'ಭಾರತ ಎಂದೆಂದಿಗೂ ಹಿಂದು ರಾಷ್ಟ್ರವಾಗಿಯೇ ಇರಲಿದೆ'

By Suvarna News  |  First Published Oct 11, 2021, 10:03 PM IST

* ಹಿಂದು ರಾಷ್ಟ್ರದ ಪರಿಕಲ್ಪನೆಗೆ ಬಿಜಿಪಿ ಬದ್ಧ
* ಬಿಜೆಪಿ ನಾಯಕ ಸಿಟಿ ರವಿ ಪುನರ್ ಉಚ್ಚಾರ
* ಕಾಲ ಬದಲಾಗಿದೆ..ಈಗ ಎಲ್ಲರೂ ಒಂದಾಗಿದ್ದಾರೆ
* ಚುನಾವಣೆ ಸಂದರ್ಭ ಬಂದಾಗ ಕೆಲವರಿಗೆ ಹಿಂದುಗಳು ನೆನಪಾಗ್ತಾರೆ


ಬೆಂಗಳೂರು(ಅ. 11)  ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಿಂದು ರಾಷ್ಟ್ರ ಪರಿಕಲ್ಪನೆಯನ್ನು ಮತ್ತೊಮ್ಮೆ ಸ್ಪಷ್ಟಮಾಡಿದ್ದಾರೆ. 

ಭಾರತ ಹಿಂದೆಯೂ ಹಿಂದು ರಾಷ್ಟ್ರವಾಗಿತ್ತು.. ಈಗಲೂ ಹಿಂದು ರಾಷ್ಟ್ರವಾಗಿದೆ..ಮುಂದೆಯೂ ಹಿಂದೂ ರಾಷ್ಟ್ರವಾಗಿರಲಿದೆ.   ಈ ಹಿಂದೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು  ಓಲೈಸುತ್ತ ಹಿಂದುಗಳನ್ನು ಒಡೆಯುವ ಕೆಲಸ ಮಾಡಿಕೊಂಡು ಬಂದಿತ್ತು.  ಆದರೆ ಇಂದು ಎಲ್ಲರೂ ಒಂದಾಗಿದ್ದಾರೆ.  ದುರ್ಗಾ ಪೂಜೆ ಮಾಡುತ್ತ ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.  ನೀವು ಹಿಂದು ಎಂದು ಚುನಾವಣೆ ಸಂದರ್ಭ  ಹೇಳಿಕೊಂಡು ತಿರುಗಾಡುವುದಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷ ಟಾಂಗ್ ನೀಡಿದರು.

Latest Videos

undefined

ಆರ್ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಹಿಂದುಗಳೆಲ್ಲ ಒಂದಾಗಿ ತಮ್ಮ ಧರ್ಮದ ಬಗ್ಗೆ ಸಂಪ್ರದಾಯದ ಬಗ್ಗೆ ಹೆಮ್ಮೆಯ ಭಾವನೆ ಬೆಳಸಿಕೊಳ್ಳಬೇಕಿದೆ ಎಂದು ಹೇಳಿದ ಮರುದಿನ ಸಿಟಿ ರವಿಯವರಿಂದ ಇಂಥ ಹೇಳಿಕೆ ಬಂದಿದೆ. 

ಮೋದಿ ಕ್ಷೇತ್ರದಲ್ಲಿ ನಿಂತು ದುರ್ಗಾ ಮಾತೆ ಜಪ ಮಾಡಿದ ಪ್ರಿಯಾಂಕಾ

ಮತಾಂತರ ಯಾತಕ್ಕಾಗಿ ನಡೆಯುತ್ತಿದೆ? ಹಿಂದು ಯುವಕ ಮತ್ತು ಯುವತಿಯರು ಸಣ್ಣ ಸ್ವಾರ್ಥಕ್ಕಾಗಿ ಅನ್ಯ ಧರ್ಮ ಸ್ವೀಕಾರ ಮಾಡುತ್ತಿದ್ದಾರೆಯೇ? ಮದುವೆ ಇದಕ್ಕೆ ಕಾರಣವೇ? ಈ ರೀತಿ ಮಾಡುತ್ತಿರುವುದನ್ನು ತಪ್ಪು ಎಂದೇ ಪರಿಭಾವಿಸಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿಲ್ಲವೇ? ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಧರ್ಮ ಮತ್ತು ಸಂಪ್ರದಾಯದ ಬಗ್ಗೆ ಹೆಮ್ಮೆ ಬೆಳಸಬೇಕಾಗಿದೆ ಎಂದು ಭಾಗವತ್ ಹೇಳಿದ್ದರು.

ಅತ್ತ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಸಹ ಹಿಂದುಗಳನ್ನು ಕೊಂಡಾಡಿದ್ದಾರೆ. ದುರ್ಗಾ ಮಾತೆಯ ಪಠಣ ಮಾಡಿದ್ದಾರೆ.  ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡುತ್ತಲೇ ಇದ್ದಾರೆ.   ದುರ್ಗಾಮಾತೆಯನ್ನು ಕೊಂಡಾಡಿದ ಪ್ರಿಯಾಂಕಾ  ಸಭಿಕರಿಗೆ 'ಜೈ ಮಾತಾ ದೀ' ಘೋಷಣೆ ಕೂಗಲು ಹೇಳಿದ್ದು ಸುದ್ದಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಯಲ್ಲಿ ಮಾತನಾಡಿದ, ನಾನು ಉಪವಾಸ ವ್ರತದಲ್ಲಿ ಇದ್ಧೇನೆ.. ದೇವಿ ಸ್ತುತಿಯೊಂದಿಗೆ ನನ್ನ ಭಾಷಣ ಆರಂಭಿಸುತ್ತಿದ್ದೇನೆ ಎಂದ ಪ್ರಿಯಾಂಕಾ ಉತ್ತರ ಪ್ರದೇಶದ ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಬೇಕಿದೆ ಎಂದಿದ್ದಾರೆ. 

click me!