ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ

By Suvarna News  |  First Published Jan 19, 2020, 11:13 AM IST

ಚೀನಾಕ್ಕೆ ಹೋದರೆ ಹಸಿಯಾದ ಮಾಂಸ ತಿನ್ನಬೇಡಿ: ಕೇಂದ್ರ| ಶ್ವಾಸಕೋಶದ ತೊಂದರೆಗೆ ಕಾರಣವಾಗುವ ಕರೋನಾವೈರಸ್‌ 


ನವದೆಹಲಿ[ಜ.19]: ಶ್ವಾಸಕೋಶದ ತೊಂದರೆಗೆ ಕಾರಣವಾಗುವ ಕರೋನಾವೈರಸ್‌ ಎಂಬ ಮಾರಕ ವೈರಾಣು ಚೀನಾದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಚೀನಾಗೆ ತೆರಳುವ ಭಾರತೀಯ ಪ್ರವಾಸಿಗರು ಎಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.

ಹೆಚ್ಚೆಚ್ಚು ಮಕ್ಕಳ ಹಡೆಯಿರಿ ಅಂದ್ರೂ ಇಲ್ಲಿ ಫಲವಿಲ್ಲ, ವೃದ್ಧರ ಸಂಖ್ಯೆ ಹೆಚ್ಚಳ ಭೀತಿ!

Tap to resize

Latest Videos

undefined

ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದ್ದು, ಚೀನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಜಾನುವಾರು ವಧಾ ಸ್ಥಳಕ್ಕೆ ಹೋಗಬೇಡಿ, ಹಸಿ ಹಾಗೂ ಅರೆ ಬೇಯಿಸಿದ ಮಾಂಸ ತಿನ್ನಬೇಡಿ, ಕೆಮ್ಮುವಾಗ ಮುಖ ಮುಚ್ಚಿಕೊಳ್ಳಿ, ನೆಗಡಿ, ಕೆಮ್ಮು ಸಮಸ್ಯೆ ಇದ್ದವರಿಂದ ಅಂತರ ಕಾಯ್ದುಕೊಳ್ಳಿ ಎಂದು ಎಚ್ಚರಿಕೆ ನೀಡಿದೆ.

ಅಲ್ಲದೆ ಮುಖ ಗವಸು ಧರಿಸಿಯೇ ಪ್ರಯಾಣಿಸಿ ಎಂದು ಹೇಳಿದೆ.

29 ವರ್ಷಗಳ ಕನಿಷ್ಠಕ್ಕೆ ಚೀನಾ ಜಿಡಿಪಿ ಕುಸಿತ!

click me!