯ ಆಧಾರದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದೇ ರೀತಿಯ ಆರೋಪ ಮಾಡಿರುವ ಕರ್ನಾಟಕ ಸಿಎಂ ಕೂಡ ತ್ಯಾಗಪತ್ರ ಸಲ್ಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
12:00 AM (IST) Aug 11
ಭಾರತ ಮತ್ತು ಪಾಕಿಸ್ತಾನ ನೌಕಾಪಡೆಗಳು ಆಗಸ್ಟ್ 11, 2025 ರಂದು ಅರೇಬಿಯನ್ ಸಮುದ್ರದಲ್ಲಿ ಏಕಕಾಲಿಕ ಗುಂಡಿನ ಕವಾಯತು ನಡೆಸಲಿವೆ. ಕೇವಲ 60 ನಾಟಿಕಲ್ ಮೈಲುಗಳ ಅಂತರದಲ್ಲಿ ನಡೆಯುವ ಈ ಕವಾಯತುಗಳು ಜಾಗತಿಕ ಗಮನ ಸೆಳೆದಿವೆ.
07:04 PM (IST) Aug 10
ಸದ್ಯ ಇಡೀ ವಿಶ್ವದ ಕಣ್ಣು ಡೊನಾಲ್ಡ್ ಟ್ರಂಪ್ ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ ಹಾಲಿವುಡ್ ನಟಿ ಎಮ್ಮಾ ಥಾಂಪ್ಸನ್, ಟ್ರಂಪ್ ಅವರ ಡೇಟಿಂಗ್ ವಿಷ್ಯವಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
05:42 PM (IST) Aug 10
04:10 PM (IST) Aug 10
01:42 PM (IST) Aug 10
ನಮ್ಮ ದೇಶದಲ್ಲಿ ಮಕ್ಕಳಿಗೆ ಎದೆಹಾಲು ಉಣಿಸಲು ಎದೆಹಾಲು ಸಿಗದೇ ಎಷ್ಟೋ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿವೆ. ಆದರೆ, ಇಲ್ಲೊಂದು ಕಂಪನಿ ಮಹಿಳೆಯರ ಎದೆ ಹಾಲಿನಿಂದ ಕೆಜಿಗಟ್ಟಲೆ ಐಸ್‌ಕ್ರೀಂ ಅನ್ನು ತಯಾರಿಸಲಾಗಿದೆ ಎಂದು ಹೇಳಿದೆ. ಈ ಐಸ್‌ಕ್ರೀಂ ತಿನ್ನುವುದಕ್ಕೆ ಲಿಮಿಟೆಡ್ ಆಫರ್ ನೀಡಿದೆ.
01:00 PM (IST) Aug 10
ಯೆಮೆನ್‌ನಲ್ಲಿ ಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ದಿನಾಂಕ ಪ್ರಕಟಿಸುವಂತೆ ತಲಾಲ್ ಸೋದರ ಅಟಾರ್ನಿ ಜನರಲ್ ಅವರನ್ನು ಭೇಟಿ ಮಾಡಿದ್ದಾರೆ.
11:59 AM (IST) Aug 10
ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಬೆವ್ಕೊ ಚಿಂತಿಸುತ್ತಿದೆ. ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದ್ದಾರೆ. 23 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮಾರಾಟಕ್ಕೆ ಅವಕಾಶ.
11:46 AM (IST) Aug 10
ಎಲೆಕ್ಟ್ರಾನಿಕ್ಸ್ ಸಿಟಿ: ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್ ಬಳಿ ಸಾರ್ವಜನಿಕರ ಜಮಾವಣೆ. ಪ್ರಧಾನಿ ಮೋದಿ ನೋಡಲು ಕಿಕ್ಕಿರಿದು ಸೇರಿದ ಮಂದಿ.
ಎಲೆಕ್ಟ್ರಾನಿಕ್ ಸಿಟಿ ಸ್ಕೈ ವಾಕ್, ಎಲಿವೇಟೆಡ್ ಟೋಲ್ ರಸ್ತೆ ಬಳಿ ಸೇರಿರುವ ಜನರನ್ನು ಚದುರಿಸುತ್ತಿರುವ ಪೊಲೀಸರು. ಜಿಟಿ ಜಿಟಿ ಮಳೆಯಲ್ಲೂ ಮೋದಿ ಜಪ. ಜಿಟಿ ಜಿಟಿ ಮಳೆಯಲ್ಲಿಯೂ ನಮೋಗೆ ಜೈಕಾರ. ಮೋದಿ ಪ್ಲೆಕ್ಸ್ ಗಳನ್ನು ಹಿಡಿದು ಜೈಕಾರ.
11:41 AM (IST) Aug 10
ವಂದೇ ಭಾರತ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ
11:05 AM (IST) Aug 10
ಆರು ವರ್ಷಗಳ ಹಿಂದೆ ಕೇರಳಕ್ಕೆ ಬಂದ ನಂತರ ನಾಪತ್ತೆಯಾದ ಜರ್ಮನ್ ಮಹಿಳೆಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದರು. ಲೀಸಾ ಇಸ್ಲಾಂಗೆ ಮತಾಂತರಗೊಂಡಿದ್ದರು.