'ಚಾಕೋಲೆಟ್ ಸಿಪ್ಪೆ ಜೇಬಲ್ಲಿಟ್ಟುಕೊಳ್ಳಿ' ಮೋದಿ ಕರೆ ಹಿಂದಿನ ಉದ್ದೇಶ

By Suvarna NewsFirst Published Oct 2, 2021, 12:40 AM IST
Highlights

* ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಹಂತ
* ತ್ಯಾಜ್ಯ ಬಳಕೆ ಮತ್ತು ನಿರ್ವಹಣೆಗೆ ಮೊದಲ ಆದ್ಯತೆ
*  ಎಲ್ಲ ನಗರಗಳಿಗೂ ಸಮರ್ಪಕ ನೀರು
* ಗುರಿ-ಉದ್ದೇಶ ಸ್ಪಷ್ಟಪಡಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ(ಅ. 02) ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮತ್ತೊಂದು ಕರೆ ಕೊಟ್ಟಿದ್ದಾರೆ. ಭಾರತ ಶೇ. 70 ರಷ್ಟು ತ್ಯಾಜ್ಯವನ್ನು ವಿವಿಧ ಪ್ರಯೋಜನಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು ಇದನ್ನು ನೂರು ಶೇಕಡಾಕ್ಕೆ ಏರಿಸಬೇಕಾಗಿದೆ ಎಂದಿದ್ದಾರೆ.

ದೇಶದ ಪ್ರತಿಯೊಂದು ನಗರಗಳನ್ನು ತ್ಯಾಜ್ಯಮುಕ್ತ ನಗರಗಳನ್ನಾಗಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಮೋದಿ ತಿಳಿಸಿದ್ದಾರೆ. ಸ್ವಚ್ಛ ಭಾರತ್ ಮಿಷನ್-ನಗರ 2.0 ಮತ್ತು ಅಮೃತ್ 2.0 ಯೋಜನೆಗೆ ಚಾಲನೆ ನೀಡಿ  ಮಾತನಾಡಿದ ಪ್ರಧಾನಿ  ಕಸ ಮುಕ್ತ ನಗರಗಳ ಪರಿಕಲ್ಪನೆ ಸಾಕಾರವಾಗಬೇಕಿದೆ.  ನಿರ್ವಹಣೆಗೆ ಮೊದಲ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಕಸವನ್ನು ಕಿಸೆಯಲ್ಲಿ ಇಟ್ಟುಕೊಳ್ಳಿ;  ತಳ ಮಟ್ಟದಿಂದ ಜಾಗೃತಿ ಆರಂಭವಾಗಬೇಕು. ಚಾಕಲೇಟ್ ಕಸವನ್ನು ಬಿಸಾಡುವ ಬದಲು ಕಿಸೆಯಲ್ಲಿ ಇಟ್ಟುಕೊಳ್ಳಿ..  ಇಂತಹ ನಿಯಮ ಪಾಲನೆಯಿಂದಲೇ ಕಸಮುಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ತಿಳಿಸಿದ್ದಾರೆ.

ಕಸ ನಿರ್ವಹಣೆಗೆ ಮೊದಲ ಆದ್ಯತೆ: ದೇಶದಲ್ಲಿ ನಿತ್ಯ 1 ಲಕ್ಷ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು ಅದನ್ನು ನಿರ್ವಹಣೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಕಸಮುಕ್ತ ನಗರವಾಗಿಸುವ ಜೊತೆಗೆ ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನಮ್ಮ ಮುಂದಿನ ಹೆಜ್ಜೆಯಾಗಬೇಕು ಎಂದರು.

ಸಾಂವಿಧಾನಿಕ ಹುದ್ದೆಯಲ್ಲಿ ಎರಡು ದಶಕ.. ಕೇದಾರನಾಥಕ್ಕೆ ಮೋದಿ!

ಸ್ವಚ್ಛ ಭಾರತ ಅಭಿಯಾನದ ಯಶಸ್ಸು ಎಲ್ಲರಿಗೂ ತಿಳಿದಿದೆ. ಎರಡನೇ ಹಂತ ಎಂದು ಭಾವಿಸಿ ದೇಶದ ಎಲ್ಲ ನಗರಗಳನ್ನು ಕಸ ಮುಕ್ತ ನಗರಗಳನ್ನಾಗಿದಬೇಕು ಎಂದು ತಿಳಿಸಿದರು.

ಮುಂದಿನ ಗುರಿ ಸ್ಪಷ್ಟ: ಎಲ್ಲ ನಗರಗಳಿಗೂ ಸಮರ್ಪಕ  ನೀರು ಪೂರೈಕೆ, ಕಸ ನಿರ್ವಹಣೆ, ಒಳಚರಂಡಿ ವ್ಯವಸ್ಥೆ, ಸುರಕ್ಷತೆ ನಮ್ಮ ಮುಂದಿನ ಗುರಿ ಎಂಬುದನ್ನು ಮೋದಿ ಸ್ಪಷ್ಟಪಡಿಸಿದರು.  ಕೇವಲ ಕೇಂದ್ರ ಸರ್ಕಾರದಿಂದ ಎಲ್ಲವೂ ಸಾಧ್ಯ ಎಂದು ಭಾವಿಸಬೇಕಾದ ಅಗತ್ಯ ಇಲ್ಲ.  ರಾಜ್ಯ ಸರ್ಕಾರಗಳು ಕೈಜೋಡಿಸಬೇಕು ಎಂದು ತಿಳಿಸಿದರು.

ಅಮೃತ್ 2.0 ಯೋಜನೆ ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಉದ್ದೇಶ ಹೊಂದಿದೆ. ಸುಮಾರು 2.68 ಕೋಟಿ ನೀರಿನ ಕೊಳಾಯಿ ಸಂಪರ್ಕ ನೀಡಲಾಗುತ್ತಿದೆ. ಶೌಚಾಲಯ ತ್ಯಾಜ್ಯ ಘಟಕ ನಿರ್ವಹಣೆಗೂ ಬದ್ಧರಾಗಬೇಕಿದೆ ಎಂದು ತಿಳಿಸಿದರು.

click me!