* ಕರ್ನಾಟಕ ಒಳಗೊಂಡಂತೆ ಏಳು ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ
* 'ಶಾಹೀನ್' (Cyclone Shaheen) ಚಂಡಮಾರುತದ ಅಬ್ಬರ
* ಭಾರೀ ಮಳೆ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ
ನವದೆಹಲಿ (ಅ. 01) 'ಶಾಹೀನ್' (Cyclone Shaheen) ಚಂಡಮಾರುತ ಏಳು ರಾಜ್ಯಗಳಲ್ಲಿ ಭಾರೀ ಮಳೆ(Rain) ಸುರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ ಒಳಗೊಂಡಂತೆ ಏಳು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಶಾಹೀನ್ ಚಂಡಮಾರುತ ತೀವ್ರವಾಗುವ ನಿರೀಕ್ಷೆಯಿದೆ. ಬಿಹಾರ,ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, (Kerala) ಕರ್ನಾಟಕ (Karnataka) ಹಾಗೂ ಗುಜರಾತ್ ರಾಜ್ಯಗಳಲ್ಲಿ ಮಳೆಯಾಗಲಿದೆ. ಅಕ್ಟೋಬರ್ 1ರ ನಂತರ ಮಳೆ ಪ್ರಮಾಣ ಹೆಚ್ಚಲಿದ್ದು, ಅಕ್ಟೋಬರ್ 4ರವರೆಗೂ ಭಾರೀ ಮಳೆಯಾಗುವ ಸಂಭವವಿದೆ.
undefined
ಸೆಪ್ಟೆಂಬರ್ 26ರಂದು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗುಲಾಬ್' ಚಂಡಮಾರುತ ಆಂಧ್ರ ಪ್ರದೇಶ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ಅತ್ಯಧಿಕ ಮಳೆಗೆ ಕಾರಣವಾಗಿತ್ತು. ಬುಧವಾರದಿಂದ ಗುಲಾಬ್ ಚಂಡಮಾರುತ ದುರ್ಬಲಗೊಂಡು ಅರಬ್ಬೀ ಸಮುದ್ರದಲ್ಲಿ 'ಶಾಹೀನ್' ಚಂಡಮಾರುತದ ಎದ್ದಿದೆ.
ಗುಜರಾತ್ ನಲ್ಲಿ ಚಂಡಮಾರುತ ಅಬ್ಬರ ಹೇಗಿದೆ
ಭಾರತವಲ್ಲದೇ ಪಾಕಿಸ್ತಾನ ಹಾಗೂ ಇರಾನ್ ಸಹ ಚಂಡಮಾರುತದ ಆರ್ಭಟ ಸಹಿಸಿಕೊಳ್ಳಬೇಕು. ಗುಜರಾತ್ ಕರಾವಳಿಯಲ್ಲಿ ಶಾಹೀನ್ ಚಂಡಮಾರುತ ತೀವ್ರವಾಗಲಿದ್ದು, ಇದರ ಪ್ರಭಾವ ಹಲವು ರಾಜ್ಯಗಳಲ್ಲಿ ಗೋಚರಿಸಲಿದೆ.
ಶುಕ್ರವಾರ ಬೆಳಗ್ಗೆ ಶಾಹೀನ್ ಚಂಡಮಾರುತ ಗುಜರಾತ್‌ನ ದ್ವಾರಕದ ಪಶ್ಚಿಮ ವಾಯವ್ಯ ದಿಕ್ಕಿನಿಂದ ಸುಮಾರು 400 ಕಿ.ಮೀ ದೂರದಲ್ಲಿ, ಪಾಕಿಸ್ತಾನದ(Pakistan) ಕರಾಚಿಯಿಂದ 260 ಕಿಮೀ ನೈಋತ್ಯಕ್ಕೆ ಹಾಗೂ ಚಾಬಹಾರ್ ಬಂದರಿನಿಂದ 530 ಕಿ.ಮೀ ಆಗ್ನೇಯದಲ್ಲಿ ಚಲಿಸುತ್ತಿದೆ. ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಒಡಿಶಾ ಪಶ್ಚಿಮ ಬಂಗಾಳದಲ್ಲಿ ಗುಲಾಬ್ ಚಂಡಮಾರುತ ಆರ್ಭಟಿಸಿತ್ತು. ಇದೀಗ ಶಾಹೀನ್ ಚಂಡಮಾರುತದ ಪ್ರಭಾವದಲ್ಲಿ ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ ರಾಜ್ಯಗಳಲ್ಲಿ ಅಕ್ಟೋಬರ್ 1 ಹಾಗೂ 2ರಂದು ಅತ್ಯಧಿಕ ಮಳೆಯಾಗಲಿದೆ.
ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದ್ದು ಸಮುದ್ರಕ್ಕೆ ಇಳಿಯದಂತೆ ತಿಳಿಸಲಾಗಿದೆ. ಪಶ್ಚಿಮ ಬಂಗಾಳ, ಸಿಕ್ಕೀಂ ಸಹ ಆತಂಕಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. 20ಸೆಂಮೀಗೂ ಅಧಿಕ ಮಳೆ ಸಾಧ್ಯತೆ ಇದೆ. ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿಯೂ ಮಳೆಯಾಗಲಿದ್ದು ತಮಿಳುನಾಡಿನಲ್ಲಿಯೂ ಮಳೆ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ October 2 ರಿಂದ 4 ರವರೆಗೆ ಮಳೆ ಸಾಧ್ಯತೆ ಇದೆ.